ಒಂದು ದೂರದ, ಮೊಬೈಲ್ ಸಂಕೇತಗಳು ಸರಿಯಾಗಿ ಸಿಗದ, ಅಥವಾ ಇಲ್ಲವೇ ಇಲ್ಲ ಎನ್ನುವಂತಹ ದುರ್ಗಮ ಹಳ್ಳಿಯೊಂದರಲ್ಲಿ ವಾಸಿಸುವುದನ್ನು ಕಲ್ಪಿಸಿಕೊಳ್ಳಿ. ವೀಡಿಯೋಗಳನ್ನು ನೋಡಲಾಗಲಿ, ಆನ್ಲೈನ್ ತರಗತಿಗಳಲ್ಲಿ ಭಾಗವಹಿಸಲಾಗಲಿ, ಪ್ರೀತಿಪಾತ್ರರೊಡನೆ ಮಾತುಕತೆ ನಡೆಸಲಾಗಲಿ ಅಂತರ್ಜಾಲವೇ ಅಲ್ಲಿ ಲಭ್ಯವಿಲ್ಲ ಎಂದುಕೊಳ್ಳಿ. ಈಗ, ಭೂಮಿಯ ಮೇಲೆ ಹಾರಾಟ ನಡೆಸುತ್ತಾ, ಯಾವುದೇ ಟವರ್ಗಳಾಗಲಿ, ಹೆಚ್ಚುವರಿ ಉಪಕರಣಗಳ ಅವಶ್ಯಕತೆಯೇ ಇಲ್ಲದೆ ನೇರವಾಗಿ ನಿಮ್ಮ ಮೊಬೈಲ್ ಫೋನ್ಗಳಿಗೆ ಬಲವಾದ ಅಂತರ್ಜಾಲ ಸೇವೆಯನ್ನು ಒದಗಿಸುವ ಬೃಹತ್ ಉಪಗ್ರಹವೊಂದನ್ನು ಊಹಿಸಿ. ಇದು ಮೇಲ್ನೋಟಕ್ಕೆ ಒಂದು ಇಂದ್ರಜಾಲದಂತೆ ಭಾಸವಾಗುತ್ತದಲ್ಲವೇ? ಆದರೆ, ವಾಸ್ತವವಾಗಿ ಡಿಸೆಂಬರ್ 15ರಂದು ಇದೇ ಮ್ಯಾಜಿಕ್ ನಿಜವಾಗಿಯೂ ನಡೆಯಲಿದೆ. ಭಾರತದ ಶಕ್ತಿಶಾಲಿಯಾದ, ಪ್ರೀತಿಯಿಂದ ಬಾಹುಬಲಿ ಎಂದೇ ಕರೆಸಿಕೊಳ್ಳುವ ಎಲ್ವಿಎಂ3 ರಾಕೆಟ್ ಬ್ಲೂಬರ್ಡ್-6 ಎಂಬ ಹೆಸರಿನ ಅಮೆರಿಕನ್ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆಗೊಳಿಸಲಿದೆ. ಇದೊಂದು ಹತ್ತರಲ್ಲಿ ಹನ್ನೊಂದು ಎನ್ನುವಂತಹ ಉಪಗ್ರಹವಲ್ಲ! ಇದು 6.5 ಟನ್ ಭಾರೀ ತೂಕ ಹೊಂದಿದ್ದು, ಬಹುತೇಕ ಪೂರ್ಣವಾಗಿ ಬೆಳೆದ ಆನೆಯ ತೂಕಕ್ಕೆ ಸಮನಾಗಿದೆ. ಇದು ಭಾರತ ಇಲ್ಲಿಯತನಕ ಉಡಾಯಿಸಿರುವ ಅಮೆರಿಕದ ಅತ್ಯಂತ ತೂಕದ ಉಪಗ್ರಹ ಎನಿಸಲಿದೆ. ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತ ಮತ್ತು ಅಮೆರಿಕಗಳು ಪರಸ್ಪರ ಸಹಕಾರ ನೀಡುವುದರಲ್ಲಿ ಇದೊಂದು ಹೆಮ್ಮೆಯ ಕ್ಷಣವಾಗಿದೆ.

ಬ್ಲೂಬರ್ಡ್-6 ಉಪಗ್ರಹ ಎಎಸ್ಟಿ ಸ್ಪೇಸ್ ಮೊಬೈಲ್ ಎಂಬ ಟೆಕ್ಸಾಸ್ ಮೂಕದ ಕಂಪನಿಯ ಅದ್ಭುತ ಆಲೋಚನೆಯ ಸಾಕಾರವಾಗಿದೆ. ಈ ಸಂಸ್ಥೆ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜಾಲವೊಂದನ್ನು ನಿರ್ಮಿಸಿ, ಆ ಮೂಲಕ ಭೂಮಿಯ ಎಲ್ಲ ಮೂಲೆಗಳಿಗೆ, ಅದರಲ್ಲೂ ಮೊಬೈಲ್ ಟವರ್ಗಳನ್ನು ನಿರ್ಮಿಸುವುದು ಅಸಾಧ್ಯವಾದ, ಅಥವಾ ಅತ್ಯಂತ ದುಬಾರಿ ಎನಿಸುವ ದುರ್ಗಮ ಪ್ರದೇಶಗಳಿಗೆ ಅತ್ಯಂತ ವೇಗದ ಅಂತರ್ಜಾಲ ಸೇವೆಯನ್ನು ಒದಗಿಸುವ ಗುರಿ ಹೊಂದಿದೆ. ದಟ್ಟ ಕಾಡುಗಳು, ದುರ್ಗಮ ಪರ್ವತಗಳು, ಮರುಭೂಮಿಗಳು, ಅಥವಾ ದೂರದ ದ್ವೀಪಗಳೆಲ್ಲವೂ ಕೊನೆಗೂ ನಿರಂತರ ಸಂಪರ್ಕ ಸೇವೆಯನ್ನು ಹೊಂದಲು ಸಾಧ್ಯವಿದೆ. ಬ್ಲೂಬರ್ಡ್-6 ಉಪಗ್ರಹವನ್ನು ನಿಜಕ್ಕೂ ವಿಶೇಷವಾಗಿಸಿರುವುದು ಇದರ ಆಂಟೆನಾ. ಇದು ಭೂಮಿಯ ಕೆಳಕಕ್ಷೆಗೆ ತೆರಳಿರುವ ಅತಿದೊಡ್ಡ ವಾಣಿಜ್ಯಿಕ ಆಂಟೆನಾ ಆಗಿದೆ. ಇದು ಬಾಹ್ಯಾಕಾಶದಲ್ಲಿ ತೆರೆಯಲ್ಪಟ್ಟಾಗ, ಆಂಟೆನಾ ಬಹುತೇಕ 2,400 ಚದರ ಅಡಿಗಳಷ್ಟು ಪ್ರದೇಶವನ್ನು ವ್ಯಾಪಿಸಲಿದೆ. ಅಂದರೆ, ಇದು ಒಂದು ಸಾಧಾರಣ ಗಾತ್ರದ ಮನೆಯಷ್ಟು, ಅಥವಾ ಬಾಸ್ಕೆಟ್ ಬಾಲ್ ಮೈದಾನಷ್ಟು ದೊಡ್ಡದಾಗಿರಲಿದೆ. ಇದು ಒಂದು ಬೃಹತ್ ಕೊಡೆಯ ರೀತಿಯಲ್ಲಿ ತೆರೆಯಲಿದ್ದು, ಬಾಹ್ಯಾಕಾಶ ಮತ್ತು ನಿಮ್ಮ ಮೊಬೈಲ್ಗಳ ನಡುವೆ ಸಂಕೇತವನ್ನು ಸೆರೆಹಿಡಿದು ರವಾನಿಸಲು ಸಿದ್ಧವಾಗಿರಲಿದೆ.

