ಭಾನುವಾರ, ಮಾರ್ಚ್ 29, 2020
19 °C

ಶುಕ್ರವಾರ, 14–1–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಭ್ರಮ ಇಲ್ಲದ ದುಬಾರಿ ಸಂಕ್ರಾಂತಿ

ಬೆಂಗಳೂರು, ಜ.13– ಸುಗ್ಗಿಯ ಸಂಭ್ರಮದ ಸಂಕೇತವಾದ ಸಂಕ್ರಾಂತಿ ನಕ್ಕು ನಲಿದು ಆಚರಿಸಬೇಕಾದ ಸಂಭ್ರಮವನ್ನಂತೂ ತರಲಿಲ್ಲ. ಗಗನಕ್ಕೇರಿರುವ ಬೆಲೆಗಳಿಂದಾಗಿ ಸಂಭ್ರಮವನ್ನೂ ಸಾಂಕೇತಿಕವಾಗಿಯೇ ಆಚರಿಸಬೇಕಾಗಿರುವಂತೆ ಮಾಡಿದೆ.

ಪ್ರತಿದಿನವೂ ವಸ್ತುಗಳ ಧಾರಣೆ ಏರುತ್ತಿರುವುದೇ ಇದಕ್ಕೆ ಕಾರಣ. ಇದರೊಂದಿಗೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯಲ್ಲಿ 15 ರೂಪಾಯಿಗಳ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸಂಕ್ರಾಂತಿಯ ‘ಕೊಡುಗೆ’ ನೀಡಿದೆ.

ಈ ಮಧ್ಯೆ ಸಂಕ್ರಾಂತಿಯ ಸಂಕೇತವಾಗಿ ಪರಸ್ಪರ ವಿನಿಮಯ ಮಾಡಿಕೊಳ್ಳುವ ಎಳ್ಳು–ಬೆಲ್ಲದ ಬೆಲೆ ಬಹುತೇಕ ಹೆಚ್ಚಾಗಿದೆ.

ಬಿಕ್ಕಟ್ಟು ಇತ್ಯರ್ಥಕ್ಕೆ ಗಂಭೀರ ಯತ್ನ: ಭಿನ್ನರಿಗೆ ರಾವ್ ಭರವಸೆ

ನವದೆಹಲಿ, ಜ.13– ತೀವ್ರ ಕುತೂಹಲ ಉಂಟುಮಾಡಿರುವ ಕರ್ನಾಟಕದ ಕಾಂಗೈ ಬಿಕ್ಕಟ್ಟು ಇತ್ಯರ್ಥಪಡಿಸುವ ವಿಷಯವನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ. ಇದು ಈಗಿನ ವಿಧಾನಮಂಡಲದ ಅಧಿವೇಶನಕ್ಕೆ ಮುಂಚೆ ಅಥವಾ ನಂತರವೇ ಆಗಬಹುದು. ಈ ಬಗ್ಗೆ ಆತುರ ಮಾಡಬಾರದು ಎಂದು ಪ್ರಧಾನಿ ಹಾಗೂ ಕಾಂಗೈ ಅಧ್ಯಕ್ಷ 
ಪಿ.ವಿ. ನರಸಿಂಹರಾವ್ ಭರವಸೆ ನೀಡಿರುವುದಾಗಿ ಅವರನ್ನು ಇಂದು ರಾತ್ರಿ ಭೇಟಿ ಮಾಡಿದ ಭಿನ್ನಮತೀಯ ಸಂಸತ್ ಸದಸ್ಯರ ನಿಯೋಗದ ವಕ್ತಾರರು ಹೇಳಿದರು.

ಹುಬ್ಬಳ್ಳಿ ಈದಗಾ: ಧ್ವಜ ಹಾರಿಸಲು ಬಿಜೆಪಿ ಪಣ

ಹುಬ್ಬಳ್ಳಿ, ಜ.13– ಇದೇ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ನಗರದ ಮಧ್ಯ ಭಾಗದಲ್ಲಿರುವ ವಿವಾದಿತ ಈದಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಬಿಜೆಪಿ ಮತ್ತು ರಾಷ್ಟ್ರ ಧ್ವಜ ಸಂರಕ್ಷಣಾ ಸಮಿತಿಯು ಜಂಟಿಯಾಗಿ ನಿರ್ಧರಿಸಿವೆ.

ಇಂದು ಇಲ್ಲಿ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಸ್‌. ಯಡಿಯೂರಪ್ಪ ಮತ್ತು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್‌ ಅವರು ಈ ವಿಷಯ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)