ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

ನಾರೀಕೇಳಾ

ADVERTISEMENT

ಕವಡೆ ಮತ್ತು ಕೌಶಲ

ಹೊಸ ಹೆಣ್ಣು ಎನ್ನುವವಳು ಅನಾವರಣವೂ ಹೌದು, ಪಲ್ಲಟದ ದೃಷ್ಟಿಯೂ ಹೌದು. ಆದ್ದರಿಂದಲೇ ಈ ‘ಆಗುವಿಕೆ’ಯನ್ನು ಸಾವಯವ ಪ್ರಕ್ರಿಯೆ ಎಂದು ಕರೆಯುವುದು. ಇದೊಂದು ಸೃಷ್ಟಿಕ್ರಿಯೆಯ ಸಂಭ್ರಮದಷ್ಟೇ, ಪೊರೆ ಕಳಚಿಕೊಳ್ಳುವ ಅನಿವಾರ್ಯತೆಯಷ್ಟೇ, ರೂಪಾಂತರದ ಮತ್ತು ಆಯ್ಕೆಯ ದ್ವಂದ್ವದಷ್ಟೇ ಕಷ್ಟದ ಪ್ರಕ್ರಿಯೆಯೂ ಹೌದು. ಹೆಣ್ಣಿನ ಒಳ ಹೊರಗುಗಳೆರಡೂ ಅಪಾರ ತನ್ಮಯತೆಯಲ್ಲಿ ತೊಡಗಿಕೊಳ್ಳಬೇಕಾದ ಈ ಕ್ರಿಯೆ ಅನೇಕ ಬಾರಿ ಹೋಗುತ್ತ ಕೊಯ್ಯುವ ಬರುತ್ತ ಕೊಯ್ಯುವ ಮೂಲಭೂತ ಪಲ್ಲಟದ ನೆಲೆಯದ್ದು.
Last Updated 16 ಜೂನ್ 2018, 9:11 IST
fallback

ಉಯ್ಯಾಲೆಯ ರಾಧೆ : ಪ್ರತಿರೋಧದ ಶಕ್ತ ಮಾದರಿ

ಗಂಡಿನ ಅಪೇಕ್ಷೆಯ ಚೌಕಟ್ಟಿನಲ್ಲಿಯೇ ಹೆಣ್ಣು ಉಳಿಯಬೇಕು ಎನ್ನುವುದನ್ನು ಮೀರಿಕೊಳ್ಳುವುದು ಗಂಡಿಗಾದರೂ, ತನ್ನ ಬದಲಾಗಿದೆ ಎಂದು ತಿಳಿದುಕೊಂಡಿರುವ ದೃಷ್ಟಿಕೋನದಾಚೆಗೂ ಎಷ್ಟು ಕಷ್ಟದ್ದು ಎನ್ನುವುದನ್ನು ಈ ಕಾದಂಬರಿ ಪರಿಶೀಲನೆಗೆ ಒಡ್ಡುತ್ತಿರುವಂತೆಯೂ ಕಾಣಿಸುತ್ತದೆ. ಕಾದಂಬರಿಯುದ್ದಕ್ಕೂ ಅಲ್ಲಲ್ಲಿ ಕಾಣಿಸಿಕೊಳ್ಳುವ ಹಿಂದೂ ಮಹಿಳೆಯ ಕರ್ತವ್ಯ, ಅದರ ಹೆಚ್ಚುಗಾರಿಕೆಯನ್ನು ಕುರಿತ ಮಾತುಗಳು ರಾಧೆಯವು ಎನ್ನುವುದಕ್ಕಿಂತ ಹೆಚ್ಚಾಗಿ ಆಧುನಿಕ ಅಥವಾ ವೈಚಾರಿಕ ಎಂದು ಭ್ರಮಿಸಿಕೊಂಡಿರುವ ಗಂಡಿನ ದ್ವಂದ್ವದ ಮಾತುಗಳ ಹಾಗೆ ಕಾಣಿಸುತ್ತವೆ.
Last Updated 16 ಜೂನ್ 2018, 9:11 IST
fallback

ಸಾಲುಗಳ ನಡುವೆ ಓದಿದರೆ...

ಸಾಲುಗಳ ನಡುವೆ ಓದಿದರೆ...ರುಷ ಮದದ ಬಗೆಗೆ ಹೇಳುತ್ತಿದ್ದೇನೆ. ಇಲ್ಲಿ ಇದರ ಇನ್ನೊಂದು ಮುಖವನ್ನೂ ನಾವು ಗಮನಿಸಬೇಕು. ನಾನು ‘ಸೆಕೆಂಡ್ ಸೆಕ್ಸ್’ ಬರೆಯುವುದಕ್ಕೆ ಪ್ರೇರಣೆ, ಪ್ರೋತ್ಸಾಹ ಕೊಟ್ಟವರಲ್ಲಿ ನೀನೇ ಮೊದಲಿಗ. ನಾನು ಪುಸ್ತಕವನ್ನು ಬರೆದು ಮುಗಿಸಿದಾಗ ನೀನು ಅದರಲ್ಲಿನ ಎಲ್ಲ ವಾದಗಳನ್ನು ಒಪ್ಪಿಕೊಂಡೆ.
Last Updated 16 ಜೂನ್ 2018, 9:11 IST
fallback

ಕಾವ್ಯ: ಬಿಡುಗಡೆಯ ಬಾಗಿಲು

ಟಿಪ್ಪು ಸುಲ್ತಾನನ ಮಂತ್ರಿ ಒಮ್ಮೆ ಹೇಳುತ್ತಾನೆ, ‘‘ಕಾಣುವುದರ ಬಗ್ಗೆ ನನಗೆ ಭಯವಿಲ್ಲ, ಕಾಣದೇ ಇರುವುದರ ಬಗ್ಗೆ ನನಗೆ ಅಪಾರ ಭಯ’’ ಎಂದು. ಈ ಉದ್ಗಾರ ಅವನಿಂದ ಬಂದದ್ದು ಬ್ರಿಟೀಷರ ಒಟ್ಟೂ ಕಾರ್ಯತಂತ್ರವನ್ನು ಕುರಿತಂತೆ. ಮುಖ್ಯವಾಗಿ ಅವರ ಸಾಂಸ್ಕೃತಿಕ ರಾಜಕಾರಣವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು, ಅದಕ್ಕೆ ಪ್ರತಿಕ್ರಿಯಿಸುವುದು ಹೇಗೆ, ಪ್ರತಿರೋಧದ ಮಾರ್ಗಗಳನ್ನು ರೂಪಿಸುವುದು ಹೇಗೆ ಎನ್ನುವ ಪ್ರಶ್ನೆಗಳನ್ನು ಈ ಹೇಳಿಕೆ ಧ್ವನಿಸುತ್ತಿರುವಂತೆ ಕಾಣಿಸುತ್ತದೆ.
Last Updated 16 ಜೂನ್ 2018, 9:11 IST
fallback

ಅವಳ ಕಾವ್ಯ, ಅವಳ ಭಾಷೆ

ಸುಮ್ಮನೆ ಹೀಗೊಂದು ವಿಚಾರವನ್ನು ಮುಂದಿಟ್ಟುಕೊಳ್ಳೋಣ. ಕಾವ್ಯ ಎನ್ನುವುದು ಹೆಣ್ಣು ತನ್ನ ಭಾಷೆಯೊಂದನ್ನು ರಚಿಸಿಕೊಳ್ಳುವ ಪ್ರಯತ್ನವೆ?
Last Updated 16 ಜೂನ್ 2018, 9:11 IST
fallback

ಅರಿವು ಸೋಂಕಿದ ಬಳಿಕ... ಕೃತಜ್ಞತೆಯ ಕಣ್ಣೀರು

ಮಾನವಿಕ ಅಧ್ಯಯನಗಳು ತಮ್ಮ ಹರಹು ಮತ್ತು ಕ್ಷೇತ್ರಗಳನ್ನು ಹಿಂದೆಂದೂ ಇಲ್ಲದ ಬಗೆಯಲ್ಲಿ ವಿಸ್ತರಿಸಿಕೊಳ್ಳುತ್ತಿರುವ ಕಾಲಘಟ್ಟ ಇದು.
Last Updated 16 ಜೂನ್ 2018, 9:11 IST
fallback

ಸ್ತ್ರೀವಾದಿ ವ್ಯಾಖ್ಯಾನ–ಆಖ್ಯಾನದ ‘ಸಖೀಗೀತ’