ಈ ಉಪಗ್ರಹ ತನ್ನ ಹಿಂದಿನ ತಲೆಮಾರಿನ ಉಪಗ್ರಹಗಳಿಂದ ಅತ್ಯಂತ ಮೇಲ್ದರ್ಜೆಯಲ್ಲಿದೆ. ಎಎಸ್ಟಿ ಸ್ಪೇಸ್ ಮೊಬೈಲ್ ಈಗಾಗಲೇ ಐದು ಸಣ್ಣ ಗಾತ್ರದ ಬ್ಲೂಬರ್ಡ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಆದರೆ, ಬ್ಲೂಬರ್ಡ್-6 ಹೊಸದಾದ, ಸುಧಾರಿತವಾದ ʼಬ್ಲಾಕ್-2ʼ ಆವೃತ್ತಿಯ ಮೊದಲ ಉಪಗ್ರಹವಾಗಿದೆ. ಇದು ಹಿಂದಿನ ತಲೆಮಾರಿನ ಉಪಗ್ರಹಗಳಿಗೆ ಹೋಲಿಸಿದರೆ 3.5 ಪಟ್ಟು ದೊಡ್ಡದಾಗಿದ್ದು, ಹತ್ತು ಪಟ್ಟು ಹೆಚ್ಚಿನ ಮಾಹಿತಿಯನ್ನು ನಿರ್ವಹಿಸಬಲ್ಲದು. ಪ್ರತಿಯೊಂದು ಬ್ಲೂಬರ್ಡ್ ಉಪಗ್ರಹವೂ 10,000 ಮೆಗಾ ಹರ್ಟ್ಜ್ ತನಕ ಬ್ಯಾಂಡ್ವಿಡ್ತ್ ಹೊಂದಿವೆ. ಅಂದರೆ, ಇದು ಸಾವಿರಾರು ದೂರವಾಣಿ ಕರೆಗಳು, ವೀಡಿಯೋ ವೀಕ್ಷಣೆ, ಮತ್ತು ನಿರಂತರ ಡೌನ್ಲೋಡ್ಗಳನ್ನು ಬೆಂಬಲಿಸುವ ಅತ್ಯಂತ ವೇಗದ ಅಂತರ್ಜಾಲ ಸೇವೆಯನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದರ ಮಹತ್ವದ ಅಂಶವೆಂದರೆ, ಬ್ಲೂಬರ್ಡ್ ಸೇವೆ ಈಗಾಗಲೇ ಇರುವ ಮೊಬೈಲ್ ಜಾಲದೊಡನೆ ಕಾರ್ಯಾಚರಿಸುತ್ತದೆ. ವೊಡಾಫೋನ್, ಎಟಿ&ಟಿ ಅಥವಾ ಏರ್ಟೆಲ್ ನಂತಹ ಸಂಸ್ಥೆಗಳು ಎಎಸ್ಟಿ ಸ್ಪೇಸ್ ಮೊಬೈಲ್ ಜೊತೆ ಸಹಯೋಗ ಹೊಂದಿ, ತಮ್ಮ ಪರವಾನಗಿ ಹೊಂದಿರುವ ರೇಡಿಯೋ ಸಂಕೇತಗಳನ್ನು ಹಂಚಿಕೊಳ್ಳುತ್ತವೆ. ಇದರ ಪರಿಣಾಮವಾಗಿ, ನೀವು ಯಾವುದೇ ಮೊಬೈಲ್ ಸಂಕೇತಗಳಿಲ್ಲದ ಜಾಗದಲ್ಲಿದ್ದರೂ, ಬ್ಲೂಬರ್ಡ್ ಉಪಗ್ರಹಗಳು ಆಕಶದಲ್ಲಿರುವ, ಕಣ್ಣಿಗೆ ಕಾಣಿಸದ ಟವರ್ಗಳಂತೆ ಕಾರ್ಯಾಚರಿಸಿ, ಈ ನೆಟ್ವರ್ಕ್ ಅಂತರವನ್ನು ತುಂಬುತ್ತವೆ.

