ಭೂಮಿಯ ಬಿಸಿ ಹೆಚ್ಚುತ್ತಿರುವುದರ ಕುರಿತು ವಿಶ್ವದ ವಿವಿಧೆಡೆ ಗಂಭೀರ ಚರ್ಚೆ ನಡೆಯುತ್ತಿರುವಾಗಲೇ, ಬಲಾಢ್ಯ ದೇಶಗಳ ನಾಯಕರು ಹವಾಗುಣ ಬದಲಾವಣೆ ಆಗುತ್ತಿರುವುದೇ ಸುಳ್ಳೆಂದು ಪ್ರತಿಪಾದಿಸುತ್ತಾರೆ. ವಯಸ್ಸಾದವರಿಗೆ ಚಳಿ– ಥಂಡಿ ಬಾಧಿಸುವುದು ಹೆಚ್ಚು, ಅದನ್ನು ಹವಾಗುಣ ಬದಲಾವಣೆ ಎಂದು ಹೇಳಲಾಗುತ್ತದೆಯೇ ಎಂದು ನಮ್ಮ ರಾಜಕೀಯ ಮುಖಂಡರೊಬ್ಬರು ಶಾಲಾ ಮಕ್ಕಳ ಜೊತೆಗಿನ ಚರ್ಚೆಯಲ್ಲಿ ಕೇಳಿದ್ದರು.

ಮಾಗಿ ಕಾಲದ ಇಬ್ಬನಿ ಸುರಿಯುವ ದಿನಗಳಲ್ಲಿ ಮಲೆನಾಡಿನ ಭಾಗದಲ್ಲಿ ನೆಲಜೇಡಗಳು ಗೂಡು ಕಟ್ಟುವುದನ್ನು ಕಾಣಬಹುದು. ಡಿಸೆಂಬರ್ ತಿಂಗಳಿನ ಮುಂಜಾವುಗಳಲ್ಲಿ ಮಂಜು ಮುಸುಕಿ, ಮಲೆನಾಡಿನ ಗುಡ್ಡಗಳು ಸ್ವರ್ಗಸದೃಶ ಸೌಂದರ್ಯದಿಂದ ಕಂಗೊಳಿಸುತ್ತವೆ. ಜೇಡಗಳ ಬಲೆಯಲ್ಲಿ ಮುತ್ತು ಪೋಣಿಸಿದಂತೆ ಇಬ್ಬನಿ ಹನಿಗಳು ಹೊಳೆಯುತ್ತವೆ. ಮೇ– ಜೂನ್ ತಿಂಗಳ ಬಿರುಬೇಸಿಗೆಯಲ್ಲೂ ಮಲೆನಾಡಿನ ಮುಂಜಾವಿನಲ್ಲಿ ಮಂಜು ಮುಸುಕಿದ ವಾತಾವರಣ! ನೆಲಜೇಡದ ಜೈವಿಕ ಗಡಿಯಾರ ದಿಕ್ಕು ತಪ್ಪಿದೆ. ಅದು, ನೆಲದಲ್ಲಿ ಬಲೆ ಹೆಣೆಯುತ್ತಿದೆ. ಪೂರ್ಣಚಂದ್ರನ ಬೆಳದಿಂಗಳಲ್ಲಿ ಹೊಳೆಯುವ ನಕ್ಷತ್ರಗಳು ಸೂರ್ಯೋದಯವಾಗುತ್ತಿದ್ದಂತೆ ಕಾಲು ಕೀಳುತ್ತವೆ. ಪ್ರಖರವಾಗಿ ಹೊಳೆಯುವ ಧ್ರುವ ನಕ್ಷತ್ರ ಮಾತ್ರ ಸೂರ್ಯನ ಆಗಮನದ ನಂತರದಲ್ಲೂ ಕ್ಷೀಣವಾಗಿ ಹೊಳೆಯುತ್ತದೆ. ಮುಂಜಾವಿನ ಐದೂವರೆಗೆ ಹೊಳೆಯುವ ಧ್ರುವ ನಕ್ಷತ್ರ ಕೆಲವೇ ನಿಮಿಷಗಳಲ್ಲಿ ಮರೆಯಾಗುತ್ತದೆ. ಇದಕ್ಕೆ ಕಾರಣ, ಆಗಸದೆತ್ತರಕ್ಕೂ ಮುಸುಕುವ ಮಂಜು. ಇಂತಹ, ಸಾವಿರಾರು ವಿಲಕ್ಷಣ ವಿದ್ಯಮಾನಗಳು ಮಲೆನಾಡಿನಲ್ಲಿ ಘಟಿಸುತ್ತಿವೆ.

