ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ ಕುರಿತು ಭದ್ರತಾ ಮಂಡಳಿಯ ಮೌನವೇ ಅಪಾಯಕರ: ಅಮೆರಿಕ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕರೆದ ತುರ್ತು ಸಭೆ
Last Updated 21 ಫೆಬ್ರುವರಿ 2023, 12:44 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಉತ್ತರ ಕೊರಿಯಾದ ಕ್ಷಿಪಣಿ ಉಡಾವಣೆ ನೋಡಿಕೊಂಡು ಭದ್ರತಾ ಮಂಡಳಿಯು ಸುಮ್ಮನಿರುವುದೇ ಅಪಾಯ‘ ಎಂದು ಅಮೆರಿಕವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯವಿಧಾನವನ್ನು ಪ್ರಶ್ನಿಸಿದೆ. ಜತೆಗೆ ‘ಕೆಲವು ಮಂಡಳಿಯನ್ನು ಬಲವಂತವಾಗಿ ಮೌನಕ್ಕೆ ದೂಡಿದ್ದಾರೆ‘ ಎಂದು ಚೀನಾ ಹಾಗೂ ರಷ್ಯಾದ ಹೆಸರು ಪ್ರಸ್ತಾಪಿಸದೆ ಟೀಕಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಂಗಳವಾರ ತುರ್ತು ಸಭೆ ಕರೆದಿತ್ತು. ಅದರಲ್ಲಿ ಅಮೆರಿಕದ ರಾಯಭಾರಿ ಲಿಂಡಾ ಥೋಮಸ್ ಗ್ರೀನ್ಫೀಲ್ಡ್ ಅವರು ’‘ಕಳೆದ ವರ್ಷ ಉತ್ತರ ಕೊರಿಯಾ ಕಾನೂನು ಗಾಳಿಗೆ ತೂರಿ ಡಜನ್‌ಗಟ್ಟಲೆ ಕ್ಷಿಪಣಿ ಉಡಾವಣೆ ನಡೆಸಿದ್ದು, ಲೆಕ್ಕವಿಲ್ಲದಷ್ಟು ಬಾರಿ ನಿಯಮ ಉಲ್ಲಂಘಿಸಿದೆ. ಹಾಗೂ, ಅದು ಏಷ್ಯಾದ ಪೂರ್ವ ತುದಿಯಲ್ಲಿ ಮಿಲಿಟರಿ ರಚನೆಗಳನ್ನು ಸ್ಥಾಪಿಸುತ್ತಿದೆ. ಚೀನಾ ಹಾಗೂ ರಷ್ಯಕ್ಕೆ ಕಳೆದ ವರ್ಷ ಮೇ ತಿಂಗಳಲ್ಲಿ ವಿಟೊ ನೀಡಿದಂತೆ ಉತ್ತರ ಕೊರಿಯಾಕ್ಕೂ ನೀಡಬೇಕು‘‘ ಎಂದರು.

’‘ಇಂಥ ಗಂಭೀರ ವಿಚಾರಕ್ಕೆ ಮೌನ ವಹಿಸುವುದು ಪರಿಸ್ಥಿತಿಗೆ ತಕ್ಕುದಲ್ಲ. ನೋಡಿಕೊಂಡು ಸುಮ್ಮನಿರುವುದು ಉತ್ತರ ಕೊರಿಯಾದ ಚಟುವಟಿಕೆಗಳಿಗೆ ಉತ್ತೇಜನ ಕೊಟ್ಟಂತೆ, ಇದು ಏಷ್ಯಾ ರಾಷ್ಟ್ರಗಳ ಜತೆಗೆ ಇಡೀ ವಿಶ್ವಕ್ಕೇ ಮಾರಕ’’ ಎಂದು ಲಿಂಡಾ ಅಭಿಪ್ರಾಯ ವ್ಯಕ್ತಪಡಿಸಿದರು.

ಅಮೆರಿಕದ ಅಭಿಪ್ರಾಯಕ್ಕೆ ಭದ್ರತಾ ಮಂಡಳಿಯ ಉಳಿದ ಶಾಶ್ವತ ಸದಸ್ಯ ದೇಶಗಳೂ ದನಿಗೂಡಿಸಿದವು. ತುರ್ತು ಸಭೆಯಲ್ಲಿ ಹದಿನೈದು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT