‘ಜಾಗತಿಕ ಪ್ರಜಾಪ್ರಭುತ್ವದ ಸ್ಥಿತಿ–2025’ರ ವರದಿಯ ಪ್ರಕಾರ, ಕಳೆದ ಒಂದೂವರೆ ದಶಕದಿಂದ ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವಕ್ಕೆ ತೀವ್ರ ಹಿನ್ನಡೆಯಾಗಿದೆ. ಅಂತರರಾಷ್ಟ್ರೀಯ ಪ್ರಜಾಸತ್ತೆ ಮತ್ತು ಚುನಾವಣಾ ಸಹಾಯ ಸಂಸ್ಥೆಯು (ಐಡಿಇಎ) ಕೆಲವು ಪ್ರಮುಖ ಮಾನದಂಡಗಳನ್ನು ಅನುಸರಿಸಿ ಪ್ರಜಾಪ್ರಭುತ್ವದ ಸ್ಥಿತಿಗತಿ ತಿಳಿಯಲು ಅಭಿವೃದ್ಧಿಪಡಿಸಿರುವ ಸೂಚ್ಯಂಕದ ಪ್ರಮುಖ ಅಂಶಗಳ ಮಾಪನದ ಅನ್ವಯ, ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ಗುಣಮಟ್ಟ ತೀವ್ರ ಕುಸಿತ ಕಂಡಿದೆ. ಈ ಸೂಚ್ಯಂಕವು ಪ್ರಜಾಸತ್ತೆಯ ಸ್ಥಿತಿಯನ್ನು ನಾಲ್ಕು ಮೂಲತತ್ತ್ವಗಳ ಆಧಾರದಲ್ಲಿ ಅಳೆಯುತ್ತದೆ. ಅವು ಗಳೆಂದರೆ: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ; ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘಟನೆ, ಸಮಾನತೆ ಮತ್ತು ನ್ಯಾಯದ ಲಭ್ಯತೆ; ಸರ್ಕಾರಗಳ ನಿಯಂತ್ರಣ ಮತ್ತು ಹೊಣೆಗಾರಿಕೆಯ ಭಾಗವಾಗಿ ನ್ಯಾಯಾಂಗದ ಸ್ವಾತಂತ್ರ್ಯ, ಶಾಸಕಾಂಗದ ಕ್ರಿಯಾಶೀಲತೆ ಹಾಗೂ ಮಾಧ್ಯಮ ಸ್ವಾತಂತ್ರ್ಯ; ಸ್ಥಳೀಯ ಆಡಳಿತವನ್ನೂ ಸೇರಿದಂತೆ ವಿವಿಧ ಹಂತಗಳಲ್ಲಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆ.

ಪ್ರಜಾಸತ್ತೆಯ ಕುಸಿತ ಎಷ್ಟು ಗಂಭೀರವಾಗಿದೆ ಎಂದರೆ, 2024ರಲ್ಲಿ ಮೌಲ್ಯಮಾಪನಕ್ಕೊಳಗಾದ ಒಟ್ಟು ದೇಶಗಳ ಪೈಕಿ ಶೇ 54ರಷ್ಟನ್ನು ಪ್ರತಿನಿಧಿಸುವ 94 ದೇಶಗಳಲ್ಲಿ, ಆ ದೇಶಗಳ ಹಿಂದಿನ ಐದು ವರ್ಷಗಳ ಕಾರ್ಯಕ್ಷಮತೆಗೆ ಹೋಲಿಸಿದರೆ, ಪ್ರಜಾಪ್ರಭುತ್ವದ ಕಾರ್ಯಕ್ಷಮತೆ ಗಣನೀಯವಾಗಿ ಕುಸಿದಿದೆ. 1975ರಿಂದ ಇಲ್ಲಿಯವರೆಗೆ ಇದು ಅತ್ಯಂತ ವ್ಯಾಪಕ ಹಾಗೂ ದೊಡ್ಡ ಕುಸಿತ. ಅದೇ ರೀತಿ, ಸ್ವತಂತ್ರ ನ್ಯಾಯಾಂಗಕ್ಕೆ ಧಕ್ಕೆ ಬಂದಿದ್ದು, ಮೂಲಭೂತ ಹಕ್ಕುಗಳಾದ ಸ್ವಾತಂತ್ರ್ಯ, ಅಭಿವ್ಯಕ್ತಿ ಹಾಗೂ ನ್ಯಾಯದ ಲಭ್ಯತೆ ದೊಡ್ಡ ಹಾನಿಗೆ ಒಳಗಾಗಿವೆ. ಜನರ ಪಾಲುಗೊಳ್ಳುವಿಕೆ ಕ್ಷೇತ್ರದಲ್ಲಿ ಒಂದು ಬಗೆಯ ಸ್ತಬ್ಧತೆ ಕಂಡುಬಂದಿದೆ.

ಭಾರತದ ಸ್ಥಿತಿಯೇನೂ ಭಿನ್ನವಾಗಿಲ್ಲ. ಮೇಲಿನ ಸೂಚ್ಯಂಕದ ನಾಲ್ಕು ಕ್ಷೇತ್ರಗಳಲ್ಲಿ ಭಾರತದಲ್ಲಿಯೂ ಕುಸಿತ ಕಾಣಿಸಿದೆ. ‘ಭಾರತದ ಪ್ರಜಾಪ್ರಭುತ್ವ ಏಕೆ ಸಾಯುತ್ತಿದೆ?’ ಶೀರ್ಷಿಕೆಯ ಒಂದು ಲೇಖನವು, ಜಾಗತಿಕವಾಗಿ ಪ್ರಜಾಸತ್ತೆಯ ಹಿಂಜರಿಕೆಗೆ ಭಾರತ ಉತ್ತಮ ಉದಾಹರಣೆ ಎಂದಿದೆ. ಇತ್ತೀಚೆಗೆ ಭಾರತವು ಪ್ರಜಾಸತ್ತೆಯ ಜೊತೆ ಜೊತೆಗೆ ನಿರಂಕುಶಾಧಿಕಾರಿ ಲಕ್ಷಣಗಳುಳ್ಳ ಹೈಬ್ರಿಡ್ ಆಡಳಿತವನ್ನು ಹೊಂದಿದ್ದು, ಒಂದೆಡೆ ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ದಮನ ಮಾಡುತ್ತಲೇ ಮತ್ತೊಂದೆಡೆ ನಿಯಮಿತ ಚುನಾವಣೆಗಳನ್ನು ನಡೆಸುತ್ತಿದೆ. ಭಾರತದ ಈ ಹೈಬ್ರಿಡ್ ಆಡಳಿತ, ಜಾಗತಿಕ ನಿರಂಕುಶೀಕರಣದ ಮೇಲೆ ಪ್ರಭಾವ ಬೀರಿದೆ. ಭಾರತದ ಪ್ರಜಾಸತ್ತೆಯ ಅವನತಿಯು ಜಗತ್ತಿ ನಾದ್ಯಂತ ಪ್ರಜಾಪ್ರಭುತ್ವಗಳು ಹೇಗೆ ಸಾಯುತ್ತಿವೆ ಎಂಬುದನ್ನು ಬಹಿರಂಗಪಡಿಸುತ್ತದೆ. ಆರೋಗ್ಯಕರ ಪ್ರಜಾಸತ್ತೆಯ ಬೆನ್ನೆಲುಬೆನಿಸುವ ರಚನಾತ್ಮಕ ಟೀಕೆ, ವಿಮರ್ಶೆ, ವಿರೋಧ ಇತ್ಯಾದಿಗಳನ್ನು ಹತ್ತಿಕ್ಕಿ, ಭಿನ್ನಾಭಿಪ್ರಾಯವನ್ನು ರಾಷ್ಟ್ರದ್ರೋಹಕ್ಕೆ ಸಮೀಕರಿಸಲಾಗುತ್ತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ವಿರೋಧ ಪಕ್ಷಗಳ ಭಿನ್ನಧ್ವನಿಯನ್ನು ಕಾನೂನಿನ ಕಿರುಕುಳ ಮತ್ತು ಮಾಧ್ಯಮದ ಮೂಲಕ ಅಡಗಿಸಲಾಗುತ್ತಿದೆ.

ಕಳೆದ ಮೂರ್ನಾಲ್ಕು ರಾಷ್ಟ್ರೀಯ ಚುನಾವಣೆ ಹಾಗೂ ರಾಜ್ಯಗಳ ವಿಧಾನಸಭೆಗಳ ಚುನಾವಣೆಗಳನ್ನು ಗಮನಿಸಿದರೆ, ಸಾಂವಿಧಾನಿಕ ಮೌಲ್ಯಗಳ ಆಶಯಕ್ಕಿಂತ ಧರ್ಮ–ಜಾತಿ, ಜನಾಂಗೀಯ ಮತ್ತು ಭಾವನಾತ್ಮಕ ವಿಷಯಗಳು ಚುನಾವಣೆಗಳನ್ನು ಪ್ರಭಾವಿಸುತ್ತಿವೆ. ಅಭಿವೃದ್ಧಿಯ ಚರ್ಚೆ ಹಿಂದಕ್ಕೆ ಸರಿದಿದೆ. ಹಣ, ಆಮಿಷ, ಜಾತಿ ಮತ್ತು ಕುಟುಂಬ ರಾಜಕಾರಣ ಮೇಲುಗೈ ಸಾಧಿಸಿವೆ. ಮತಗಳ್ಳತನ ನಡೆಯುತ್ತಿರುವ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಲೋಕಸಭೆಯಲ್ಲಿ ಮಂಡನೆಯಾದ ಸಂವಿಧಾನದ 130ನೇ ತಿದ್ದುಪಡಿ ಮಸೂದೆ–2025, ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಸದ್ಯಕ್ಕೆ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿರುವ ಈ ಮಸೂದೆ, ರಾಜಕೀಯ ಮುಖಂಡರನ್ನು ಗುರಿಯಾಗಿಸುವ ಮತ್ತು ವಿರೋಧ ಪಕ್ಷದ ಸದ್ದಡಗಿಸುವ ಮೂಲಕ ಪ್ರಜಾಸತ್ತೆಯನ್ನು ಹತ್ತಿಕ್ಕುವ ಮತ್ತು ಸಂವಿಧಾನವನ್ನು ದುರ್ಬಲಗೊಳಿಸುವ ಹುನ್ನಾರವೆಂದು ಹೇಳಲಾಗುತ್ತಿದೆ.

ಒಟ್ಟಾರೆ, ಭಾರತದಲ್ಲಿನ ಬೆಳವಣಿಗೆಗಳು ಆರೋಗ್ಯಕರ ಪ್ರಜಾಸತ್ತೆಯ ಮೂಲ ಲಕ್ಷಣಗಳಿಗೆ ಚ್ಯುತಿ ತರುವ ಮೂಲಕ, ನಿರಂಕುಶಪ್ರಭುತ್ವದತ್ತ ಸಾಗುತ್ತಿರುವ ಮುನ್ಸೂಚನೆಯಂತೆ ಕಾಣುತ್ತಿವೆ. ಒಮ್ಮೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿ ಕೊಂಡಿದ್ದ ಭಾರತ ಇಂದು ಅದಕ್ಕೆ ಅಪವಾದವೆನಿಸಿದೆ.

ಪ್ರಜಾಪ್ರಭುತ್ವ ಇಷ್ಟೊಂದು ತೀವ್ರವಾಗಿ ದುರ್ಬಲ ಆಗಲು ಕಾರಣಗಳನ್ನು ಹುಡುಕಿದರೆ, ನಮಗೆ ಕಾಣುವ ಪ್ರಮುಖ ಸಂಗತಿ– ಅರಿವಿನ ಜಾಗೃತಿ ಮೂಡಿಸದ ಶಿಕ್ಷಣ ವ್ಯವಸ್ಥೆ. ನಮ್ಮ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಮೂಲಭೂತವಾಗಿ ಅಧೀನತೆಯನ್ನು ಒಪ್ಪಿ, ವಿಧೇಯತೆಯನ್ನು ಮೈಗೂಡಿಸಿಕೊಂಡು ವ್ಯವಸ್ಥೆಯನ್ನು ಅನೂಚಾನವಾಗಿ ಮುನ್ನಡೆಸುವ ತರಬೇತಿಯಾಗಿದೆ. ಪ್ರಜಾಸತ್ತೆ ಎಂದರೆ ‘ಅಂಧ ಅನುಸರಣೆ’ ಅಲ್ಲ, ಅದು, ಪ್ರಶ್ನಿಸುವ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಬೇಕು. ಪ್ರಜಾಸತ್ತೆಯಲ್ಲಿ, ನಾಗರಿಕ ತಾನು ಮತ ಚಲಾಯಿಸುವ ಮೂಲಕ ಯಾವ ಬಗೆಯ ಬದಲಾವಣೆ ತರಬೇಕೆಂಬ ಸ್ಪಷ್ಟತೆಯನ್ನು ಹೊಂದಿರಬೇಕು. ಪ್ರಜಾಸತ್ತೆ ಬರೀ ರಾಜಕೀಯ ಆಡಳಿತ ವ್ಯವಸ್ಥೆ ಆಗಿರದೆ, ಜನರ ಪಾಲ್ಗೊಳ್ಳುವಿಕೆ, ವಿಚಾರ ಸ್ವಾತಂತ್ರ್ಯ, ವಿಮರ್ಶಾತ್ಮಕ ಚಿಂತನೆ ಮತ್ತು ಸಮಾನ ಅವಕಾಶಗಳ ಸಮನ್ವಯವಾಗಿದೆ. ಐದು ವರ್ಷಕ್ಕೊಮ್ಮೆ ಮತ ಹಾಕುವುದು ಮಾತ್ರವಲ್ಲ; ನಾಗರಿಕರು ತಮ್ಮ ವಿವೇಕ, ಪರಸ್ಪರ ಗೌರವ ಮತ್ತು ಸಂವಾದ ಸಾಮರ್ಥ್ಯಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿ ಬಲವರ್ಧನೆಗೊಳಿಸಬೇಕಿದೆ.

ಪ್ರಸಿದ್ಧ ಶಿಕ್ಷಣ ತಜ್ಞ ಹಾಗು ತತ್ವಜ್ಞಾನಿ ಜಾನ್ ಡ್ಯೂಯಿ ಪ್ರಕಾರ, ಶಿಕ್ಷಣ ಮತ್ತು ಪ್ರಜಾಪ್ರಭುತ್ವದ ನಡುವೆ ಅವಿನಾಭಾವ ಸಂಬಂಧವಿದೆ. ಶಿಕ್ಷಣ ಬರೀ ಜ್ಞಾನವನ್ನು ನೀಡುವ ಪ್ರಕ್ರಿಯೆಯಲ್ಲ. ಬದಲಿಗೆ, ಅದು ಸಮಾಜದಲ್ಲಿ ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳುವ ಹಾಗೂ ಪ್ರಜಾಸತ್ತೆಯನ್ನು ಜೀವಂತವಾಗಿಡುವ ಸಾಧನ. ಡ್ಯೂಯಿ ಅವರು ತಮ್ಮ ‘ಪ್ರಜಾಸತ್ತೆ ಮತ್ತು ಶಿಕ್ಷಣ’ ಕೃತಿಯಲ್ಲಿ, ಪ್ರಜಾಸತ್ತೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು, ಪ್ರಜಾಸತ್ತೆಯೆಂದರೆ ಜನರ ಸಹಭಾಗಿತ್ವದಿಂದ ಕೂಡಿದ ಸಂವಾದದ ಜೀವನಶೈಲಿ ಎಂದಿದ್ದಾರೆ. ಶಿಕ್ಷಣವು ಕೇವಲ ಜ್ಞಾನ ವರ್ಗಾವಣೆಯ ಯಾಂತ್ರಿಕ ಕ್ರಿಯೆಯಾಗದೆ, ವ್ಯಕ್ತಿಗೆ ಸಾಮಾಜಿಕ ಜವಾಬ್ದಾರಿ, ಸ್ವತಂತ್ರ ಚಿಂತನೆ, ಪ್ರಶ್ನಿಸುವ ಮನೋಭಾವ, ಸಂವಾದಿಸುವ ಸಾಮರ್ಥ್ಯ ಹಾಗೂ ಅಗತ್ಯವಿದ್ದಲ್ಲಿ ಬದಲಾಯಿಸುವ ಹೊಣೆಗಾರಿಕೆ ಬೆಳೆಸುವ ಪ್ರಬಲ ಸಾಧನವಾಗಬೇಕು.

