ಡಿ.ಕೆ.ಶಿವಕುಮಾರ್ ಮೌನ ‘ಕ್ರಾಂತಿ’
ಸಿದ್ದರಾಮಯ್ಯನವರ ಬಣ ಎಷ್ಟೇ ಪ್ರಚೋದಿಸಿದರೂ ಶಿವಕುಮಾರ್ ಮಾತ್ರ ಪ್ರತಿಕ್ರಿಯೆಯನ್ನೇ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ‘ನಾಯಕತ್ವ ಬದಲಾವಣೆ ಇಲ್ಲ’ ಎಂದು ಮೇಲು ಮೇಲಕ್ಕೆ ಅವರು ಹೇಳುತ್ತಿದ್ದಾರಾದರೂ ಹೈಕಮಾಂಡ್ ವರ ಕೊಡಬಹುದೆಂಬ ನಿರೀಕ್ಷೆ ಅವರದ್ದು. ಸಿದ್ದರಾಮಯ್ಯನವರ ಬಣದ ಹೇಳಿಕೆಗಳಿಗೆ ನಿಷ್ಠುರವಾಗಿ ತಿರುಗೇಟು ಕೊಟ್ಟರೆ ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ತಮ್ಮನ್ನು ‘ಅಹಿಂದ’ ವಿರೋಧಿ ಎಂದು ಬಿಂಬಿಸಬಹುದು ಎಂಬ ಭಯವೂ ಅವರಲ್ಲಿದ್ದಂತಿದೆ.
ಹೀಗಾಗಿ ಮೌನ ‘ಕ್ರಾಂತಿ’ಯ ಎಣಿಕೆಯಲ್ಲಿರುವ ಶಿವಕುಮಾರ್, ಎಲ್ಲದಕ್ಕೂ ನಿರ್ಲಿಪ್ತರಾಗಿದ್ದಾರೆ. ‘ಸಮಯ ಬಂದಾಗ ಪ್ರತಿಕ್ರಿಯಿಸುವೆ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುವೆ, ನನಗೂ ಸಮಯ ಪ್ರಜ್ಞೆ ಇದೆ’ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ನವೆಂಬರ್‌ನಲ್ಲಿ ‘ವರ’ ಸಿಗಲೆಂದು ‘ದೇಗುಲಗಳ ಪ್ರದಕ್ಷಿಣೆ’ ಮಾಡುವುದನ್ನು ಮಾತ್ರ ಅವರು ಬಿಟ್ಟಿಲ್ಲ.