ಒಂದೇ ದಿನದಲ್ಲಿ ಮೂರು ಋತುಮಾನಗಳನ್ನೂ ಮಲೆನಾಡಿನಲ್ಲೀಗ ಕಾಣಬಹುದು. ಮುಂಜಾವಿನಲ್ಲಿ ಚಳಿ ಮತ್ತು ಮಂಜು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ ನಾಲ್ಕು ಗಂಟೆಯವರೆಗೆ ಬಿರು ಬಿಸಿಲು. ಸಂಜೆ ಸಿಡಿಲಬ್ಬರದ ಮಳೆ. ಹವಾಗುಣ ಬದಲಾವಣೆ ಪ್ರಕ್ರಿಯೆ ತಾರಕದಲ್ಲಿದೆ ಎಂದು ಪ್ರಕೃತಿ ನೀಡುತ್ತಿರುವ ಎಚ್ಚರಿಕೆಯ ಗಂಟೆ ಇದು ಎಂದು ಯಾರಿಗಾದರೂ ಅರ್ಥವಾಗುತ್ತದೆ.

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ವೆಲ್ಲಿಂಗ್ಟನ್ ಸೌರ ವಿದ್ಯುದಾಗಾರದಲ್ಲಿ ಮೂರು ವರ್ಷಗಳಿಂದ ನಡೆಯುತ್ತಿದ್ದ ಒಂದು ಸಂಶೋಧನೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಹೊಮ್ಮಿದೆ. ಆ ಸಂಶೋಧನೆಯ ಭಾಗವಾಗಿ, 1,700 ಮೆರಿನೋ ಮೇಕೆಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಒಂದು ಮಂದೆಯನ್ನು ಸೌರ ಫಲಕಗಳ ಪರಿಧಿಯಲ್ಲಿ ಬೆಳೆಯುವ ಹುಲ್ಲು ಮತ್ತು ಸಸ್ಯಗಳನ್ನು ಮೇಯಲು ಬಿಡಲಾಯಿತು. ಇನ್ನೊಂದು ಮಂದೆಯನ್ನು ಸೌರ ಫಲಕಗಳ ಕೆಳಗೆ ಮೇಯಿಸಲಾಯಿತು. ಸೌರ ಫಲಕಗಳ ಅಡಿಯಲ್ಲಿ ಮೇಯ್ದ ಕುರಿಗಳ ಉಣ್ಣೆ ಉತ್ತಮ ಗುಣಮಟ್ಟದಿಂದ ಕೂಡಿತ್ತು. ಬಿಸಿಲಿನಲ್ಲಿ ಮೇಯುವ ಮೇಕೆಗಳ ಉಣ್ಣೆಯ ಗುಣಮಟ್ಟ ಕಡಿಮೆಯದಾಗಿತ್ತು ಹಾಗೂ ಗಾಳಿ ಬಂದಾಗ ಏಳುವ ದೂಳು ಸೇರಿಕೊಂಡು ಉಣ್ಣೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತಿತ್ತು.

ಬಿಸಿಲಿನಲ್ಲಿ ಮೇಯುವ ಮೇಕೆಗಳಿಗೆ ಒಂದು ರೀತಿಯ ಪರಾವಲಂಬಿ ಕೀಟಗಳು ತೊಂದರೆ ನೀಡುತ್ತಿದ್ದವು. ನೆರಳಿನಲ್ಲಿ ಮೇಯುವ ಮೇಕೆಗಳಿಗೆ ಇಂತಹ ಸಮಸ್ಯೆಗಳು ಇರಲಿಲ್ಲ. ಸೌರ ಫಲಕಗಳಿಗೆ ಅಡ್ಡಿಯಾಗುವ ಹುಲ್ಲು ಮತ್ತು ಸಸ್ಯಗಳನ್ನು ಕತ್ತರಿಸಲಾಗುತ್ತಿತ್ತು ಮತ್ತು ಕೆಲವು ಬಾರಿ ಕಳೆನಾಶಕಗಳನ್ನು ಬಳಸುವುದು ಅನಿವಾರ್ಯ ಆಗಿತ್ತು. ಮೇಕೆಗಳು ಚೊಕ್ಕಟವಾಗಿ ಹುಲ್ಲು ಮೇಯಲು ತೊಡಗಿದ ಮೇಲೆ ನಿರ್ವಹಣಾ ವೆಚ್ಚ ಗಣನೀಯವಾಗಿ ಕಡಿಮೆಯಾಯಿತು. ಸಂಶೋಧಕರು ಇದಕ್ಕೆ ‘ಅಗ್ರಿವೋಲ್ಟಾಯಿಕ್ಸ್’ ಎಂದು ಕರೆದರು. ಅಭಿವೃದ್ಧಿ ಎನ್ನುವುದು ಪರಿಸರ, ಕೃಷಿ, ಮಾನವ ವಿರೋಧಿ ಎಂಬ ನಿಲುವನ್ನು ತಕ್ಕಮಟ್ಟಿಗೆ ಹೋಗಲಾಡಿಸಲು ‘ಅಗ್ರಿವೋಲ್ಟಾಯಿಕ್ಸ್ ಮಾದರಿ’ ನೆರವಾಗಿದೆಯೆಂದು ವಿಶ್ಲೇಷಿಸಲಾಗುತ್ತಿದೆ.

2020ರಲ್ಲಿ ತಮಿಳುನಾಡಿನ ಪೊತ್ತಾಕುಡಿ ಹಳ್ಳಿಯಲ್ಲಿ ಅಪರೂಪದ ಘಟನೆಯೊಂದು ನಡೆಯಿತು. 35 ಬೀದಿದೀಪಗಳಿಗೆ ಅಳವಡಿಸಲಾದ ಸ್ವಿಚ್ ಬೋರ್ಡಿನಲ್ಲೊಂದು ಚಿಟ್ಟು ಮಡಿವಾಳ ಹಕ್ಕಿಯೊಂದು ಗೂಡು ಕಟ್ಟಿಕೊಂಡಿತು. ಬೀದಿದೀಪ ಬೆಳಗಿಸುವ ಕರ್ತವ್ಯ ನಿರ್ವಹಿಸುತ್ತಿದ್ದ ಕರಪ್ಪು ರಾಜನ ಗಮನಕ್ಕೆ ಹಕ್ಕಿಗೂಡು ಬಂತು. ಚಿಟ್ಟು ಮಡಿವಾಳಕ್ಕೆ ತೊಂದರೆ ಮಾಡಿದರೆ, ಅದು ಗೂಡು ಬಿಟ್ಟು ಹೋಗಬಹುದು ಎಂದು ಅಳುಕಿದ ಆತ, ಆ ಸಂಜೆ ಬೀದಿದೀಪ ಬೆಳಗಿಸಲಿಲ್ಲ.

ಹಳ್ಳಿಯ ವಾಟ್ಸ್ಆ್ಯಪ್ ಗುಂಪಿನಲ್ಲಿ ‘ಸ್ವಿಚ್ ಬೋರ್ಡ್ನಲ್ಲಿ ಹಕ್ಕಿಗಳು ಗೂಡು ಕಟ್ಟಿವೆ. ಅವು ಮೊಟ್ಟೆಯಿಟ್ಟು ಮರಿ ಮಾಡಿ, ಹಾರಿ ಹೋಗುವವರೆಗೂ ಬೀದಿದೀಪಗಳನ್ನು ಬೆಳಗಿಸದಿರಲು ಯೋಚಿಸಿದ್ದೇನೆ. ನಿಮ್ಮಗಳ ಸಹಕಾರವಿದ್ದರೆ ಈ ಕೆಲಸ ಸಾಧ್ಯ’ ಎಂದು ಕರಪ್ಪು ರಾಜ ವಿನಂತಿ ಮಾಡಿಕೊಂಡ. ಹಳ್ಳಿಯ ಹೆಚ್ಚಿನವರು ಬೆಂಬಲ ನೀಡಿದರು. ಒಟ್ಟು 45 ದಿನಗಳ ಕಾಲ 35 ಬೀದಿದೀಪಗಳು ಬೆಳಗಲಿಲ್ಲ. ಮಾನವೀಯತೆಯ ಮೇರುಸದೃಶದ ಮಾದರಿ ಇದು.