ಡ್ಯೂಯಿಯವರ ಪ್ರಕಾರ, ಶಾಲೆ ಒಂದು ಸಣ್ಣ ಸಮಾಜ. ವಿದ್ಯಾರ್ಥಿಗಳು ಅಲ್ಲಿ ಪಠ್ಯಪುಸ್ತಕದ ಜ್ಞಾನ ಪಡೆಯುವುದು ಮಾತ್ರವಲ್ಲದೆ, ತಮ್ಮ ಸುತ್ತಲಿನ ಸಮಾಜವನ್ನು ಹೇಗೆ ನೋಡಬೇಕು, ಸಮಾಜದಲ್ಲಿ ಹೇಗೆ ಬದುಕಬೇಕು, ಇತರರೊಂದಿಗೆ ಹೇಗೆ ಸಹಕರಿಸಬೇಕು ಮತ್ತು ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎಂಬುದನ್ನೂ ಕಲಿಯಬೇಕು. ಶಿಕ್ಷಣವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದರ ಜೊತೆಗೆ ಸಮುದಾಯಜೀವನಕ್ಕೆ ಸಜ್ಜುಗೊಳಿಸಬೇಕು. ಸರಳೀಕರಿಸಿ ಹೇಳುವುದಾದರೆ, ಶಿಕ್ಷಣ ಒಂದು ಸಾಮಾಜಿಕ ಪ್ರಕ್ರಿಯೆ. ಶಿಕ್ಷಣ ಜೀವನಕ್ಕೆ ಸಿದ್ಧತೆ ಮಾತ್ರವಲ್ಲ, ಜೀವನವೇ ಶಿಕ್ಷಣ.

ಬ್ರೆಜಿಲ್ನ ಖ್ಯಾತ ಶಿಕ್ಷಣ ತತ್ತ್ವಜ್ಞ ಪೌಲೋ ಫ್ರೈರೆ, ಶಿಕ್ಷಣವನ್ನು ಬರೀ ಜ್ಞಾನ ಹಂಚುವ ಪ್ರಕ್ರಿಯೆಯಾಗಿ ನೋಡದೆ, ಸಾಮಾಜಿಕ–ಆರ್ಥಿಕ ಹಾಗೂ ಸಾಂಸ್ಕೃತಿಕ ಬದಲಾವಣೆಯ ರಾಜಕೀಯ ಸಾಧನವಾಗಿ ಪರಿಗಣಿಸಿದರು. ಅವರ ಅತ್ಯಂತ ಪ್ರಸಿದ್ಧ ಕೃತಿ ‘ತುಳಿತಕ್ಕೊಳಗಾದವರ ಶಿಕ್ಷಣಶಾಸ್ತ್ರ’ ಕೃತಿಯಲ್ಲಿ, ಶಿಕ್ಷಣ ಜನರ ಅರಿವು, ಹಕ್ಕು, ಮತ್ತು ವಿಮೋಚನೆಗಾಗಿ ನಡೆಯುವ ಕ್ರಿಯಾತ್ಮಕ ಸಂವಾದವಾಗಬೇಕು ಎಂದು ಪ್ರತಿಪಾದಿಸಿದರು. ಈ ತತ್ತ್ವವನ್ನು ಅವರು ‘ಅರಿವಿನ ಜಾಗೃತಿ’ ಎಂದು ಕರೆದರು. ನಮ್ಮ ಸಾಂಪ್ರದಾಯಿಕ ಸಾಮಾನ್ಯ ಶಿಕ್ಷಣಕ್ಕೂ ಮತ್ತು ಅರಿವಿನ ಜಾಗೃತಿಗೂ ಬಹಳ ದೊಡ್ಡ ವ್ಯತ್ಯಾಸವಿದೆ. ಅರಿವಿನ ಜಾಗೃತಿ ಎಂದರೆ, ತನ್ನ ಸುತ್ತಲಿನ ಘಟನೆಗಳನ್ನು ಜೀವನದ ಅನುಭವಗಳ ಮೂಲಕ ವಿಮರ್ಶಾತ್ಮಕವಾಗಿ ನೋಡುವುದು. ಸಮಾಜದಲ್ಲಿರುವ ಅನ್ಯಾಯ, ಅಸಮಾನತೆ ಮತ್ತು ಶೋಷಣೆಯ ಶ್ರೇಣೀಕೃತ ಸಂರಚನೆಗಳನ್ನು ಗುರುತಿಸಿ ಬದಲಾಯಿಸಲು ಸಾಮೂಹಿಕ ಹೋರಾಟಗಳಲ್ಲಿ ತೊಡಗುವುದು. ಅರಿವಿನ ಜಾಗೃತಿಯೆಂದರೆ, ಬರೀ ಓದು–ಬರಹ, ಲೆಕ್ಕಾಚಾರ ಕಲಿಯುವ ದಾರಿ ಮಾತ್ರವಲ್ಲ; ಸ್ವಾತಂತ್ರ್ಯ, ಸಮಾನತೆ ಮತ್ತು ಮಾನವೀಯತೆಗಾಗಿ ಹೋರಾಟ ನಡೆಸುವ ಒಂದು ಬೌದ್ಧಿಕ ಪ್ರಕ್ರಿಯೆ.

ಪ್ರಜಾಸತ್ತೆ ಮತ್ತು ಶಿಕ್ಷಣಕ್ಕಿರುವ ಸಂಬಂಧದ ನೆಲೆಯಲ್ಲಿ, ಇಂದಿನ ಪ್ರಜಾಸತ್ತೆಯನ್ನು ಗಮನಿಸಿದರೆ, ಶಿಕ್ಷಣ ಪಡೆದವರ ಮತ್ತು ಪಡೆಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ ನಮ್ಮ ಪ್ರಜಾಸತ್ತೆಯ ಗುಣಮಟ್ಟ ಜಾಗತಿಕ ಹಂತದಿಂದ ಸ್ಥಳೀಯ ಹಂತದವರೆಗೆ ದುರ್ಬಲಗೊಂಡು ಬಲಹೀನ ವಾಗುತ್ತಿದೆ. ಪ್ರಜಾಸತ್ತೆಯ ಮೂಲ ಸೂಚ್ಯಂಕಗಳು ಕುಸಿಯುತ್ತಿವೆ. ಜನರು ಪ್ರಜಾಸತ್ತೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಜನರಲ್ಲಿ ತಾರ್ಕಿಕ ಪ್ರಜ್ಞೆ, ವೈಚಾರಿಕ ಚಿಂತನೆ ಮತ್ತು ಅನ್ವೇಷಿಸುವ ಗುಣಗಳನ್ನು ಬೆಳೆಸುವುದು ಶಿಕ್ಷಣದ ಮುಖ್ಯ ಉದ್ದೇಶವಾಗಬೇಕು. ಪ್ರಜಾಸತ್ತೆಯ ಜೀವಾಳವೇ ಶಿಕ್ಷಣ ಎಂದಾದರೆ, ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು. ಆ ಮೂಲಕ, ತನ್ನ ನಾಗರಿಕರಿಗೆ ಆಲೋಚಿಸುವ, ವಿಮರ್ಶಾತ್ಮಕವಾಗಿ ಚಿಂತಿಸುವ ಮತ್ತು ಜನಪರವಾಗಿ ನಿರ್ಣಯಿಸುವ ಶಕ್ತಿಯನ್ನು ಬೆಳೆಸುವ ಪ್ರಜಾಸತ್ತಾತ್ಮಕ ಶಿಕ್ಷಣಕ್ಕೆ ಮುಂದಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.