ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್‌: ಉಗ್ರನ ಶರಣಾಗತಿ

Last Updated 8 ಜನವರಿ 2015, 19:37 IST
ಅಕ್ಷರ ಗಾತ್ರ

ಪ್ಯಾರಿಸ್‌ (ಎಪಿ): ‘ಚಾರ್ಲಿ ಹೆಬ್ದೊ’ ವಾರಪತ್ರಿಕೆ ಕಚೇರಿ ಮೇಲೆ ದಾಳಿ ಮಾಡಿದವರ ಪೈಕಿ ಒಬ್ಬ ಪೊಲೀಸರಿಗೆ ಶರಣಾಗಿದ್ದು, ಇನ್ನಿಬ್ಬರು ಸಹೋದರ­ರಿಗಾಗಿ ಹುಡುಕಾಟ ನಡೆಯುತ್ತಿದೆ.

ಈ ಇಬ್ಬರು ಗುರುವಾರ ಬೆಳಿಗ್ಗೆ ಉತ್ತರ ಫ್ರಾನ್ಸ್‌ನಲ್ಲಿ ಕಾಣಿಸಿಕೊಂಡಿ­ದ್ದರು.  ಪೆಟ್ರೋಲ್‌ ಬಂಕ್‌ ವ್ಯವಸ್ಥಾ­ಪ­ಕರು  ಇವರನ್ನು ಗುರುತಿಸಿದ್ದಾಗಿ ಮೂಲ­­ಗಳು ತಿಳಿಸಿವೆ. ಇವರಿಬ್ಬರಲ್ಲಿ ಷರೀಫ್‌ ಕವೊಚಿ (32) ಎಂಬಾತನ ವಿರುದ್ಧ ಪೊಲೀಸರು ಬಂಧನ ವಾರಂಟ್‌ ಹೊರಡಿಸಿದ್ದಾರೆ.

ಇರಾಕ್‌ಗೆ  ದಾಳಿಕೋರರನ್ನು ರವಾನೆ ಮಾಡಿದ ಜಾಲದಲ್ಲಿ ಇದ್ದ ಕಾರಣ 2008ರಲ್ಲಿ ಕವೊಚಿ ಶಿಕ್ಷೆಗೆ ಒಳ­ಗಾಗಿದ್ದ. ಈ ಸಹೋದರರು ಪ್ಯಾರಿಸ್‌­ನಲ್ಲಿಯೇ ಹುಟ್ಟಿದವರು.

‘ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇವರು ಅಪಾಯಕಾರಿ ಸಹೋದರರು’ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿ­ದ್ದಾರೆ. ಪೊಲೀಸರಿಗೆ ಶರಣಾದ ದಾಳಿ­ಕೋ­ರನನ್ನು ಮೌರದ್‌ ಹಮೀದ್‌ (18) ಎಂದು ಗುರುತಿಸಲಾಗಿದೆ. ದಾಳಿಕೋರರು ಯೆಮನ್‌ ಉಗ್ರ ಜಾಲದೊಂದಿಗೆ ಸಂಪರ್ಕ ಇಟ್ಟುಕೊಂಡಿ­ದ್ದಾರೆ ಎಂದು ಪೊಲೀಸ್‌  ಅಧಿಕಾರಿ­ಯೊಬ್ಬರು ತಿಳಿಸಿದ್ದಾರೆ.

ಶಂಕಿತರು ವಶಕ್ಕೆ: ಈ ಮಧ್ಯೆ ಪೊಲೀಸರು ದಾಳಿಕೋರರ ಸಂಪರ್ಕದಲ್ಲಿದ್ದಾರೆ ಎನ್ನ­ಲಾದ ಏಳು  ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಲ್ಲಿ ಮಹಿಳೆಯರು ಕೂಡ ಇದ್ದಾರೆ.

ಒಲಾಂಡ್‌ ಭೇಟಿ: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಫ್ರಾನ್ಸ್‌ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌, ವಾರಪತ್ರಿಕೆ  ಕಚೇರಿ ಮೇಲಿನ ದಾಳಿಯನ್ನು ‘ಬರ್ಬರ ಕೃತ್ಯ’ ಎಂದು ಖಂಡಿಸಿದ್ದಾರೆ.  ವಿದೇಶ­ಗಳಲ್ಲಿ ಯುದ್ಧ ತರಬೇತಿ ಪಡೆದ ಜಿಹಾದಿ­ಗಳು ಮನೆಗಳ ಮೇಲೆ ದಾಳಿ ನಡೆಸಬಹುದು ಎನ್ನುವ ಭೀತಿ ಫ್ರಾನ್ಸ್‌ ಹಾಗೂ ಯೂರೋಪ್‌ನಲ್ಲಿ ಮನೆ ಮಾಡಿದೆ.

‘ಯೆಮನ್‌ ಅಲ್‌ ಕೈದಾ ಉಗ್ರರು ದಾಳಿ ನಡೆಸಿದ್ದಾಗಿ ಮಾಧ್ಯಮಗಳಿಗೆ ತಿಳಿಸಿ’ ಎಂದು ದಾಳಿಕೋರರು ಹೇಳಿ­ದ್ದಾಗಿ  ಪ್ರತ್ಯಕ್ಷದರ್ಶಿ ಸೆಡ್ರಿಕ್‌ ಲೆ ಬೆಚೆ ಹೇಳಿದ್ದಾರೆ. ದಾಳಿಕೋರರು ಗುಂಡು ಹಾರಿಸುತ್ತ ‘ಅಲ್ಲಾಹು ಅಕ್ಬರ್’ ಎಂದು ಕೂಗು­ತ್ತಿ­ದ್ದರು. ಅವರು ಫ್ರೆಂಚ್‌ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

*ಫ್ರಾನ್ಸ್‌: ಮಸೀದಿಗಳ ಮೇಲೆ ಗ್ರೆನೇಡ್ ದಾಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT