ನ್ಯೂಯಾರ್ಕ್: ಏಳನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯಕ್ಕಾಗಿ ಯೋಗಾಭ್ಯಾಸ ಮಾಡುವುದು ಅವಶ್ಯಕ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ರಾಯಭಾರಿಯಾಗಿರುವ ಟಿ.ಎಸ್. ತಿರುಮೂರ್ತಿ ಅವರು ಒತ್ತಿ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಸೋಮವಾರಮಾತನಾಡಿರುವ ಅವರು,ʼಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆತಂಕ ಮತ್ತು ಖಿನ್ನತೆಯಿಂದಾಗುವ ಒತ್ತಡದಪರಿಣಾಮವನ್ನು ನಿಯಂತ್ರಿಸಲುನೆರವಾಗುವ ಶಕ್ತಿಶಾಲಿ ಸಾಧನವಾಗಿ ಯೋಗ ವಿಶೇಷವಾಗಿ ಹೊರಹೊಮ್ಮಿದೆʼ ಎಂದಿದ್ದಾರೆ.

ಯೋಗವು ವ್ಯಕ್ತಿಯು ತನ್ನೊಂದಿಗೆ ಪ್ರಪಂಚ ಮತ್ತು ಪ್ರಕೃತಿಯಲ್ಲಿನ ಏಕತಾ ಪ್ರಜ್ಞೆಯನ್ನು ಕಂಡುಕೊಳ್ಳಲು ಒಂದು ಅನನ್ಯವಾದ ಮಾರ್ಗವಾಗಿದೆ. ಇದು ಭಾಷೆ, ಧರ್ಮ, ಸಂಸ್ಕೃತಿ ಮತ್ತು ಭೌಗೋಳಿಕ ಅಡೆತಡೆಗಳನ್ನು ಮೀರಿರುವುದಾಗಿದೆ ಎಂದು ವಿವರಿಸಿದ್ದಾರೆ.

ಮುಂದುವರಿದು, ʼಯೋಗದ ಜಾಗತಿಕ ಮನ್ನಣೆಯು ಅದರ ಸಾರ್ವತ್ರಿಕ ಪ್ರಯೋಜನಗಳಲ್ಲಿ ಖಚಿತವಾಗಿ ನೆಲೆಗೊಂಡಿದೆ. ಇದೇ ಕಾರಣಕ್ಕೆ ಜೂನ್21ನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸುವ ನಿರ್ಣಯವನ್ನು ಎಲ್ಲ ಸದಸ್ಯ ರಾಷ್ಟ್ರಗಳು ಸರ್ವಾನುಮತದಿಂದ ಒಪ್ಪಿಕೊಂಡಿವೆʼ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.