2024ರ ಜೂನ್‌ಗೆ ಮುಕ್ತಾಯಗೊಂಡ ಶೈಕ್ಷಣಿಕ ವರ್ಷದಲ್ಲಿ 1,10,006 ಭಾರತೀಯ ವಿದ್ಯಾರ್ಥಿಗಳಿಗೆ ಪ್ರಾಯೋಜಿತ ಶೈಕ್ಷಣಿಕ ವೀಸಾ ದೊರೆತಿತ್ತು. ಒಟ್ಟಾರೆ ವಿದೇಶಿ ವಿದ್ಯಾರ್ಥಿಗಳ ಪೈಕಿ ಇಂತಹ ವೀಸಾ ಪಡೆದ ಶೇ 25ರಷ್ಟು ಮಂದಿ ಭಾರತದವರೇ ಆಗಿದ್ದಾರೆ. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೆ, ಭಾರತದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 32,687 ಕಡಿಮೆ ಆಗಿದೆ ಎಂದು ಅಂಕಿಅಂಶ ತಿಳಿಸಿದೆ.