ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುವ ಮುನ್ನವೇ ಉಭಯ ದೇಶಗಳ ಸ್ನೇಹ ಬಲವರ್ಧನೆಗೊಂಡಿದೆ.

ರಷ್ಯನ್ ಸಂಸತ್ತಿನ ಕೆಳಮನೆಯಾದ ಸ್ಟೇಟ್ ಡುಮಾ ಪುಟಿನ್ ನವದೆಹಲಿ ಭೇಟಿಯ ಕೇವಲ ಒಂದು ದಿನ ಮುನ್ನ, ಡಿಸೆಂಬರ್ 3ರ ಮಂಗಳವಾರದಂದು ಭಾರತದೊಡನೆ ಒಂದು ಪ್ರಮುಖ ಮಿಲಿಟರಿ ಒಪ್ಪಂದಕ್ಕೆ ಅನುಮೋದನೆ ನೀಡಿದೆ.

ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ವಿನಿಮಯ ಮಾಡಿಕೊಳ್ಳುವ ರೆಸಿಪ್ರೋಕಲ್ ಎಕ್ಸ್ಚೇಂಜ್ ಆಫ್ ಲಾಜಿಸ್ಟಿಕ್ ಸಪೋರ್ಟ್ (ರಿಲೋಸ್) ಒಪ್ಪಂದವನ್ನು ಕಳೆದ ವಾರ ಪ್ರಧಾನ ಮಂತ್ರಿ ಮಿಖಾಯಿಲ್ ಮಿಷುಸ್ಟಿನ್ ಅವರು ಅನುಮೋದನೆಗಾಗಿ ಡುಮಾಗೆ ಕಳುಹಿಸಿದ್ದರು. ಇದಕ್ಕೆ ಡುಮಾದಲ್ಲಿ ಮಂಗಳವಾರ ಅನುಮೋದನೆ ದೊರೆತಿದೆ.

ಸ್ಟೇಟ್ ಡುಮಾದ ಸ್ಪೀಕರ್ ಆಗಿರುವ ವ್ಯಾಚೆಸ್ಲಾವ್ ವೊಲೊದಿನ್ ಅವರು ಈ ಕುರಿತು ಮಾತನಾಡುತ್ತಾ, "ಭಾರತದ ಜೊತೆಗಿನ ನಮ್ಮ ಸಂಬಂಧ ಕಾರ್ಯತಂತ್ರದ್ದೂ, ಮತ್ತು ಸಮಗ್ರವೂ ಆಗಿದೆ. ಈ ಸ್ನೇಹವನ್ನು ನಾವು ಗೌರವಿಸುತ್ತೇವೆ" ಎಂದಿದ್ದರು.

ಈ ಒಪ್ಪಂದಕ್ಕೆ ಅನುಮೋದನೆ ನೀಡುವ ಮೂಲಕ, ಪರಸ್ಪರ ಸಹಕಾರ ಮತ್ತು ರಷ್ಯಾ - ಭಾರತಗಳ ಸಂಬಂಧ ವೃದ್ಧಿಯಲ್ಲಿ ಒಂದು ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹಾಗಾದರೆ, ರಿಲೋಸ್ ಒಪ್ಪಂದ ಎಂದರೇನು? ಇದು ಭಾರತಕ್ಕೆ ಏಕೆ ಮುಖ್ಯ? ಅದನ್ನು ಈ ಲೇಖನದಲ್ಲಿ ಗಮನಿಸೋಣ.

ರಿಲೋಸ್ ಒಪ್ಪಂದ - ಏನಿದು?

ರಿಲೋಸ್ ಒಪ್ಪಂದ ಭಾರತ ಮತ್ತು ರಷ್ಯಾಗಳ ಮಿಲಿಟರಿ ವಿಮಾನಗಳು, ಹಡಗುಗಳು ಮತ್ತು ಸೇನಾಪಡೆಗಳು ಜಂಟಿ ಅಭ್ಯಾಸಕ್ಕಾಗಿ, ತರಬೇತಿಗಾಗಿ, ಮಾನವೀಯ ನೆರವಿನ ಕಾರ್ಯಗಳಿಗಾಗಿ, ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಪರಸ್ಪರರ ನೆಲೆಗಳನ್ನು ಬಳಸಲು ಅವಕಾಶ ಕಲ್ಪಿಸುತ್ತದೆ. ಇದು ಒಟ್ಟಾರೆ ಸ್ವಂತ ಲಾಜಿಸ್ಟಿಕ್ಸ್ ಒಳಗೊಂಡಂತೆ, ಸೇನಾಪಡೆಗಳು ಮತ್ತು ಉಪಕರಣಗಳನ್ನು ಹೇಗೆ ಕಳುಹಿಸಲಾಗುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿಯಮಗಳನ್ನು ರೂಪಿಸುತ್ತದೆ.