ಆದರೆ ಸದ್ಯದಮಟ್ಟಿಗೆ ಈ ಸೇವೆ ಎಲ್ಲೆಡೆಯೂ ನಿರಂತರವಾಗಿ ಲಭಿಸಲು ಸಾಧ್ಯವಿಲ್ಲ. ಈಗ ಒಂದು ಬಸ್ ತನ್ನ ಮಾರ್ಗದಲ್ಲಿ ಸಾಗುವ ರೀತಿಯಲ್ಲಿ ಉಪಗ್ರಹ ನಿಮ್ಮ ಪ್ರದೇಶದ ಮೇಲಿನಿಂದ ಹಾದುಹೋಗುವಾಗ ಮಾತ್ರ ನಿಮಗೆ ಸಂಕೇತಗಳು ಸಿಗಲು ಸಾಧ್ಯ. ಆದರೆ, ಎಎಸ್ಟಿ ಸ್ಪೇಸ್ ಮೊಬೈಲ್ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದೆ. 2026ರ ಆರಂಭದಲ್ಲೇ ಇಂತಹ ಆರು ಬೃಹತ್ ಉಪಗ್ರಹಗಳನ್ನು ಉಡಾವಣೆಗೊಳಿಸುವುದು ಎಎಸ್ಟಿ ಸ್ಪೇಸ್ ಮೊಬೈಲ್ ಗುರಿಯಾಗಿದ್ದು, ಪ್ರತಿ ತಿಂಗಳು, ಅಥವಾ ಎರಡು ತಿಂಗಳಿಗೆ ಒಂದು ಬಾರಿಯಂತೆ ಉಡಾವಣೆ ನಡೆಸುತ್ತಾ, ವರ್ಷಾಂತ್ಯದ ವೇಳೆಗೆ 45ರಿಂದ 60 ಉಪಗ್ರಹಗಳನ್ನು ಉಡಾವಣೆಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಉಪಗ್ರಹಗಳ ಸಂಖ್ಯೆ ಹೆಚ್ಚಾದಂತೆ ಉತ್ತಮ, ನಂಬಿಕಾರ್ಹ ಕಾರ್ಯವ್ಯಾಪ್ತಿ ಸಿಗಲಿದ್ದು, ಅಪರೂಪಕ್ಕೊಮ್ಮೆ ಸಿಗುವ ಮೊಬೈಲ್ ಸಂಕೇತಗಳು ನಿರಂತರವಾಗಿ ಲಭಿಸಲಿವೆ. ಇದು ದುರ್ಗಮ ಪ್ರದೇಶಗಳಲ್ಲಿ, ಸೌಲಭ್ಯ ವಂಚಿತ ಹಳ್ಳಿಗಳಲ್ಲಿ ವಾಸಿಸುವ ಲಕ್ಷಾಂತರ ಜನರ ಜೀವನವನ್ನೇ ಬದಲಿಸಲಿದೆ. ಇದು ಡಿಜಿಟಲ್ ಅಂತರವನ್ನು ತಗ್ಗಿಸಿ, ನಮಗೆ ಅತ್ಯಂತ ಸಹಜವಾಗಿರುವ ಅವಕಾಶಗಳನ್ನು ಅವರಿಗೆ ಹೊಸದಾಗಿ ನೀಡಲಿದೆ.

