ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೋನೇಷ್ಯಾ ಅಧ್ಯಕ್ಷೀಯ ಚುನಾವಣೆ; ಮತದಾನ ಆರಂಭ

Published 14 ಫೆಬ್ರುವರಿ 2024, 2:31 IST
Last Updated 14 ಫೆಬ್ರುವರಿ 2024, 2:31 IST
ಅಕ್ಷರ ಗಾತ್ರ

ಜಕಾರ್ತ: ದುಬಾರಿ ಜೀವನ ವೆಚ್ಚ, ಮಾನವ ಹಕ್ಕುಗಳ ರಕ್ಷಣೆಯ ಸವಾಲುಗಳ ನಡುವೆ ದೇಶಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಇಂಡೋನೇಷ್ಯಾದಲ್ಲಿ ಮತದಾನ ಆರಂಭವಾಗಿದೆ.

ಅಧ್ಯಕ್ಷ ಜೊಕೊ ವಿಡೊಡೊ ಅವಧಿ ಪೂರ್ಣಗೊಂಡಿದ್ದು, ಇಂಡೋನೇಷ್ಯಾದ ಜನ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿದ್ದಾರೆ.

ವಿಶ್ವದ ಅತಿ ದೊಡ್ಡ ಒಂದೇ ದಿನದ ಚುನಾವಣೆಯಲ್ಲಿ ಅಧ್ಯಕ್ಷರು ಮಾತ್ರವಲ್ಲದೆ, ಉಪಾಧ್ಯಕ್ಷರು, ಸಂಸತ್ ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಜನ ಆಯ್ಕೆ ಮಾಡುತ್ತಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.

27 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದು, ಮತದಾನ ಕಡ್ಡಾಯವಲ್ಲ. ಚುನಾವಣೆ ದಿನ ಸಾರ್ವತ್ರಿಕ ರಜೆ ಇದ್ದು, ಪ್ರತಿ ಬಾರಿ ಅತಿ ಹೆಚ್ಚಿನ ಪ್ರಮಾಣದ ಮತದಾನವಾಗುತ್ತದೆ. 2019ರಲ್ಲಿ ಶೇ 81ರಷ್ಟು ಮತದಾನವಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.

575 ಸಂಸತ್ ಸ್ಥಾನಗಳಿರುವ ಇಂಡೋನೇಷ್ಯಾದಲ್ಲಿ 18 ರಾಷ್ಟ್ರೀಯ ಪಕ್ಷಗಳಿವೆ. ಜೊಕೊವಿ ಎಂದೇ ಖ್ಯಾತರಾಗಿರುವ ಅಧ್ಯಕ್ಷ ಜೊಕೊ ವಿಡೊಡೊ 10 ವರ್ಷಗಳ ತಮ್ಮ ಗರಿಷ್ಠ ಅಧಿಕಾರಾವಧಿ ಪೂರೈಸಿದ್ದಾರೆ.

ಈ ಚುನಾವಣೆಯು ದೇಶದಲ್ಲಿ ಹೊಸ ಆಡಳಿತ, ಬದಲಾವಣೆಗೆ ದಾರಿ ಮಾಡಿಕೊಡಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT