ನಾವೆಲ್ಲರೂ ಒಂದಲ್ಲಾ ಒಂದು ಬಗೆಯ ಮುಖವಾಡವನ್ನು ಧರಿಸಿಯೇ ಬದುಕುತ್ತಿದ್ದೇವೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣ ಗಳು ಸಾಕ್ಷ್ಯ ನುಡಿಯುವಂತಿವೆ. ದೀರ್ಘಕಾಲದಿಂದ ನಮಗೆ ಪರಿಚಿತರಾಗಿರುವವರ ಮತ್ತೊಂದು ಮುಖ ಇಲ್ಲಿ ಅನಾವರಣಗೊಂಡಾಗ ಬೆಚ್ಚಿಬೀಳುತ್ತೇವೆ. ಹಾಗೆಯೇ, ಬಹಳಷ್ಟು ಜನ ತಮ್ಮ ನಿಜವಾದ ಮುಖಗಳನ್ನು ಮರೆಮಾಚಿಕೊಂಡು, ಬೇರೆಯವರ ಮುಖ–ಹೆಸರು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಹೀಗೆ ಮುಖರಹಿತವಾಗಿ ವ್ಯವಹರಿಸಲು ಸಾಧ್ಯವಿರುವ ಕಾರಣದಿಂದಾಗಿ, ಸಾಮಾಜಿಕ ಜಾಲತಾಣಗಳು (ಡಿಜಿಟಲ್ ವೇದಿಕೆಗಳು) ಅಪರಾಧ ಮನಃಸ್ಥಿತಿ ಹೊಂದಿರುವವರಿಗೆ ಅನುಕೂಲಕರವಾಗಿ ಪರಿಣಮಿಸಿವೆ.

ಬಹುಪಾಲು ಡಿಜಿಟಲ್ ದಾಳಿಗಳು (ಸೈಬರ್ ಅಪರಾಧಗಳು) ಮುಖರಹಿತವಾಗಿ ನಡೆಯುವುದರಿಂದ, ಅಲ್ಲಿ ಅಪರಾಧಿಗಳನ್ನು ಗುರುತಿಸುವುದೇ ಕಷ್ಟಕರ. ಇನ್ನು ಬಹುತೇಕ ಸಂದರ್ಭಗಳಲ್ಲಿ ಡಿಜಿಟಲ್ ದೌರ್ಜನ್ಯವನ್ನು ವಿರೋಧಿಸಬೇಕೆಂಬ ಅರಿವು ಕೆಲವು ಹೆಣ್ಣುಮಕ್ಕಳಿಗೆ ಇರುವುದೂ ಇಲ್ಲ. ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಅದನ್ನು ಹೇಳಿಕೊಳ್ಳಲಾಗದ ಸಂಕಟವೂ ಹೆಣ್ಣನ್ನು ಬಾಧಿಸುತ್ತದೆ. ಡಿಜಿಟಲ್ ದಾಳಿಗಳಂತಹ ಮಾನಸಿಕ ಅತ್ಯಾಚಾರವನ್ನು ಹೇಳಿಕೊಂಡು ಹಗುರಾಗಲು ಪ್ರಯತ್ನಿಸಿದರೆ, ಸಮಾಜ ಅವಳ ನೈತಿಕತೆಯನ್ನು ಪ್ರಶ್ನಿಸುವ ಸಾಧ್ಯತೆ ಹೆಚ್ಚು. ಹೊರಗಿನ ದೌರ್ಜನ್ಯಗಳಿಗೆ ದೊರೆಯಬಹುದಾದ ಸಹಾನುಭೂತಿಯ ಒಂದಂಶವೂ ಇಲ್ಲಿ ದೊರೆಯದೆ ಹೋಗಬಹುದು.

ಸಂತ್ರಸ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರುವ ಮೂಲಕ ಕಾನೂನಿನ ನೆರವು ಪಡೆಯುವ ಸಾಧ್ಯತೆಯಿದೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ– ‘ನಿರ್ಲಕ್ಷಿಸಿ, ಇಲ್ಲ ನಿರ್ಬಂಧಿಸಿ’ ಎನ್ನುವ ಸಿದ್ಧ ಉತ್ತರ ಪೊಲೀಸರಿಂದ ದೊರೆಯುತ್ತದೆ. ಈ ವೈರುಧ್ಯವೇ ಡಿಜಿಟಲ್ ವೇದಿಕೆಗಳಲ್ಲಿ ದೌರ್ಜನ್ಯ ಎಸಗುವವರ ಭಂಡ ಧೈರ್ಯಕ್ಕೆ ಕಾರಣವಾಗಿದೆ. ಕೆಲವು ಗಟ್ಟಿಗಿತ್ತಿ ಹೆಣ್ಣುಮಕ್ಕಳು ಎಲ್ಲವನ್ನೂ ಎದುರಿಸಿ ನಿಲ್ಲುತ್ತಾರೆ; ಅನ್ಯಾಯವನ್ನು ಪ್ರಶ್ನಿಸಿ ಧ್ವನಿ ಎತ್ತುತ್ತಾರೆ. ಆದರೆ, ಬಹಳಷ್ಟು ಹೆಣ್ಣುಮಕ್ಕಳಿಗೆ ಈ ದಿಟ್ಟತನ ಸಾಧ್ಯವಾಗುವುದಿಲ್ಲ. ಹೊರಗಿನ ಅಭಿವ್ಯಕ್ತಿಗೆ ಅವಕಾಶವಿಲ್ಲದೆ, ಅಂತರಂಗದಲ್ಲಿ ಸೃಷ್ಟಿಯಾಗುವ ಕೋಲಾಹಲದಿಂದ ಕಂಗಾಲಾಗುತ್ತಾರೆ. ಆ ಒಳಗುದಿಯಿಂದ ಹೊರಬರುವ ದಾರಿಗಳನ್ನು ಕಾಣದೆ ಖಿನ್ನತೆಗೆ ಜಾರುತ್ತಾರೆ.

ನಿಂದನೆ, ದೂಷಣೆ, ಬೆದರಿಕೆಗಳಂತಹ ಭಾವನಾತ್ಮಕ ದೌರ್ಜನ್ಯಗಳ ಮೂಲಕ ಹೆಣ್ಣನ್ನು ಅಂಚಿಗೆ ತಳ್ಳಿ, ಆಕೆಯ ದನಿ ಕಸಿಯುವ ರಾಜಕೀಯವನ್ನು ನಮ್ಮ ಸಮಾಜ ಮತ್ತು ಸಂಸ್ಕೃತಿ ಬಹಳ ಕಾಲದಿಂದ ನಡೆಸಿಕೊಂಡು ಬಂದಿದೆ. ಈ ನೆಲೆಯ ಭಾಷಾದೌರ್ಜನ್ಯ ಹೆಣ್ಣುಮಕ್ಕಳಿಗೆ ಹೊಸತಲ್ಲ. ಆದರೆ, ಆ ದೌರ್ಜನ್ಯ ಆಧುನಿಕ ಸಂದರ್ಭದಲ್ಲಿ ಮತ್ತಷ್ಟು ತೀವ್ರಗೊಂಡು, ರೂಪ ಬದಲಿಸಿಕೊಂಡು ದಾಳಿ ನಡೆಸುತ್ತಿದೆ. ಹೆಣ್ಣಿನ ಅಸ್ತಿತ್ವವನ್ನು, ಅವಳ ಘನತೆಯನ್ನು ಗಾಸಿಗೊಳಿಸುವ ಕೌರ್ಯದ ನಡೆಗಳು ಸಾಮಾನ್ಯ ಎನ್ನುವಂತಾಗಿದೆ. ಹೆಣ್ಣುದನಿಯನ್ನು ಹತ್ತಿಕ್ಕುತ್ತಿರುವ ಡಿಜಿಟಲ್ ಹುನ್ನಾರಗಳನ್ನು ಹಿಮ್ಮೆಟ್ಟಿಸುವ ದಾರಿಗಳನ್ನು ತುರ್ತಾಗಿ ಕಂಡು
ಕೊಳ್ಳುವುದು ಹಾಗೂ ಆ ಹುನ್ನಾರಗಳನ್ನು ಎದುರಿಸಿ ನಿಲ್ಲುವುದು ಸದ್ಯದ ತುರ್ತು.

ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ಸುತ್ತಮುತ್ತಲಿನ ತರುಣಿಯರೇ ಡಿಜಿಟಲ್ ದೌರ್ಜನ್ಯಕ್ಕೆ ಒಳಗಾಗಿದ್ದರೂ, ಅದು ಸುಲಭಕ್ಕೆ ನಮ್ಮ ಅರಿವಿಗೆ ಬರುವುದಿಲ್ಲ. ತರಗತಿಗಳನ್ನು ಸದಾ ಬೆರಗುಗಣ್ಣಿನಿಂದ ಎದುರಾಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಇದ್ದಕ್ಕಿದ್ದಂತೆ ಮಂಕಾಗಿ ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡದ್ದನ್ನು ಗಮನಿಸಿರುವೆ. ಆಕೆಯ ಸಮಸ್ಯೆಯ ಅರಿವಾಗುವ ಮೊದಲೇ, ಅದೊಂದು ದಿನ ಆಕೆ ಆತ್ಮಹತ್ಯೆ ಮಾಡಿಕೊಂಡ ಆಘಾತಕರ ಸುದ್ದಿ ಎದುರಾಗಿತ್ತು. ಆ ವಿದ್ಯಾರ್ಥಿನಿ ಅನುಭವಿಸುತ್ತಿದ್ದ ಮಾನಸಿಕ ಸಂಘರ್ಷ ನಂತರದ ದಿನಗಳಲ್ಲಿ ತಿಳಿಯಿತು. ಆಕೆಯನ್ನು ಪ್ರೀತಿಸುವಂತೆ ಯುವಕನೊಬ್ಬ ದುಂಬಾಲು ಬಿದ್ದಿದ್ದ. ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ವ್ರಗ್ಯಗೊಂಡ ಅವನು, ಆ ಹುಡುಗಿಯನ್ನು ನೈತಿಕವಾಗಿ ಕುಗ್ಗಿಸಿ ನರಳುವಂತೆ ಮಾಡುವ ಶಪಥ ತೊಟ್ಟಿದ್ದ. ತಾನು ಪ್ರೀತಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ ಯುವತಿಯ ಫೋಟೊಗಳನ್ನು ವಿಕೃತಗೊಳಿಸಿ, ಅಶ್ಲೀಲ ಪದಗಳನ್ನು ಬಳಸಿ, ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಭಾರತೀಯ ಸಮಾಜದಲ್ಲಿ ಯುವತಿಯೊಬ್ಬಳು ಕಂಗೆಡಲು ಇನ್ನೇನು ಬೇಕು.

ಸುತ್ತಮುತ್ತಲಿನ ಕೊಂಕು, ಅಸಹ್ಯದ ನೋಟಗಳು, ಅನುಕಂಪದ ನಾಟಕೀಯ ಮಾತುಗಳು ಹಾಗೂ ಚಾರಿತ್ರ್ಯದ ಬಗ್ಗೆ ಕೇಳಿಬರುತ್ತಿದ್ದ ಮಾತುಗಳು ಆಕೆಯನ್ನು ಮಾನಸಿಕವಾಗಿ ಕುಗ್ಗಿಸಿದ್ದವು. ಆ ಯುವತಿ
ಯೇನೋ ಸತ್ತುಹೋದಳು. ಆದರೆ, ದುರಂತಕ್ಕೆ ಕಾರಣನಾದ ಯುವಕನಿಗೆ ಸಣ್ಣ ಪಶ್ಚಾತ್ತಾಪವೂ ಇಲ್ಲ. ಕಾನೂನು ವ್ಯವಸ್ಥೆಯ ಕಣ್ಣಿಗೆ ದೈಹಿಕ ದೌರ್ಜನ್ಯ, ದೈಹಿಕ ಹಲ್ಲೆಯಷ್ಟೇ ಅಪರಾಧವಾಗಿ ಕಾಣಿಸುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಡಿಜಿಟಲ್ ದೌರ್ಜನ್ಯದಿಂದ ಉಂಟಾಗುವ ಮಾನಸಿಕ ಆಘಾತ ದೈಹಿಕ ಹಲ್ಲೆಗಿಂತಲೂ ಘೋರವಾಗಿರುತ್ತದೆ; ದೀರ್ಘಕಾಲೀನ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ, ಸಾವು–ನೋವುಗಳಿಗೆ ಕಾರಣವಾಗುತ್ತದೆ.

ಮೊಬೈಲ್ ಫೋನ್ ಈಗ ಎಲ್ಲರ ಬದುಕಿನ ಭಾಗವಾಗಿರುವುದರಿಂದ, ಡಿಜಿಟಲ್ ದೌರ್ಜನ್ಯಗಳೂ ವ್ಯಾಪಕವಾಗಿವೆ. ನಮ್ಮ ಸಮಾಜ ಮಾತ್ರವಲ್ಲ, ಮನೆಗಳು ಕೂಡ ಹೆಣ್ಣುಮಕ್ಕಳಿಗೆ ಸುರಕ್ಷಿತ ತಾಣಗಳೇನಲ್ಲ. ಈ ಅಸುರಕ್ಷತೆಯನ್ನು ಡಿಜಿಟಲ್ ಲೋಕ ಮತ್ತಷ್ಟು ಹೆಚ್ಚಿಸುತ್ತಿದೆ. ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೊ (ಎನ್ಸಿಆರ್ಬಿ) ಬಿಡುಗಡೆ ಮಾಡಿರುವ ವರದಿಗಳನ್ನು ಗಮನಿಸಿದರೆ, ಭಾರತವು ಹೆಣ್ಣುಸಂಕುಲವನ್ನು ಭೀತಗೊಳಿಸುವ, ದಮನಗೊಳಿಸುವ, ನಿರ್ನಾಮಗೊಳಿಸುವ ಕರಾಳ
ಹಾದಿಯಲ್ಲಿ ದಾಪುಗಾಲಿಡುತ್ತಿರುವುದು ಸ್ಪಷ್ಟವಾಗಿಗೋಚರಿಸುತ್ತದೆ. ‘ಎನ್ಸಿಆರ್ಬಿ’ ವರದಿ ಪ್ರಕಾರ,
ಮಹಿಳೆಯರ ಮೇಲಿನ ದೌರ್ಜನ್ಯ 2022ಕ್ಕೆ ಹೋಲಿಸಿದರೆ 2023ರಲ್ಲಿ ಶೇ 4ರಷ್ಟು ಹೆಚ್ಚಾಗಿದೆ. ಕೌಟುಂಬಿಕ ದೌರ್ಜನ್ಯದಡಿಯಲ್ಲಿ ಶೇ 31, ಅಪಹರಣ–ಹಲ್ಲೆ ಶೇ 13.1, ಅತ್ಯಾಚಾರ ಪ್ರಕರಣ
ಗಳು ಶೇ 7ರಷ್ಟಿವೆ. 6,156 ವರದಕ್ಷಿಣೆ ಪ್ರಕರಣಗಳು ದಾಖಲಾಗಿವೆ. ಇವೆಲ್ಲವೂ ದಾಖಲೆಗೆ ಸಿಗುವ ಅಂಕಿಅಂಶಗಳಷ್ಟೇ. ದಾಖಲೇ ಆಗದ ಡಿಜಿಟಲ್ ದೌರ್ಜನ್ಯಗಳನ್ನು ಲೆಕ್ಕ ಇಟ್ಟವರಾರು?

ಡಿಜಿಟಲ್ ದೌರ್ಜನ್ಯವು ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ಹಿಂಸೆಯ ರೂಪವಾಗಿದ್ದು, ಜಾಗತಿಕವಾಗಿ ಎಲ್ಲ ದೇಶಗಳ ಡಿಜಿಟಲ್ ವೇದಿಕೆಗಳು ಹೆಣ್ಣುಮಕ್ಕಳ ಹಿಂಸೆಯ ತಾಣಗಳಾಗುತ್ತಿವೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ; ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸಬೇಕಾದ ವೇದಿಕೆಗಳು ಹುಡುಗಿಯರನ್ನು ಹಿಂಬಾಲಿಸಲು, ಕಿರುಕುಳ ನೀಡಲು ಮತ್ತು ನಿಂದಿಸಲು ಡಿಜಿಟಲ್ ಪರಿಕರಗಳನ್ನು ಹೆಚ್ಚಾಗಿ ಬಳಸುತ್ತಿವೆ ಎಂದೂ ಹೇಳಿದೆ. ಆನ್ಲೈನ್ ವೇದಿಕೆಗಳ ಮೂಲಕ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು, ವೈಯಕ್ತಿಕ ದತ್ತಾಂಶಗಳನ್ನು ದುರ್ಬಳಕೆ ಮಾಡುವುದರ ಮೂಲಕ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿರುವ ವಿಶ್ವಸಂಸ್ಥೆ, ಡೀಪ್ಫೇಕ್ ಚಿತ್ರಗಳನ್ನು ಬಳಸಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಇಡೀ ವಿಶ್ವ ಒಗ್ಗೂಡುವ ಅಗತ್ಯವನ್ನು ಪ್ರತಿಪಾದಿಸಿದೆ.

ಸೈಬರ್ ದೌರ್ಜನ್ಯಗಳಿಂದ ಹೆಣ್ಣುಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ದಾರಿಗಳೂ ಇವೆ. ಆನ್ಲೈನ್ ವೇದಿಕೆಗಳಲ್ಲಿ ಬಹಳ ಎಚ್ಚರಿಕೆಯಂದ ವರ್ತಿಸುವುದು ಬಹಳ ಮುಖ್ಯ. ಸಂಯಮದಿಂದ ಹಾಗೂ ಸ್ವಯಂ ನಿಯಂತ್ರಣದಿಂದ ವ್ಯವಹರಿಸಬೇಕು. ವೈಯಕ್ತಿಕ ಮಾಹಿತಿಗಳ ಸುರಕ್ಷತೆಯ ಬಗೆಗೆ ಜಾಗರೂಕರಾಗಿರಬೇಕು. ಅಪರಾಧಗಳು ಘಟಿಸಿದಾಗ ಸಾಕ್ಷ್ಯಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಹಾಗೂ ಅಪರಾಧ ಕೃತ್ಯಗಳನ್ನು ದಾಖಲಿಸುವುದು ಬಹಳ ಮುಖ್ಯ. ಡಿಜಿಟಲ್ ಸಾಕ್ಷರತೆ ಹಾಗೂ ಜಾಗೃತಿಗೆ, ದೌರ್ಜನ್ಯಗಳನ್ನು ತಡೆಯುವ ನೆಲೆಯಲ್ಲಿ ಮಹತ್ವವಿದೆ.