ಅಕ್ಟೋಬರ್ 19ರಂದು ಅಮೆರಿಕದಿಂದ ಭಾರತಕ್ಕೆ ಆಗಮಿಸುವ ಮೂಲಕ ಬ್ಲೂಬರ್ಡ್-6ರ ಬಾಹ್ಯಾಕಾಶ ಯಾತ್ರೆ ಆರಂಭಗೊಂಡಿತು. ಇಂಜಿನಿಯರ್ಗಳು ಬಹಳ ಎಚ್ಚರಿಕೆಯಿಂದ ಈ ಮಹತ್ವದ ಉಪಗ್ರಹವನ್ನು ರಸ್ತೆ ಮಾರ್ಗವಾಗಿ ಶ್ರೀಹರಿಕೋಟಾಗೆ ಸಾಗಿಸಿದರು. ಅಲ್ಲಿ ಉಪಗ್ರಹವನ್ನು ಎಲ್ವಿಎಂ3 ರಾಕೆಟ್ಗೆ ಅಳವಡಿಸಲಾಯಿತು. ಅವರು ರಾಕೆಟ್ಗೆ ಇಂಧನ ತುಂಬಿ, ಅಸಂಖ್ಯಾತ ಸುರಕ್ಷತಾ ಪರೀಕ್ಷೆಗಳನ್ನು ನಡೆಸಿ, ಅದನ್ನು ಉಡಾವಣಾ ದಿನಕ್ಕೆ ಸಜ್ಜುಗೊಳಿಸಿದರು. ಉಪಗ್ರಹದ ಉಡಾವಣೆಯನ್ನು ಇಸ್ರೋದ ವಾಣಿಜ್ಯಿಕ ಅಂಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ನಿರ್ವಹಿಸಲಿದೆ. ಇದು ವಿದೇಶೀ ಉಪಗ್ರಹಗಳ ಉಡಾವಣೆಯಿಂದ ಆದಾಯ ಗಳಿಸುತ್ತದೆ. ಆ ಮೂಲಕ ಬಾಹ್ಯಾಕಾಶ ಯೋಜನೆಗಳನ್ನೂ ಲಾಭದಾಯಕ ಉದ್ಯಮವಾಗಿ ಪರಿವರ್ತಿಸಲಾಗುತ್ತದೆ.

ಸ್ವತಃ ಎಲ್ವಿಎಂ3 ಒಂದು ಅದ್ಭುತವಾದ ಯಂತ್ರ. 45.5 ಮೀಟರ್ ಎತ್ತರವಿರುವ ಈ ರಾಕೆಟ್, ಮೂರು ಶಕ್ತಿಶಾಲಿ ಹಂತಗಳನ್ನು ಒಳಗೊಂಡಿದೆ. ಇದು 8 ಟನ್ಗಳಷ್ಟು ತೂಕವನ್ನು ಭೂಮಿಯ ಕೆಳ ಕಕ್ಷೆಗೆ ಒಯ್ಯಬಲ್ಲದು. ಕಳೆದ ತಿಂಗಳಷ್ಟೇ, ಅಂದರೆ ನವೆಂಬರ್ 2ರಂದು, ರಾಕೆಟ್ ಭಾರತದ ಅತ್ಯಂತ ತೂಕದ, 4.4 ಟನ್ ಭಾರ ಹೊಂದಿದ್ದ ಸಂವಹನ ಉಪಗ್ರಹವಾಗಿರುವ ಸಿಎಂಎಸ್-3ನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿತು. 2027ರಲ್ಲಿ ಯೋಜಿಸಲಾಗಿರುವ ಗಗನಯಾನ ಯೋಜನೆಯಲ್ಲೂ ಇದೇ ರಾಕೆಟ್ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ. ಎಎಸ್ಟಿ ಸ್ಪೇಸ್ ಮೊಬೈಲ್ ಸಂಸ್ಥೆ ಯುಟಿಲಾಸ್ಟ್ ವನ್ ವೆಬ್ ನಂತರ ಎಲ್ವಿಎಂ3ರ ಎರಡನೇ ಅತಿದೊಡ್ಡ ಉಪಗ್ರಹ ಅಂತರ್ಜಾಲ ಸಹಯೋಗಿಯಾಗಿದ್ದು, ವಾಣಿಜ್ಯಿಕ ಬಾಹ್ಯಾಕಾಶ ಉಡಾವಣೆಗಳಲ್ಲಿ ಹೆಚ್ಚುತ್ತಿರುವ ಭಾರತದ ಮಹತ್ವಕ್ಕೆ ಸಾಕ್ಷಿಯಾಗಿದೆ.

