ವಾಷಿಂಗ್ಟನ್: ಕಾಬೂಲ್ ವಿಮಾನ ನಿಲ್ದಾಣದ ಸುತ್ತ ಶಸ್ತ್ರಸಜ್ಜಿತ ತಾಲಿಬಾನಿಗಳು ರಚಿಸಿರುವ ಚೆಕ್ ಪೋಸ್ಟ್‌ಗಳು ಮತ್ತು ಸ್ಥಳಾಂತರಕ್ಕೆ ಅಗತ್ಯವಾದ ದಾಖಲಾತಿ ಪ್ರಕ್ರಿಯೆಗಳ ಅಡೆತಡೆಗಳಿಂದಾಗಿ ಅಫ್ಗಾನಿಸ್ತಾನದಿಂದ ತನ್ನ ದೇಶದ ನಾಗರಿಕರನ್ನು ಸ್ಥಳಾಂತರಿಸಲು ಅಮೆರಿಕ ಸರ್ಕಾರ ಹರಸಾಹಸ ಪಡುತ್ತಿದೆ.

ಆ. 31ರ ಒಳಗೆ ಅಫ್ಗಾನಿಸ್ತಾನದಿಂದ ಅಮೆರಿಕದ ನಾಗರಿಕರ ತೆರವು ಕಾರ್ಯಾಚರಣೆ ಪೂರ್ಣಗೊಳ್ಳಬೇಕೆಂಬ ಗಡುವು ನಿಗದಿಗೊಳಿಸಲಾಗಿದೆ. ಆದರೆ, ಸ್ಥಳಾಂತರ ಪ್ರಕ್ರಿಯೆಗೆ ಅನುಮತಿ ನೀಡುವುದು ವಿಳಂಬವಾಗುತ್ತಿರುವ ಕಾರಣ, ಇನ್ನೂ ಸಾವಿರಾರು ಮಂದಿ ಅಮೆರಿಕನ್ನರು ಕಾಬೂಲ್ ನಿಲ್ದಾಣದಲ್ಲೇ ಬಾಕಿ ಉಳಿದಿದ್ದಾರೆ.

ನೂರಾರು ಅಫ್ಗಾನಿಸ್ತಾನದ ನಾಗರಿಕರಲ್ಲಿ ಸ್ಥಳಾಂತರಕ್ಕೆ ಅಗತ್ಯವಾದ ದಾಖಲಾತಿಗಳ ಕೊರತೆ ಅಥವಾ ಸ್ಥಳಾಂತರಕ್ಕೆ ಅನುಮತಿ ದೊರೆಯದ ಕಾರಣ, ಅಫ್ಗನ್‌ನಿಂದ ತೆರಳಲು ಸಿದ್ಧರಾಗಿದ್ದ ಸಾವಿರಾರು ಮಂದಿ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಉಳಿಯುವಂತಾಗಿದೆ. ಅಷ್ಟೇ ಅಲ್ಲ, ಎಲ್ಲ ದಾಖಲಾತಿಗಳು ಸಮರ್ಪಕವಾಗಿದ್ದು, ವಿಮಾನ ದೊರೆಯುವ ಭರವಸೆ ಇದ್ದವರಿಗೂ ತಾಲಿಬಾನಿಗಳು ಪ್ರಯಾಣಕ್ಕೆ ಅಡ್ಡಿಯುಂಟು ಮಾಡಿದ್ದರಿಂದ, ತೆರವು ಕಾರ್ಯಾಚರಣೆಗೆ ತೊಂದರೆಯಾಗಿದೆ.

ಇಂಥ ಅವ್ಯವಸ್ಥೆಯ ನಡುವೆ, ಗುರುವಾರ 6 ಸಾವಿರ ಮಂದಿಯನ್ನು ಮಿಲಿಟರಿ ವಿಮಾನಗಳಲ್ಲಿ ಕಾಬೂಲ್‌ನಿಂದ ಸ್ಥಳಾಂತರಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ವಿಮಾನಗಳು ಅಮೆರಿಕಕ್ಕೆ ಬಂದಿಳಿಯಲಿವೆ ಎಂದು ಅಮೆರಿಕ ಸರ್ಕಾರದ ವಕ್ತಾರ ನೆಡ್ ಪ್ರೈಸ್ ಹೇಳಿದರು.

ಇವುಗಳನ್ನೂ ಓದಿ

ಉಟ್ಟ ಬಟ್ಟೆ, ಚಪ್ಪಲಿಯೊಂದಿಗೆ ದೇಶ ತೊರೆದೆ: ಅಫ್ಗನ್ ಅಧ್ಯಕ್ಷ ಘನಿ ವಿಡಿಯೊ ಸಂದೇಶ

ತಾಲಿಬಾನಿಗಳ ಪೈಕಿ ಇಬ್ಬರು ಮಲಯಾಳ ಭಾಷಿಕರು?

ಸರ್ಕಾರ ಸೇರಿ: ಮಹಿಳೆಯರಿಗೆ ಆಹ್ವಾನ ನೀಡಿದ ತಾಲಿಬಾನ್

20 ವರ್ಷಗಳ ಸುದೀರ್ಘ ಹೋರಾಟ; ಅಫ್ಗನ್ನಲ್ಲಿ ಅಮೆರಿಕ ಮಾಡಿದ ಖರ್ಚೆಷ್ಟು?

ಕಾಬೂಲ್ನ ಅಮ್ಯೂಸ್ಮೆಂಟ್ ಪಾರ್ಕ್ಗೆ ನುಗ್ಗಿ ಆಟಿಕೆ ಕಾರಿನಲ್ಲಿ ಆಟವಾಡಿದ ಉಗ್ರರು

ಅಫ್ಗನ್ ಮಹಿಳೆಯರು, ಬಾಲಕಿಯರ ಸುರಕ್ಷತೆ ಬಗ್ಗೆ ಆತಂಕವಾಗಿದೆ: ಮಲಾಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.