ಕನ್ನಡದ ಕೆಲವು ಸ್ತ್ರೀಮಾದರಿಗಳ ಜೊತೆಗೆ ಕೆಲವು ಭಾರತೀಯ ಮಾದರಿಗಳನ್ನೂ ಕೆಲವು ಯುರೋಪಿಯನ್ ಮಾದರಿಗಳನ್ನೂ ಚರ್ಚಿಸುವ ನನ್ನ ಇರಾದೆಗೆ ಒಂದು ಸ್ಪಷ್ಟ ಉದ್ದೇಶವಿದೆ. ಹೆಣ್ಣಿನ ಜಾಗತಿಕವೆನ್ನಬಹುದಾದ ಚಹರೆಯನ್ನು ಗುರುತಿಸಬಹುದು ಎನ್ನುವುದು. ಏಳು ಸಮುದ್ರಗಳಾಚೆ, ಏಳು ಬೆಟ್ಟಗಳಾಚೆ ಈಚೆ ಇರುವ ಹೆಣ್ಣು ಒಂದೇ ಅಲ್ಲವೆ ಎನ್ನುವುದನ್ನು ಮತ್ತೊಮ್ಮೆ ಮಗದೊಮ್ಮೆ ಕಂಡುಕೊಳ್ಳುವ ಪ್ರಯತ್ನ ಇದು. ಬಿ.ಎಂ.ಶ್ರೀ ತಮ್ಮ ಇಂಗ್ಲಿಷ್ ಗೀತೆಗಳ ಪ್ರಯೋಗವನ್ನು ಸಮರ್ಥಿಸಿಕೊಳ್ಳುವ ಕವನ ‘ಕಾಣಿಕೆ’ಯಲ್ಲಿ–
Last Updated 16 ಜೂನ್ 2018, 9:11 IST
fallback
ADVERTISEMENT

ಸ್ತ್ರೀವಾದ ಎನ್ನುವ ಲೋಕಮೀಮಾಂಸೆ

ನಾಗರಿಕತೆಯು ಸೃಷ್ಟಿಸಿರುವ ಯಾವುದೇ ತಾತ್ವಿಕತೆಯೂ ಅಂತಿಮವಾಗಿ ಉದ್ದೇಶಿಸಿರುವುದು ಆತ್ಮಗೌರವ, ಸಮಾನಪಾತಳಿ ಮತ್ತು ವಿಕೇಂದ್ರಿಕರಣವನ್ನು ಎಂದು ಸ್ಥೂಲಚೌಕಟ್ಟಿನಲ್ಲಿ ಗುರುತಿಸಲು ಸಾಧ್ಯವಿದೆಯಷ್ಟೆ.
Last Updated 16 ಜೂನ್ 2018, 9:11 IST
fallback

ಭಕ್ತಿ ಎನ್ನುವ ಬಂಡಾಯದ ಆಂಡಾಳ್

ಭಕ್ತಿಗೂ ಹೆಣ್ಣಿಗೂ ಹತ್ತಿರದ ಸಂಬಂಧ. ಭಕ್ತಿ ಕಾವ್ಯವನ್ನು ಕುರಿತು ಚರ್ಚಿಸುವ ಸಂದರ್ಭದಲ್ಲಿ ಎ.ಕೆ. ರಾಮಾನುಜನ್ ಅವರ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ‘‘ಭಕ್ತಿಯೆನ್ನುವುದೇ ಮೂಲತಃ ಹೆಣ್ಣುತನದ ಗುಣ-ಸ್ವಭಾವಗಳನ್ನೆಲ್ಲ ಒಳಗೊಂಡಿದೆ ಎನ್ನುವುದನ್ನು ಮರೆಯಬಾರದು, ಆದ್ದರಿಂದ ಭಕ್ತಿಯು ಸ್ತ್ರೀಲಿಂಗಕ್ಕೆ ಸಮೀಪವಾದುದು’’ ಎಂದು ರಾಮಾನುಜನ್ ಹೇಳುತ್ತಾರೆ.
Last Updated 16 ಜೂನ್ 2018, 9:11 IST
fallback

ಅಭಿನವ ದುರ್ಗೆ!

ರಾಜಕಾರಣ, ಅಧಿಕಾರ ಎಲ್ಲವನ್ನೂ ಹಕ್ಕಿನಿಂದ ಪಡೆದಂತೆ ಕಾಣಿಸುವ ಇಂದಿರಾ ನಿಜದಲ್ಲಿ ಎಲ್ಲ ಸಾರ್ವಜನಿಕ ವ್ಯಕ್ತಿಗಳಷ್ಟೇ ಕಷ್ಟಪಟ್ಟವರು. ರಾಜಕಾರಣಕ್ಕೆ ಬೇಕಾದ ವಿಶ್ವಾಸಾರ್ಹತೆಯನ್ನು ತನ್ನ ವ್ಯಕ್ತಿತ್ವದ ಮೂಲದಿಂದಲೇ ಪಡೆದುಕೊಂಡವರು. ಅದಕ್ಕೆ ಬೇಕಾದ ಎಲ್ಲ ಹೋಮ್ ವರ್ಕ್ ಸರಿಯಾಗಿಯೇ ಮಾಡಿಕೊಂಡಿದ್ದರಿಂದಲೇ ಆ ಮಟ್ಟದ ಯಶಸ್ಸನ್ನು ಪಡೆಯಲು ಅವರಿಗೆ ಸಾಧ್ಯವಾಯಿತು.
Last Updated 16 ಜೂನ್ 2018, 9:11 IST
fallback
ADVERTISEMENT