ಬ್ಲೂಬರ್ಡ್-6 ಯಾಕೆ ಅತ್ಯಂತ ತೂಕದ ಉಪಗ್ರಹವೆಂದು ಪರಿಗಣಿತವಾಗಿದೆ? ಮೂಲತಃ 6.5 ಟನ್ ತೂಕ ಹೊಂದಿರುವ ಈ ಉಪಗ್ರಹ ಭೂಮಿಯ ಕೆಳ ಕಕ್ಷೆಗೆ ನಿಜಕ್ಕೂ ಬೃಹತ್ತಾದ ವಾಣಿಜ್ಯಿಕ ಉಪಗ್ರಹ. ಎಲಾನ್ ಮಸ್ಕ್ ಅವರ ಸ್ಟಾರ್ ಲಿಂಕ್ ಸೇರಿದಂತೆ, ಇದೇ ಎತ್ತರದಲ್ಲಿ ಕಾರ್ಯಾಚರಿಸುವ ಬಹುತೇಕ ಉಪಗ್ರಹಗಳು ಕೇವಲ 1ರಿಂದ 1.5 ಟನ್ ತೂಕ ಹೊಂದಿರುತ್ತವೆ. ಇನ್ನು ಇಲ್ಲಿಯತನಕ ನಿರ್ಮಿಸಲಾಗಿರುವ ಅತ್ಯಧಿಕ ತೂಕದ ವಾಣಿಜ್ಯಿಕ ಉಪಗ್ರಹವಾದ ಜುಪೀಟರ್-3 ಬರೋಬ್ಬರಿ 9.2 ಟನ್ ತೂಕ ಹೊಂದಿದ್ದು, 36,000 ಕಿಲೋಮೀಟರ್ ದೂರದ ಭೂಸ್ಥಿರ ಕಕ್ಷೆಯಲ್ಲಿ ಅತ್ಯಂತ ವೇಗವಾಗಿ ಪರಿಭ್ರಮಣೆ ನಡೆಸುತ್ತದೆ. ಆದರೆ, ಹೆಚ್ಚಿನ ಸಂಕೇತ ನೀಡುವ ಉದ್ದೇಶದಿಂದ, ಬ್ಲೂಬರ್ಡ್-6 ಉಪಗ್ರಹವನ್ನು ಭೂಮಿಯಿಂದ ಕೇವಲ 500ರಿಂದ 700 ಕಿಲೋಮೀಟರ್ ದೂರದಲ್ಲಿರುವ ಭೂಮಿಯ ಕೆಳ ಕಕ್ಷೆಗೆ ಅಳವಡಿಸಲಾಗುತ್ತದೆ. ಈ ಕಕ್ಷೆಗೆ ಇಂತಹ ಉಪಗ್ರಹಗಳು ಅತ್ಯಂತ ಅಪರೂಪವಾಗಿದ್ದು, ಇವುಗಳ ಉಡಾವಣೆ ಕಷ್ಟಕರವಾಗಿದೆ. ಇದು ಬ್ಲೂಬರ್ಡ್-6 ಉಪಗ್ರಹಕ್ಕೆ ಅತ್ಯಂತ ಮೌಲ್ಯ ತಂದಿದ್ದು, ಇದರ ಯಶಸ್ವಿ ಉಡಾವಣೆ ಇಸ್ರೋದ ಅಸಾಧಾರಣ ಇಂಜಿನಿಯರಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.

ಈ ಯೋಜನೆ ಕೇವಲ ತಂತ್ರಜ್ಞಾನ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಇದು ಮಾನವರನ್ನು ಸಂಪರ್ಕಿಸಿ, ಅಂತಾರಾಷ್ಟ್ರೀಯ ಸ್ನೇಹವನ್ನು ಬಲಪಡಿಸಿ, ಭಾರತ ನಂಬಿಕಾರ್ಹ ಜಾಗತಿಕ ಬಾಹ್ಯಾಕಾಶ ಸಹಯೋಗಿಯಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಬ್ಲೂಬರ್ಡ್-6 ಬಾಹ್ಯಾಕಾಶಕ್ಕೆ ಚಿಮ್ಮುವಾಗ, ಅದು ಭೌಗೋಳಿಕತೆ ಮಾಹಿತಿ ಮತ್ತು ಅವಕಾಶಗಳಿಗೆ ಕಡಿವಾಣ ಹಾಕುವುದನ್ನು ಮೀರುವಂತಹ ಸಂಪರ್ಕ ಸಾಧ್ಯತೆಯ ಆಶಯವನ್ನೂ ಹೊತ್ತು ಸಾಗಲಿದೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.