ರಿಲೋಸ್ ಒಪ್ಪಂದದ ಮೂಲಕ, ಭಾರತ ಮತ್ತು ರಷ್ಯಾಗಳ ಯುದ್ಧನೌಕೆಗಳು ಮತ್ತು ವಿಮಾನಗಳು ಪರಸ್ಪರರ ಪ್ರದೇಶಗಳಲ್ಲಿ ಕಾರ್ಯಾಚರಿಸಲು, ಯಾವುದೇ ವಿಳಂಬವಿಲ್ಲದೆ ಇಂಧನ ಮರುಪೂರಣ ನಡೆಸಲು, ಬಿಡಿಭಾಗಗಳನ್ನು ಹೊಂದಲು ಮತ್ತು ನಿರ್ವಹಣೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳನ್ನು ಯಾವುದೇ ವಿಳಂಬವಿಲ್ಲದೆ, ಸುಗಮವಾಗಿ ನಡೆಸಬಹುದು.

ಸ್ಟೇಟ್ ಡುನಾ ದಾಖಲೆಗಳ ಪ್ರಕಾರ, ಪ್ರಸ್ತುತ ರಕ್ಷಣಾ ಒಪ್ಪಂದ ಉಭಯ ದೇಶಗಳಿಗೂ ಯುದ್ಧ ನೌಕೆಗಳ ಭೇಟಿ ಸೇರಿದಂತೆ, ಪರಸ್ಪರರ ವಾಯು ಪ್ರದೇಶ ಮತ್ತು ಬಂದರುಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಅಂದರೆ, ಇದರ ಪರಿಣಾಮವಾಗಿ ಭಾರತಕ್ಕೆ ರಷ್ಯಾ ಅತಿದೊಡ್ಡ ಉಪಸ್ಥಿತಿ ಮತ್ತು ಮಿಲಿಟರಿ ಸೌಲಭ್ಯಗಳನ್ನು ಹೊಂದಿರುವ ಆರ್ಕ್ಟಿಕ್ ಪ್ರದೇಶಕ್ಕೂ ಪ್ರವೇಶ ದೊರೆಯುತ್ತದೆ.

ರಿಲೋಸ್ನಂತಹ ಒಪ್ಪಂದ ಬಹಳಷ್ಟು ಸಮಯ ಉಳಿಸಿ, ದೇಶದ ಮಿಲಿಟರಿಗೆ ತುರ್ತು ಇಂಧನ ಮರುಪೂರಣ, ನಿಲುಗಡೆ, ಅಥವಾ ವೈಮಾನಿಕ ವ್ಯವಸ್ಥೆಗಳ ಬಳಕೆಯ ಅಗತ್ಯವಿದ್ದಾಗ ನಿರಂತರವಾಗಿ ಕಾಗದ ಪತ್ರಗಳ ಕೆಲಸ ಮಾಡುವುದನ್ನು ತಪ್ಪಿಸುತ್ತದೆ. ಇದು ಉಭಯ ದೇಶಗಳಿಗೂ ಖರ್ಚು ಮತ್ತು ಶುಲ್ಕಗಳನ್ನು ಸುಲಭವಾಗಿ, ಕಾಲಕ್ರಮೇಣ ಪಾವತಿಸಲು ಅವಕಾಶ ಮಾಡಿಕೊಡುತ್ತದೆ.

ಭಾರತ - ರಷ್ಯಾ ರಿಲೋಸ್ ಒಪ್ಪಂದ ಹೊಸದೇನಲ್ಲ

ಭಾರತ ಹಿಂದೆಯೂ ಅಮೆರಿಕ, ಯುನೈಟೆಡ್ ಕಿಂಗ್ಡಮ್, ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್, ಸಿಂಗಾಪುರ, ದಕ್ಷಿಣ ಕೊರಿಯಾ, ವಿಯೆಟ್ನಾಂ ಸೇರಿದಂತೆ ಹಲವು ದೇಶಗಳೊಡನೆ ಇಂತಹ ಒಪ್ಪಂದಕ್ಕೆ ಸಹಿ ಹಾಕಿದೆ.

ಭಾರತ 2016ರಲ್ಲಿ ಅಮೆರಿಕದೊಡನೆ ಲಾಜಿಸ್ಟಿಕ್ಸ್ ಎಕ್ಸ್ಚೇಂಜ್ ಮೆಮೊರೆಂಡಂ ಆಫ್ ಅಗ್ರಿಮೆಂಟ್ (ಎಲ್ಇಎಂಒಎ) ಸಹಿ ಹಾಕಿದ ಬಳಿಕ ಇಂತಹ ಒಪ್ಪಂದಗಳ ಮೌಲ್ಯವನ್ನು ಅರ್ಥ ಮಾಡಿಕೊಂಡಿತು.

ರಷ್ಯಾ - ಭಾರತ ರಿಲೋಸ್ ಒಪ್ಪಂದವೂ ಹಲವು ವರ್ಷಗಳಿಂದ ಪ್ರಗತಿಯಲ್ಲಿತ್ತು. ವಾಸ್ತವವಾಗಿ 2019ರಲ್ಲಿ ರಷ್ಯಾದ ವ್ಲಾಡಿವೊಸ್ತೊಕ್ ನಲ್ಲಿ ನಡೆದ ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲು ತೆರಳಿದಾಗ ಈ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಆದರೆ, ಹಲವು ವಿಳಂಬಗಳ ಪರಿಣಾಮವಾಗಿ, ನವದೆಹಲಿ ಮತ್ತು ಮಾಸ್ಕೋಗಳು ಒಪ್ಪಂದದ ಕರಡಿಗೆ ಕಳೆದ ಜೂನ್ ತಿಂಗಳಲ್ಲಷ್ಟೇ ಅನುಮೋದನೆ ನೀಡಿದವು.

ರಿಲೋಸ್ ಒಪ್ಪಂದದಿಂದ ಭಾರತ ಮತ್ತು ರಷ್ಯಾಗಳಿಗೆ ಏನು ಪ್ರಯೋಜನ?

ರಿಲೋಸ್ನಂತಹ ಲಾಜಿಸ್ಟಿಕ್ ಒಪ್ಪಂದಗಳು ಭಾರತ ಮತ್ತು ರಷ್ಯಾ ಎರಡಕ್ಕೂ ಬಹಳ ಉಪಯುಕ್ತವಾಗಿವೆ. ಇದು ಎರಡೂ ದೇಶಗಳ ಪಾಲಿಗೆ ಗೆಲುವು ಎಂದು ಬಹಳಷ್ಟು ಜನರು ಅಭಿಪ್ರಾಯ ಪಡುತ್ತಾರೆ.

ರಿಲೋಸ್ ಒಪ್ಪಂದ ಭಾರತದ ಪಾಲಿಗೆ ಕೇವಲ ಜಂಟಿ ಯೋಜನೆಗಳ ಸಂದರ್ಭದಲ್ಲಿ ಮಿಲಿಟರಿ ಬೆಂಬಲವನ್ನು ಸುಲಭವಾಗಿಸುವುದು ಮತ್ತು ಅಗ್ಗವಾಗಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಜಾಗತಿಕ ರಕ್ಷಣಾ ಸಹಕಾರದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಕಾರ್ಯತಂತ್ರದ ಹೆಜ್ಜೆಯೂ ಹೌದು.

ಮನೋಹರ್ ಪರಿಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್ (ಐಡಿಎಸ್ಎ) ವರದಿಯ ಪ್ರಕಾರ, ರಷ್ಯಾ ಜೊತೆಗಿನ ರಿಲೋಸ್ ಒಪ್ಪಂದ ಭಾರತಕ್ಕೆ ಆರ್ಕ್ಟಿಕ್ ಪ್ರದೇಶದಲ್ಲಿರುವ ರಷ್ಯನ್ ನೌಕಾಪಡೆಯ ಬಂದರುಗಳನ್ನು ಬಳಸಲು ಅವಕಾಶ ನೀಡುತ್ತದೆ. ಇದರಿಂದ ಭಾರತೀಯ ನೌಕಾಪಡೆಗೆ ಹೆಚ್ಚಿನ ವ್ಯಾಪ್ತಿ ಲಭಿಸಿ, ಧ್ರುವ ಪ್ರದೇಶಗಳ ಸಮುದ್ರದಲ್ಲಿ ಕಾರ್ಯಾಚರಿಸುವ ಅನುಭವ ಒದಗಿಸುತ್ತದೆ.

ಇದು ವ್ಲಾಡಿವೊಸ್ಕೋವ್ನಿಂದ ಮುರ್ಮಾನ್ಸ್ಕ್ ತನಕದ ನಾರ್ದನ್ ಸೀ ಮಾರ್ಗದಾದ್ಯಂತ ಇರುವ ರಷ್ಯನ್ ನೌಕಾನೆಲೆಗಳನ್ನು ಬಳಸಲು ಭಾರತಕ್ಕೆ ಅವಕಾಶ ಮಾಡಿಕೊಡಲಿದೆ. ಇದು ಈಗ ಭಾರತೀಯ ನೌಕಾಪಡೆ ಅತ್ಯಂತ ಕಡಿಮೆ ವ್ಯಾಪ್ತಿ ಹೊಂದಿರುವ ಧ್ರುವ ಪ್ರದೇಶಗಳ ಸಮುದ್ರವನ್ನು ತಲುಪಲು ಭಾರತೀಯ ನೌಕಾಪಡೆಯನ್ನು ಬಲಪಡಿಸಲಿದೆ. ಅದರೊಡನೆ, ಆರ್ಕ್ಟಿಕ್ ಪ್ರದೇಶದಲ್ಲಿ ಭಾರತದ ವೈಜ್ಞಾನಿಕ ಕಾರ್ಯಗಳಿಗೆ ಬೆಂಬಲ ನೀಡಲಿದೆ.

ಭಾರತೀಯ ಸೇನಾಪಡೆಗಳ ಸುಖೋಯಿ ಯುದ್ಧ ವಿಮಾನಗಳು, ಟಿ-90 ಟ್ಯಾಂಕ್ಗಳು, ಮತ್ತು ಎಸ್-400 ಸಿಸ್ಟಮ್ಗಳು ಸೇರಿದಂತೆ ಸಾಕಷ್ಟು ಪ್ರಮುಖ ಆಯುಧಗಳು ರಷ್ಯಾ ನಿರ್ಮಿತವಾಗಿವೆ. ರಷ್ಯಾದ ಲಾಜಿಸ್ಟಿಕ್ ಜಾಲದೊಡನೆ ಸಂಪರ್ಕ ಸಾಧಿಸುವುದರಿಂದ, ಈ ಉಪಕರಣಗಳಿಗೆ ಸುಗಮ ಬೆಂಬಲ ಮತ್ತು ನಿರ್ವಹಣೆ ಲಭಿಸುತ್ತದೆ.

ಒಂದು ವೇಳೆ ಸರಿಯಾಗಿ ಜಾರಿಗೊಂಡರೆ, ರಿಲೋಸ್ ಭಾರತಕ್ಕೆ ನೈಜ ಜಾಗತಿಕ ನೌಕಾ ಶಕ್ತಿಯಾಗಿ ಹೊರಹೊಮ್ಮಲು ಅವಶ್ಯಕವಾದ ಪ್ರಬಲ ಲಾಜಿಸ್ಟಿಕ್ಸ್ ಬೆಂಬಲ ಒದಗಿಸುತ್ತದೆ.

ರಷ್ಯಾಗೂ ರಿಲೋಸ್ ಒಪ್ಪಂದದಿಂದ ಪ್ರಯೋಜನವಿದೆ. ಇದು ಉಕ್ರೇನ್ ಯುದ್ಧದ ಕಾರಣದಿಂದ ವಿಧಿಸಲ್ಪಟ್ಟಿರುವ ನಿರ್ಬಂಧಗಳ ಕಾರಣದಿಂದ ಜಾಗತಿಕವಾಗಿ ಏಕಾಂಗಿಯಾಗಿರುವ ರಷ್ಯಾಗೆ ಜಾಗತಿಕ ಉಪಸ್ಥಿತಿ ಹೊಂದಲು ನೆರವಾಗುತ್ತದೆ. ಭಾರತಕ್ಕೆ ಹೇಗೆ ಆರ್ಕ್ಟಿಕ್ ಪ್ರದೇಶಕ್ಕೆ ಪ್ರವೇಶ ಲಭಿಸುತ್ತದೆಯೋ, ಅದೇ ರೀತಿ ರಷ್ಯಾಗೆ ಹಿಂದೂ ಮಹಾಸಾಗರಕ್ಕೆ ಪ್ರವೇಶ ಸಿಗುತ್ತದೆ. ಇದು ರಷ್ಯಾಗೆ ಏಷ್ಯಾದಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿ, ಅತ್ಯಂತ ವೆಚ್ಚದಾಯಕವಾದ ಶಾಶ್ವತ ನೆಲೆಗಳನ್ನು ನಿರ್ಮಿಸದೆ ಚೀನಾದ ಪ್ರಭಾವವನ್ನು ನಿಭಾಯಿಸಲು ಅವಕಾಶ ಮಾಡಿಕೊಡುತ್ತದೆ.