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಮುಖ್ಯರಸ್ತೆಯನ್ನು ವಿಸ್ತರಣೆ ಮಾಡಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ನಾಲ್ಕು ದೊಡ್ಡ ಮರಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪಕ್ಷಿಗಳು ಇರುಳಿನಲ್ಲಿ ತಂಗುತ್ತವೆ. ಕಾಗೆ, ಬೆಳ್ಳಕ್ಕಿ, ಗಿಳಿಗಳಿಗೆ ಈ ಮರಗಳು ಆಶ್ರಯ ತಾಣಗಳು. ಶಿವಮೊಗ್ಗ ಮತ್ತು ತೀರ್ಥಹಳ್ಳಿಯ ಪರಿಸರಪ್ರೇಮಿಗಳು ಮರಗಳನ್ನು ಉಳಿಸಿಕೊಳ್ಳಬೇಕು ಎಂದು ಪಣ ತೊಟ್ಟರು. ಆದರೆ, ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಅರಣ್ಯ ಇಲಾಖೆ ಇರಲಿಲ್ಲ; ಹೆದ್ದಾರಿ ಪ್ರಾಧಿಕಾರವೂ ಕಾಳಜಿ ತೋರಲಿಲ್ಲ. ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿತು. ಆದರೆ, ಪರಿಸರಪ್ರೇಮಿಗಳು ಪಟ್ಟು ಬಿಡಲಿಲ್ಲ. ರಾತ್ರೋರಾತ್ರಿ ಹೋರಾಟ ಶುರುವಾಯಿತು. ಅರಣ್ಯ ಇಲಾಖೆಯ ಮುಖ್ಯಸ್ಥರಿಗೆ ಸರಣಿ ಮನವಿಗಳು ಸಲ್ಲಿಕೆಯಾದವು. ಬೆಳಗಾಗುವಷ್ಟರಲ್ಲಿ ಹೋರಾಟಕ್ಕೆ ಗೆಲುವು ದೊರೆತು, ಮರಗಳನ್ನು ಕಡಿಯಲು ನೀಡಿದ ಅನುಮತಿಯನ್ನು ಅರಣ್ಯ ಇಲಾಖೆಯು ಹಿಂದಕ್ಕೆ ತೆಗೆದುಕೊಂಡಿತು.

ವರಾಹಿ, ಶರಾವತಿ, ಕಾಳಿ, ಕಾವೇರಿ ನದಿ ಬಳಸಿಕೊಂಡು ರಾಜ್ಯದಲ್ಲಿ ಆರು ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ರಾಜ್ಯ ಸರ್ಕಾರ ಯೋಜಿಸಿದೆ. ಇದೇ ರೀತಿಯ ಒಟ್ಟು 52 ಯೋಜನೆಗಳನ್ನು ದೇಶದ ವಿವಿಧೆಡೆ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. 2070ರ ಹೊತ್ತಿಗೆ ಭಾರತವು ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸಲು ಬದ್ಧವಾಗಿದೆ ಎಂದು ಘೋಷಿಸಿಕೊಂಡಿದೆ. ಈ ಗುರಿ ತಲುಪಲು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ನಿಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಪಂಪ್ಡ್ ಸ್ಟೋರೇಜ್ ಯೋಜನೆ ಸೂಕ್ತ ಎನ್ನುವುದು ವಿದ್ಯುತ್ ಉತ್ಪಾದಕರ ವಾದ. ಆದರೆ, ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೊಳಿಸುವಾಗ ಸಾವಿರಾರು ಎಕರೆ ಪ್ರಾಥಮಿಕ ಅರಣ್ಯ ನಾಶವಾಗುತ್ತದೆ. ಕಾಡುಗಳು ಈಗಾಗಲೇ ಬಹಳಷ್ಟು ಇಂಗಾಲವನ್ನು ತಮ್ಮ ಒಡಲಲ್ಲಿ ಇರಿಸಿಕೊಂಡಿವೆ. ಇನ್ನೂ ಸಾವಿರಾರು ವರ್ಷಗಳ ಕಾಲ ಇಂಗಾಲವನ್ನು ಹೀರಿಕೊಳ್ಳುವ ಕೆಲಸವನ್ನು ಅವು ಮಾಡುತ್ತವೆ. ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಪರಿಸರಸ್ನೇಹಿ ಎಂದು ಸುಳ್ಳು ಸುಳ್ಳೇ ಬಿಂಬಿಸಲಾಗುತ್ತಿದೆ. ಪಶ್ಚಿಮಘಟ್ಟಗಳಲ್ಲಿ ಅರಣ್ಯ ನಾಶ ಮಾಡಿ, ಬೇರೆಡೆ ಕಾಡು ಬೆಳೆಸುತ್ತೇವೆ ಎನ್ನುವುದೂ ಅತಾರ್ಕಿಕ. ಇಂಥ ಪ್ರಯತ್ನಗಳು ಇದುವರೆಗೂ ಎಲ್ಲೂ ಯಶಸ್ವಿಯಾದ ಉದಾಹರಣೆಗಳಿಲ್ಲ.

ಪಶ್ಚಿಮಘಟ್ಟಗಳಿರಲಿ ಅಥವಾ ಹಿಮಾಲಯವಿರಲಿ, ಅಲ್ಲಿರುವ ಪ್ರತಿ ಮರವೂ ನೈಸರ್ಗಿಕ ಸೇವೆ ನೀಡುವ ಯಂತ್ರದಂತೆ ಕೆಲಸ ಮಾಡುತ್ತದೆ. ಜೀವಿವೈವಿಧ್ಯದ ನೆಲೆಗಳನ್ನು ನಾಶ ಮಾಡುವುದು ಭೂಬಿಸಿಗೆ ನೇರವಾಗಿ ಕಾರಣವಾಗುತ್ತದೆ. ಪಾವಗಡದಲ್ಲಿ ರೈತರ ಕೃಷಿ ಜಮೀನುಗಳನ್ನು ಭೋಗ್ಯಕ್ಕೆ ಪಡೆದು ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಲಾಗಿದೆ. ಇದರ ಬದಲಿಗೆ ಅಗ್ರಿವೋಲ್ಟಾಯಿಕ್ಸ್ ಮಾದರಿಯನ್ನು ಅನುಸರಿಸಬಹುದಿತ್ತು. ಕೇಂದ್ರೀಕೃತ ಸೌರ ವಿದ್ಯುತ್ ಉತ್ಪಾದನೆ ಮಾದರಿಗಿಂತ, ವಿಕೇಂದ್ರೀಕೃತ ಮಾದರಿಯನ್ನು ವ್ಯಾಪಕಗೊಳಿಸಿದಲ್ಲಿ 2070ಕ್ಕೂ ಮೊದಲೇ ನಾವು ಇಂಗಾಲ ಕಕ್ಕುವಿಕೆಯನ್ನು ಶೂನ್ಯಕ್ಕೆ ಇಳಿಸಬಹುದು.

ತಮಿಳುನಾಡಿನ ಪೊತ್ತಾಕುಡಿ ಹಳ್ಳಿಯವರು ಚಿಟ್ಟು ಮಡಿವಾಳ ಉಳಿಸಲು ತೋರಿದ ಕಾಳಜಿ ನಮ್ಮ ಅಧಿಕಾರಸ್ಥರಿಗೂ ಬರಲಿ, ಅಭಿವೃದ್ಧಿಯ ವ್ಯಾಖ್ಯಾನ ಬದಲಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.