‘ರೀ... ನಮ್ ಕಮಲಕ್ಕನ ಎಲೆಕ್ಷನ್ ಏನಾಗಬೋದು? ಗೆಲ್ತಾರ?’ ಮಡದಿ ಕೇಳಿದಳು.

‘ಯಾವ ಕಮಲಕ್ಕ? ಕರ್ನಾಟಕ ಆರ್ ಡೆಲ್ಲಿ?’

‘ನಿಮ್ತೆಲಿ, ನಾ ಕೇಳಿದ್ದು ಅಮೆರಿಕದ ಕಮಲಕ್ಕ. ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷರಾಗ್ತಾರಾ ಅಂತ’.

‘ಓ... ಅವರಾ? ಅಲ್ಲಿ ಟ್ರಂಪ್ ಪ್ಲಸ್ ಒನ್ ಬುಲೆಟ್ ಒಂದು ಕಡೆ, ಕಮಲಾ ಪ್ಲಸ್ ಬೈಡನ್ ಪ್ಲಸ್ ಒಬಾಮ ಇನ್ನೊಂದು ಕಡೆ. ರಾಜಕೀಯ ತೂಕ ನಮ್ ಕಡೀಗೇ ಇದೆ. ಗೆದ್ರೂ ಗೆಲ್ಲಬಹುದು’.

‘ಕರ್ನಾಟಕದಲ್ಲಿ ನಿಮ್ ಕಮಲಕ್ಕನ ಪಾದಯಾತ್ರೆ ನಡೆಯುತ್ತಾ?’

‘ಅದಕ್ಕೆ ತೆನೆಯಕ್ಕ ಅಡ್ಡಿಯಾಗಿದ್ಲು, ಈಗ ಪ್ಯಾಚಪ್ ಆಗೇತಂತೆ...’

‘ಯಾಕೆ, ಒಂದಾಗಿದ್ರಲ್ಲ? ಆಗ್ಲೇ ಬಿಟ್ಟೋಯ್ತಾ?’

‘ಬಿಟ್ಟೋಗಿಲ್ಲ... ಅದು ‘ವಿಷ’ದ ರಾಜಕೀಯ’.

‘ಕಮಲಕ್ಕನ ಪಾದಯಾತ್ರೆ ವಿರುದ್ಧ ಕಮಲ ಪಕ್ಷದೋರೇ ಇನ್ನೊಂದು ಪಾದಯಾತ್ರೆ ಮಾಡ್ತಾರಂತೆ?’

‘ಅದು ಭಿನ್ನ ರಾಜಕೀಯ. ಕಮಲೇ
ಕಲಹೋತ್ಪತ್ತಿಹಿ...’

‘ಕಮಲಕ್ಕ ಪಾದಯಾತ್ರೆ ಮಾಡ್ತಿರೋದು ಬಂಡೇನ ಮುಖ್ಯಮಂತ್ರಿ ಮಾಡಾಕೆ ಅಂತ ವಿಜಯಪುರದ ಹುಲಿ ಹೇಳ್ತಿತ್ತು?’

‘ಅದು ಒಳರಾಜಕೀಯ... ಇದ್ರೂ ಇರಬೋದು...’

‘ಆಮೇಲೆ ಮೊನ್ನೆ ಬಂಡೆ ಸಾಹೇಬ್ರು ಡೆಲ್ಲೀಲಿ ನಮೋ ಸಾಹೇಬ್ರನ್ನ ಭೆಟ್ಟಿಯಾಗಿ ಖುಷ್ ಖುಷಿಯಾಗಿ ಮಾತಾಡಿದ್ರಂತೆ?’

‘ಅದು ಪಕ್ಕಾ ಲೆಕ್ಕಾಚಾರದ ರಾಜಕೀಯ’.

‘ಹೇ ಹೋಗ್ರಿ... ನಂಗೆ ತೆಲಿಬುಡ ಅರ್ಥ ಆಗಾವಲ್ದು, ಈ ರಾಜಕೀಯದಲ್ಲಿ ಎಷ್ಟು ನಮೂನಿ ರಾಜಕೀಯ ಅದಾವೆ?’

‘ಬಹಳ ಅದಾವೆ. ಒಣ ರಾಜಕೀಯ, ಬಣ ರಾಜಕೀಯ, ಹೆಣ ರಾಜಕೀಯ, ಹಣದ ರಾಜಕೀಯ, ಜಾತಿ ರಾಜಕೀಯ, ದ್ವೇಷ-
ಹೊಂದಾಣಿಕೆ ರಾಜಕೀಯ... ಸಾಕಾ ಬೇಕಾ?’

‘ಸಾಕು, ಈಗ ಹೇಳ್ರಿ, ಈ ರಾಜಕೀಯ ಅಂದ್ರೇನು?’

‘ಅದು ನನಗೆ ಅರ್ಥ ಆದ ಮೇಲೆ ನಿನಗೆ ಹೇಳ್ತೀನಿ, ಹೋಗಿ ಒಂದ್ ಕಪ್ ಕಾಫಿ ಮಾಡ್ಕೊಂಡ್ ಬಾ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.