ರಿಲೋಸ್ನಂತಹ ಒಪ್ಪಂದಗಳು ಭಾರತಕ್ಕೆ ಏಕೆ ಮುಖ್ಯ?

ಹಲವಾರು ವರ್ಷಗಳ ಕಾಲ ಇಂತಹ ಒಪ್ಪಂದಗಳ ಲಾಭ ನಷ್ಟಗಳ ಕುರಿತು ಚರ್ಚೆ ನಡೆಸಿದ ಬಳಿಕ ರಷ್ಯಾದ ಜೊತೆಗಿನ ರಿಲೋಸ್ ಒಪ್ಪಂದ ಜಾರಿಗೆ ಬರುತ್ತಿದೆ. ಭಾರತ ಈ ರೀತಿಯ ಒಪ್ಪಂದಗಳಿಗೆ ಮೊದಲ ಒಪ್ಪಿಗೆಯನ್ನು ಕೇವಲ 2016ರಲ್ಲಿ ನೀಡಿತ್ತು.

ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನಡೆಗಳನ್ನು ಗಮನಿಸಿದ ಬಳಿಕವೇ ಭಾರತಕ್ಕೆ ಇಂತಹ ಒಪ್ಪಂದಗಳ ಮೌಲ್ಯ ಅರಿವಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತೀಯ ನೌಕಾಪಡೆ ಹಲವು ರೀತಿಯ ಕಾರ್ಯಾಚರಣೆಗಳಿಗೆ ತನ್ನ ನೌಕಾಪಡೆಯನ್ನು ಬಳಸುವುದರಿಂದ, ಇಂತಹ ಒಪ್ಪಂದಗಳು ಭಾರತಕ್ಕೆ ನೆರವಾಗುತ್ತವೆ ಎಂದು ಕಮಾಂಡರ್ ಅನಿಲ್ ಜೈ ಸಿಂಗ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ 12ರಿಂದ 15 ಭಾರತೀಯ ಯುದ್ಧ ನೌಕೆಗಳು ಸ್ವತಂತ್ರವಾಗಿ ವಿವಿಧ ಉದ್ದೇಶಗಳಿಗೆ ಕಾರ್ಯಾಚರಿಸುತ್ತಿವೆ. ಅವೆಂದರೆ:

* ಹಿಂದೂ ಮಹಾಸಾಗರದ ಬಳಿಯ ಪ್ರಮುಖ ಪರೀಕ್ಷಾ ಸ್ಥಳಗಳನ್ನು ಗಮನಿಸುವುದು

* ಸುಗಮ ವ್ಯಾಪಾರ ನಡೆಯುವಂತೆ ನೋಡಿಕೊಳ್ಳುವುದು

* ಸಮುದ್ರ ವ್ಯವಸ್ಥೆಯಲ್ಲಿ ಜಾಗೃತಿ ಮೂಡಿಸುವುದು

* ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಒದಗಿಸುವುದು

* ಅಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕ ಅಪಾಯಗಳನ್ನು ನಿರ್ವಹಿಸುವುದು

* ಇತರ ಪ್ರಮುಖ ಕರ್ತವ್ಯಗಳನ್ನು ನಿರ್ವಹಿಸುವುದು

ಪ್ರತಿಯೊಂದು ಯುದ್ಧ ನೌಕೆಗೂ ತನ್ನ ಸ್ವಂತ ಬೆಂಬಲ ನೌಕೆಗಳೊಡನೆ ಸಾಗಲು ಸಾಧ್ಯವಿಲ್ಲ. ಆದ್ದರಿಂದ, ಮಿತ್ರ ರಾಷ್ಟ್ರಗಳ ಬಂದರುಗಳಲ್ಲಿ ಲಾಜಿಸ್ಟಿಕ್ ಮತ್ತು ನಿರ್ವಹಣಾ ನೆರವು ಪಡೆಯುವುದು ಇಂತಹ ಯೋಜನೆಗಳ ಯಶಸ್ಸಿಗೆ ಮುಖ್ಯವಾಗಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.