ಕುರು (ಫ್ರೆಂಚ್ ಗಯಾನಾ): ವಿಶ್ವದ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ ಎನ್ನಲಾಗಿರುವ ನಾಸಾದ ‘ಜೇಮ್ಸ್ ವೆಬ್’ ದೂರದರ್ಶಕವನ್ನು ಫ್ರೆಂಚ್ ಗಯಾನಾದ ಕುರು ಉಪಗ್ರಹ ಉಡಾವಣಾ ಕೇಂದ್ರದಿಂದ ಶನಿವಾರ ಉಡಾಯಿಸಲಾಯಿತು.

ಇದು ಭೂಮಿಯಿಂದ 15 ಲಕ್ಷ ಕಿ.ಮೀ (9,30,000 ಮೈಲು) ದೂರದ ಕಕ್ಷೆ ಸೇರುವ ಗುರಿ ಹೊಂದಿದೆ. ಈ ದೂರದರ್ಶಕವು ಬಲಿಷ್ಠ ‘ಏರಿಯನ್ 5’ ರಾಕೆಟ್‌ನೊಂದಿಗೆ ಪ್ರಯಾಣ ಬೆಳೆಸಿದ್ದು, ಒಂದು ತಿಂಗಳಲ್ಲಿ ತನ್ನ ಗಮ್ಯ ಸ್ಥಾನ ತಲುಪಲಿದೆ.

ಹಬಲ್ ದೂರದರ್ಶಕಕ್ಕಿಂತ ಹಲವು ಪಟ್ಟು ಶಕ್ತಿಶಾಲಿಯಾಗಿರುವ ಇದು, ವಿಶ್ವ ಹೇಗೆ ಉಗಮವಾಯಿತು ಎಂಬುದನ್ನು ಅರಿತುಕೊಳ್ಳಲು ನೆರವಾಗಲಿದೆ. ನಾವು ಈವರೆಗೆ ನೋಡಿರುವ ಗೆಲಾಕ್ಸಿಗಳಿಗಿಂತಲೂ ಬಹುದೂರವಿರುವ ಗೆಲಾಕ್ಸಿಗಳನ್ನು ಈ ದೂರದರ್ಶಕವು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.