ಸೈಬರ್ ಅಪರಾಧಗಳ ಹೆಚ್ಚಳಕ್ಕೆ ಪುರುಷ ಅಹಂಕಾರ ಅಥವಾ ಮಹಿಳೆಯರ ಅಸಹಾಯಕತೆ ಪೂರಕವಾಗಿದೆ ಎನ್ನುವುದು ಮೇಲ್ನೋಟದ ಸತ್ಯ. ಆದರೆ, ಕಾನೂನು ಮಾನ್ಯತೆಯ ಕೊರತೆ, ದುರ್ಬಲ ತಾಂತ್ರಿಕ ನಿಯಂತ್ರಣ, ಅಪರಾಧಿಗಳ ಅನಾಮಧೇಯತೆ, ಶಿಕ್ಷೆಯ ಕೊರತೆ, ಲಿಂಗಸೂಕ್ಷ್ಮ ವಿರೋಧಿ ಮನಃಸ್ಥಿತಿ– ಇವೆಲ್ಲವೂ ಡಿಜಿಟಲ್ ದಾಳಿಗಳು ತೀವ್ರ ವೇಗದಲ್ಲಿ ಹೆಚ್ಚಲು ಕಾರಣವಾಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದೆ. ತಂತ್ರಜ್ಞಾನದಿಂದ ಉಂಟಾಗುತ್ತಿರುವ ಲಿಂಗಾಧಾರಿತ ಡಿಜಿಟಲ್ ಹಿಂಸೆಯ ಸ್ವರೂಪವನ್ನು ನಿಭಾಯಿಸಲು ಸೂಕ್ತವಾದ ಕಾನೂನುಗಳನ್ನು ಜಾರಿಗೊಳಿಸುವುದರ ಜೊತೆಗೆ, ಸಾಮಾನ್ಯ ಹೆಣ್ಣುಮಕ್ಕಳಿಗೂ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ. ಡಿಜಿಟಲ್ ಸುರಕ್ಷತಾ ಶಿಕ್ಷಣವನ್ನು ಮತ್ತು ಸಮಾಜದ ವಿವಿಧ ಸ್ತರಗಳನ್ನು ತಲಪುವ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.

ಬದಲಾಗುತ್ತಿರುವ ಸಮಾಜದಲ್ಲಿ ಗಂಡಾಳ್ವಿಕೆಯ ನಿಂದನಾ ಮೌಲ್ಯಗಳಿಗೆ ಜೋತು ಬೀಳದಂತೆ ನಮ್ಮ ಗಂಡುಮಕ್ಕಳನ್ನು ಬೆಳೆಸುವಲ್ಲಿ ಕುಟುಂಬ ಹಾಗೂ ಸಮಾಜದ ಪಾತ್ರ ಮಹತ್ವದ್ದಾಗಿದೆ. ಸಮಾಜ ಮತ್ತು ಸರ್ಕಾರಗಳು ಈ ಬಗೆಯ ದೌರ್ಜನ್ಯಗಳಿಗೆ ಸ್ವಂದಿಸುವ ಮನಃಸ್ಥಿತಿ ರೂಪಿಸಿಕೊಳ್ಳುವುದು ಅಗತ್ಯ. ಇಲ್ಲದೆ ಹೋದರೆ, ಸೈಬರ್ ಕಾಯ್ದೆ ಎಷ್ಟು ಪ್ರಬಲವಾಗಿದ್ದರೂ, ದೂರು ನೀಡಲು ಹೆಣ್ಣುಮಕ್ಕಳೂ ಮುಂದೆ ಬಂದರೂ, ವ್ಯವಸ್ಥೆ ಸೂಕ್ಷ್ಮವಾಗಿ ನಡೆದುಕೊಳ್ಳದ ಹೊರತು ನ್ಯಾಯ ಸಿಗುವುದು ಸಾಧ್ಯವೇ ಇಲ್ಲ.

ವಿಶ್ವಸಂಸ್ಥೆ ನವೆಂಬರ್ 25ರ ದಿನವನ್ನು ಅಂತರರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿವಾರಣಾ ದಿನವನ್ನಾಗಿ ಆಚರಿಸುತ್ತದೆ. ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಡಿಜಿಟಲ್ ದೌರ್ಜನ್ಯವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಒಗ್ಗೂಡಲು ಕರೆ ನೀಡಿದೆ. ಲಿಂಗಾಧಾರಿತ ಹಿಂಸಾಚಾರ ಕೊನೆಗೊಳಿಸುವ ಕರೆ ಯಾವುದೋ ಒಂದು ದಿನಕ್ಕೆ ಸೀಮಿತ ಆಗಬಾರದು. ಅದು, ನಮ್ಮ ಅನುದಿನದ ಎಚ್ಚರ ಆಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.