ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಕ್ & ಆವ್ ಕಾರ್ಯಾಚರಣೆಯ 20 ವರ್ಷಗಳ ಬಳಿಕವೂ ಅಮೆರಿಕ ಸೇನೆ ಇರಾಕ್‌ನಲ್ಲಿ ಏಕಿದೆ?

Last Updated 23 ಮಾರ್ಚ್ 2023, 9:17 IST
ಅಕ್ಷರ ಗಾತ್ರ

ಅಮೆರಿಕದ ಸೇನಾಪಡೆಗಳು ಮಾರ್ಚ್ 20, 2003ರಂದು ಇರಾಕ್ ಮೇಲೆ ದಾಳಿ ನಡೆಸಿದವು. ಅದಾಗಿ ಮೂರೇ ವಾರಗಳಲ್ಲಿ ಅಮೆರಿಕದ ಸೇನೆ ಇರಾಕ್ ರಾಜಧಾನಿ ಬಾಗ್ದಾದ್ ನಗರವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಅಮೆರಿಕನ್ ಸೇನೆ ಇನ್ನೂ ಇರಾಕ್‌ನಲ್ಲಿ ಉಳಿದುಕೊಂಡಿರುವುದಕ್ಕೆ ಕಾರಣ ಉಳಿದಿರುವ ಐಸಿಸ್ ಉಗ್ರರ ವಿರುದ್ಧ ಸೆಣಸಲು ಎನ್ನಲಾಗಿತ್ತು.

ಆದರೆ, ಇದರ ಹಿಂದೆ, ಇರಾನ್‌ಗೆ ಸಂಬಂಧಿಸಿದಂತೆ ಒಂದು ಪ್ರಮುಖ ಕಾರಣವೂ ಇದೆ!

ಅಮೆರಿಕದ ಸೇನೆ ಎರಡು ದಶಕಗಳ ಹಿಂದೆ ಶಾಕ್ ಆ್ಯಂಡ್ ಆವ್ ಹೆಸರಿನಲ್ಲಿ ಇರಾಕ್ ಮೇಲೆ ಅತ್ಯಂತ ಪ್ರಬಲವಾದ ದಾಳಿಯನ್ನು ನಡೆಸಿತ್ತು. ಇಂದಿಗೂ ಅಮೆರಿಕದ ಸೇನಾಪಡೆಗಳು ಸಣ್ಣ ಸಂಖ್ಯೆಯಲ್ಲಿ, ಆದರೂ ನಿರಂತರವಾಗಿ ಇರಾಕ್‌ನಲ್ಲಿ ಉಳಿದುಕೊಂಡು, ಮಧ್ಯ ಪೂರ್ವ ರಾಷ್ಟ್ರಗಳ ಜೊತೆ ಮಿಲಿಟರಿ ಮತ್ತು ರಾಜತಾಂತ್ರಿಕ ಸಹಭಾಗಿತ್ವ ಹೊಂದಿವೆ. ಇರಾಕ್‌ನಾದ್ಯಂತ ಅಂದಾಜು 2,500 ಸೈನಿಕರು ಉಪಸ್ಥಿತರಿದ್ದು, ಪ್ರಮುಖವಾಗಿ ಬಾಗ್ದಾದ್ ಮತ್ತು ಉತ್ತರದ ಸೇನಾ ನೆಲೆಗಳಲ್ಲಿವೆ.

ಅಮೆರಿಕದ ಅಧಿಕಾರಿಗಳ ಪ್ರಕಾರ, 2007ರ ಯುದ್ಧದ ಸಂದರ್ಭದಲ್ಲಿ ಇರಾಕ್‌ನಲ್ಲಿ ನೆಲೆಯಾಗಿದ್ದ 1,70,000 ಅಮೆರಿಕದ ಸೈನಿಕರಿಗೆ ಹೋಲಿಸಿದರೆ ಈ ಸಂಖ್ಯೆ ಅತ್ಯಂತ ಕಡಿಮೆಯಾದರೂ, ಇದು ಆ ಪ್ರಾಂತ್ಯದ ಹಿತಾಸಕ್ತಿ ಕಾಪಾಡಲು ಮತ್ತು ಇರಾನಿನ ಪ್ರಭಾವ ಮತ್ತು ಆಯುಧ ಕಳ್ಳ ಸಾಗಾಣಿಕೆ ತಡೆಯಲು ಇಷ್ಟು ಸೈನಿಕರು ಮುಖ್ಯವಾಗುತ್ತಾರೆ.

ಇರಾಕ್ ಮೇಲಿನ ದಾಳಿ ಹೇಗೆ ಆರಂಭವಾಯಿತು?

ಮಾರ್ಚ್ 2003ರಲ್ಲಿ, ಅಮೆರಿಕ ಇರಾಕ್ ಮೇಲೆ ಅಪಾರ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆಸುವ ಮೂಲಕ ತನ್ನ ಆಕ್ರಮಣವನ್ನು ಆರಂಭಿಸಿತು. ಅದರ ಪರಿಣಾಮವಾಗಿ ಇರಾಕ್‌ನಾದ್ಯಂತ ವಿನಾಶ ಸಂಭವಿಸಿತ್ತು. ಇದರ ಪರಿಣಾಮವಾಗಿ ಅಮೆರಿಕದ ಸೇನೆ ಸುಲಭವಾಗಿ ಒಳ ನುಗ್ಗಿ, ಬಾಗ್ದಾದ್ ನಗರವನ್ನು ವಶಪಡಿಸಿಕೊಂಡಿತು. ಈ ದಾಳಿ ಸದ್ದಾಂ ಹುಸೇನ್ ಬಳಿ ಸಮೂಹ ನಾಶಕ ಶಸ್ತ್ರಾಸ್ತ್ರಗಳ ಸಂಗ್ರಹವಿದೆ ಎಂಬ ಕಾರಣ ನೀಡಿ ಆರಂಭವಾಯಿತು. ಆದರೆ, ದಾಳಿಯ ನಂತರ ಆ ಕಾರಣ ನಿಜವಲ್ಲ ಎಂದು ಸಾಬೀತಾಯಿತು. ಯಾವ ಸಮೂಹ ನಾಶಕ ಶಸ್ತ್ರಾಸ್ತ್ರವೂ ಇರಾಕ್‌ನಲ್ಲಿ ಸಿಗಲಿಲ್ಲ.

ಸದ್ದಾಂ ಹುಸೇನ್‌ನನ್ನು ಅಧಿಕಾರದಿಂದ ಕೆಳಗಿಳಿಸಿದಾಗ, ಅಮೆರಿಕ ಅದರ ಪರಿಣಾಮವಾಗಿ ಯುದ್ಧದಲ್ಲಿ ತೊಡಗುವಂತಾಯಿತು. ಯಾಕೆಂದರೆ, ಇರಾಕ್‌ನ ಅಧಿಕಾರ ಅಲ್ಪಸಂಖ್ಯಾತ ಅರಬ್ ಸುನ್ನಿ ಜನಾಂಗದಿಂದ ಬಹುಸಂಖ್ಯಾತ ಶಿಯಾಗಳ ಕೈಗೆ ಹೋಗಿತ್ತು. ಅದರೊಡನೆ, ಕುರ್ದ್ ಜನಾಂಗೀಯರೂ ತಮ್ಮದೇ ಆಡಳಿತದ ಪ್ರದೇಶಗಳನ್ನು ಸ್ಥಾಪಿಸುವಂತಾಯಿತು. ಹಲವು ಇರಾಕಿಗಳು ಸದ್ದಾಂ ಹುಸೇನ್‌ ನನ್ನು ಅಧಿಕಾರದಿಂದ ಕೆಳಗಿಳಿಸಿದ್ದನ್ನು ಧನಾತ್ಮಕ ಬದಲಾವಣೆ ಎಂದುಕೊಂಡು ಸ್ವಾಗತಿಸಿದರೂ, ಅಂತಹ ಆಶಾ ಭಾವನೆ ತಾತ್ಕಾಲಿಕವಾಗಿತ್ತಷ್ಟೇ. ಯಾಕೆಂದರೆ ನಂತರದ ಸರ್ಕಾರಗಳು ಅಗತ್ಯ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿ, ಜನರು ಸಂಕಷ್ಟ ಅನುಭವಿಸುವಂತಾಯಿತು.

ಇರಾಕ್‌ನಲ್ಲಿ ಡಿಸೆಂಬರ್ 2011ರಲ್ಲಿ ಆರಂಭಗೊಂಡ ನಾಗರಿಕ ದಂಗೆಗಳ ಪರಿಣಾಮವಾಗಿ ಅಮೆರಿಕದ ಸೇನೆ ಹಿಂತೆಗೆಯುವಂತಾಯಿತು. ಅದು ಮೂಲತಃ ಶಿಯಾ ಮತ್ತು ಸುನ್ನಿ ಜನಾಂಗಗಳ ನಡುವಿನ ಅಧಿಕಾರದ ಕಲಹವಾಗಿತ್ತು. ಈ ವಿಭಜನೆಯ ಪರಿಣಾಮವಾಗಿ ಇರಾಕಿನ ಪೊಲೀಸ್ ಮತ್ತು ಮಿಲಿಟರಿ ಪಡೆಗಳು ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಎಸ್ಐಎಸ್) ಮುಂದೆ ಕುಸಿದು ಹೋಗುವಂತಾಯಿತು. 2014ರಲ್ಲಿ ಇರಾಕ್ ಮತ್ತು ಸಿರಿಯಾದಾದ್ಯಂತ ಐಸಿಸ್ ಹರಡಿಕೊಂಡಿತು.

ಇರಾಕ್ ನೆಲಕ್ಕೆ ಮತ್ತೆ ಕಾಲಿಟ್ಟ ಅಮೆರಿಕನ್ ಸೇನೆ

2014ರಲ್ಲಿ ಬಾಗ್ದಾದ್ ಸರ್ಕಾರ ಐಸಿಸ್ ಉಪಟಳ ಹೆಚ್ಚಾದಂತೆ ಅಮೆರಿಕ ಸರ್ಕಾರಕ್ಕೆ ಇರಾಕಿಗೆ ಸೇನೆಯನ್ನು ಕಳುಹಿಸುವಂತೆ ಕೋರಿತು. ಐಸಿಸ್ ಮೂಲದಲ್ಲಿ ಅಲ್ - ಖೈದಾ ಸಂಘಟನೆಯ ಸದಸ್ಯರಿದ್ದು, ಐಸಿಸ್ ಅಮೆರಿಕ ಮತ್ತು ಅದರ ಸಹಯೋಗಿ ಯುರೋಪಿಯನ್ ರಾಷ್ಟ್ರಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿತ್ತು. ಬೇಸಿಗೆ ಮತ್ತು ಚಳಿಗಾಲದಲ್ಲಿ ಅಮೆರಿಕ ನೇತೃತ್ವದ ಪಡೆಗಳು ಇರಾಕ್ ಮತ್ತು ಸಿರಿಯಾ ಮೇಲೆ ವಾಯು ದಾಳಿ ಆರಂಭಿಸಿದವು. 2019ರ ಮಾರ್ಚ್ ತಿಂಗಳಲ್ಲಿ ಕಲೀಫತ್ ಮರು ಸ್ಥಾಪಿಸುವ ಐಸಿಸ್ ಉದ್ದೇಶ ವಿಫಲವಾದರೂ, ನ್ಯಾಟೋ ಪಡೆಗಳ 'ತರಬೇತಿ ಮತ್ತು ಸಲಹಾ' ಕಾರ್ಯಾಚರಣೆ ಅಬಾಧಿತವಾಗಿ ಮುಂದುವರೆಯಿತು.

ಇರಾಕ್‌ನಲ್ಲಿ ನೆಲೆಸಿರುವ 2,500 ಅಮೆರಿಕದ ಯೋಧರು ಇರಾಕ್ ಯೋಧರೊಡನೆ ಇದ್ದು, ಅವರಿಗೆ ತರಬೇತಿ ಮತ್ತು ಆಯುಧಗಳನ್ನು ಒದಗಿಸುತ್ತಿದ್ದಾರೆ. ಆದರೆ ಈ ಸೈನಿಕರ ಸಂಖ್ಯೆ ಆಗಾಗ ಬದಲಾಗುವ ಸಾಧ್ಯತೆಗಳೂ ಇದ್ದು, ಪೆಂಟಗನ್ ಇರಾಕ್‌ ಮತ್ತು ಸಿರಿಯಾಗೆ ತೆರಳಿ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸುವ, ಅಮೆರಿಕದ ವಿಶೇಷ ಪಡೆಗಳ ನೈಜ ಸಂಖ್ಯೆಯನ್ನು ಬಹಿರಂಗ ಪಡಿಸುತ್ತಿಲ್ಲ.

ಅಮೆರಿಕದ ಉಪಸ್ಥಿತಿ ಯಾಕೆ ಮುಂದುವರಿದಿದೆ?

ಪ್ರಸ್ತುತ ಅಮೆರಿಕದ ಸೇನೆ ಇರಾಕ್‌ನಲ್ಲಿ ಮುಂದುವರಿದಿರುವುದಕ್ಕೆ ಪ್ರಮುಖ ಕಾರಣವೆಂದರೆ ಅಳಿದುಳಿದ ಐಸಿಸ್ ಉಗ್ರರ ವಿರುದ್ಧ ಸೆಣಸುವುದು ಮತ್ತು ಐಸಿಸ್ ಮತ್ತೆ ಶಕ್ತಿ ಪಡೆಯುವುದನ್ನು ತಡೆಯುವುದಾಗಿದೆ. ಕೆಲವು ಕಾಲ ಅಮೆರಿಕ ಇರಾಕ್ ಮತ್ತು ಇತರ ಭೂಪ್ರದೇಶಗಳ ಮೇಲೆ ಇರಾನ್ ಪ್ರಭಾವ ಬೀರುವ ಕುರಿತು ಚಿಂತೆ ಹೊಂದಿತ್ತು. ಆದರೆ ಅಮೆರಿಕದ ಸೇನೆ ಇರಾಕ್‌ನಲ್ಲಿ ಇರುವಾಗ, ಇರಾನ್ ಇರಾಕ್ ಮತ್ತು ಸಿರಿಯಾ ಮೂಲಕ ಲೆಬೆನಾನ್‌ಗೆ ಆಯುಧಗಳನ್ನು ರವಾನಿಸಿ, ಆ ಮೂಲಕ ಅಲ್ಲಿರುವ ಹೆಜ್ಬುಲ್ಲಾ ಸಂಘಟನೆಗೆ ಅವುಗಳನ್ನು ಇಸ್ರೇಲ್ ವಿರುದ್ಧ ಬಳಸುವಂತೆ ಮಾಡಲು ಕಷ್ಟಕರವಾಗುತ್ತದೆ.

ಆಗ್ನೇಯ ಸಿರಿಯಾದ ಅಲ್ - ತನ್ಫ್ ಪ್ರದೇಶದಲ್ಲಿ ಅಮೆರಿಕ ತನ್ನ ಪಡೆಗಳನ್ನು ನೆಲೆಯಾಗಿಸಿದ್ದು, ಇರಾನ್ ಬೆಂಬಲಿತ ಪಡೆಗಳು ತೆಹರಾನ್ ಮತ್ತು ದಕ್ಷಿಣ ಲೆಬನಾನ್ ನಡುವೆ ಸಂಪರ್ಕ ಸಾಧಿಸಿ, ಇಸ್ರೇಲ್ ತಲುಪದಂತೆ ತಡೆಯುತ್ತಿವೆ. ಅದೇ ರೀತಿ, ಅಮೆರಿಕದ ಸೇನೆ ಸಿರಿಯಾ ಮತ್ತು ಇರಾಕ್‌ಗಳಲ್ಲಿ ಇರುವುದರಿಂದ ಇರಾನ್ ಸುಲಭವಾಗಿ ಪೂರ್ವ ಮೆಡಿಟರೇನಿಯನ್‌ಗೆ ಹಾದಿ ಹೊಂದಲು ಕಷ್ಟಕರವಾಗುವಂತೆ ಮಾಡಿದೆ.

ಇರಾಕ್‌ನಲ್ಲಿ ನೆಲೆಸಿರುವ ಅಮೆರಿಕನ್ ಸೈನಿಕರು ಸಿರಿಯಾದಲ್ಲಿರುವ ಪಡೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಅಮೆರಿಕದ ಪಡೆಗಳು ಸಿರಿಯನ್ ಡೆಮಾಕ್ರಟಿಕ್ ಫೋರ್ಸ್ ಸೈನಿಕರೊಡನೆ ಸಹಯೋಗ ಹೊಂದಿ, ಕುರ್ದ್‌ಗಳ ನೇತೃತ್ವದಲ್ಲಿ ಐಸಿಸ್ ಅಪಾಯದ ವಿರುದ್ಧ ಹೋರಾಡುತ್ತಿವೆ. ಅಮೆರಿಕದ ಸೇನೆ ವಾಯು ದಾಳಿ ನಡೆಸಿ, ಐಸಿಸ್ ನಾಯಕರನ್ನು ಗುರಿಯಾಗಿಸಿ ವಿವಿಧ ಕಾರ್ಯಾಚರಣೆಗಳನ್ನು ಕೈಗೊಳ್ಳುತ್ತಿದೆ. ಬಾಗ್ದಾದ್‌ಗೆ ಇತ್ತೀಚಿನ ಭೇಟಿಯಲ್ಲಿ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಅಮೆರಿಕದ ಸೇನೆ ಇರಾಕ್‌ನಲ್ಲಿ ಮುಂದುವರಿಯಲು ಸಿದ್ಧವಾಗಿದೆ. ಆದರೆ ಅದು ಯುದ್ಧ ಮಾಡಲು ಸಿದ್ಧವಿಲ್ಲ. ಸೇನೆ ಕೇವಲ ಇರಾಕ್ ಸರ್ಕಾರದ ಮನವಿಯ ಮೇರೆಗೆ ಇರಾಕ್‌ನಲ್ಲಿ ಉಳಿದುಕೊಳ್ಳಲಿದೆ ಎಂದಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT