ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಯೇ ಮೇರಾ ಇಂಡಿಯಾ

Published : 19 ಜುಲೈ 2023, 18:13 IST
Last Updated : 19 ಜುಲೈ 2023, 23:14 IST
ಫಾಲೋ ಮಾಡಿ
Comments

– ಗುರು ಪಿ.ಎಸ್.

‘ಹರೇ ರಾಮ, ಹರೇ ರಾಮ, ರಾಮ ರಾಮ ಹರೇ, ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ’ ಸ್ಕೂಲ್ ಡೇ ಕಾರ್ಯಕ್ರಮದಲ್ಲಿ ಮಗಳು ಈ ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ ಖುಷಿಯಲ್ಲಿ ತೇಲತೊಡಗಿದ ಮುದ್ದಣ್ಣ. 

ಹಾಡು ಮುಂದುವರಿಯಿತು, ‘ವಿ ವಾಂಟ್ ಟು ಗೋ ಅಮೆರಿಕ…’

ಮುದ್ದಣ್ಣಂಗೆ ಇನ್ನೂ ಖುಷಿಯಾಯಿತು. ಹಾಡು ಮುಂದುವರಿಯಿತು. 

‘ಲಂಡನ್ ದೇಖಾ, ಪ್ಯಾರಿಸ್ ದೇಖಾ...’

‘ಹ್ಞೂಂ... ಹ್ಞೂಂ... ಕಂಟಿನ್ಯೂ, ಕಂಟಿನ್ಯೂ...’ ಮುದ್ದಣ್ಣನ ಖುಷಿಯೊಂದಿಗೆ ಹಾಡೂ ಮುಂದುವರಿಯಿತು. 

‘ಯೇ ಮೇರಾ ಇಂಡಿಯಾ, ಯೇ ಮೇರಾ ಇಂಡಿಯಾ, ಐ ಲವ್ ಮೈ ಇಂಡಿಯಾ, ಐ ಲವ್ ಮೈ ಇಂಡಿಯಾ...’

‘ಸ್ಟಾಪ್ ಇಟ್’ ಸಿಟ್ಟಿನಲ್ಲಿ ಎದ್ದ ಮುದ್ದಣ್ಣ, ಮಗಳನ್ನು ಎಳೆದುಕೊಂಡು ಮನೆಗೆ ಕರೆದೊಯ್ದ. 

‘ಯಾಕಪ್ಪ, ನನ್ನ ಡಾನ್ಸ್, ಹಾಡನ್ನ ಅಷ್ಟು ಎಂಜಾಯ್ ಮಾಡ್ತಿದ್ದೆ. ಯಾಕೆ ಸಡನ್ ಆಗಿ ಸ್ಟಾಪ್ ಮಾಡಿಸಿಬಿಟ್ಟೆ’ ಮುಗ್ಧವಾಗಿ ಕೇಳಿದಳು ಮಗಳು.

‘ಇನ್ಮುಂದೆ ಇಂಡಿಯಾ ಅನ್ನೋ ಪದ ಈ ಮನೆಯಲ್ಲಿ ಕೇಳಿಬರಬಾರದು’ ಕಟ್ಟಪ್ಪಣೆ ಹೊರಬಿತ್ತು. 

‘ಅಪ್ಪಾ, ಇಂಡಿಯಾ ಅಂದ್ರೆ ಜೀವಾನೇ ಬಿಡ್ತಿದ್ದೆ, ಈಗೇನಾಯ್ತಪ್ಪ’.

ಮನದಲ್ಲಾಗುತ್ತಿರುವ ತಳಮಳವನ್ನು ತೋರಿಸಿಕೊಳ್ಳಲಾಗದೆ, ‘ಅದೆಲ್ಲ ನಿನಗೆ ಗೊತ್ತಾಗಲ್ಲ. ಇನ್ಮುಂದೆ ಭಾರತ ಅನ್ನು’.

‘ಭಾರತ, ಇಂಡಿಯಾ ಎರಡೂ ಒಂದೇ ಅಲ್ವೇನಪ್ಪ...’

‘ಒಂದ್ ಸಲ ಹೇಳಿದ್ರೆ ಅರ್ಥವಾಗಲ್ವೇನಮ್ಮ ನಿಂಗೆ, ಇಂಡಿಯಾ ಮಾತ್ರ ಅನ್ನಬೇಡ, ಭಾರತ ಅನ್ನು, ತಿಳೀತಾ?’ ಸಿಟ್ಟಲ್ಲಿ ಹೇಳಿದ ಮುದ್ದಣ್ಣ. 

ಅಪ್ಪನ ಕೋಪ ಕಂಡು ಮಗಳು ಅಳತೊಡಗಿದಳು. ಚಾಕೊಲೇಟ್ ಕೊಟ್ಟು ಮಗಳನ್ನು ಮುದ್ದಿಸಿದ ಮುದ್ದಣ್ಣ, ಹೊಟ್ಟೆಯಲ್ಲಾಗುತ್ತಿರುವ ಅಪಾರ ಸಂಕಟಕ್ಕೆ ತನ್ನನ್ನೇ ಶಪಿಸಿಕೊಳ್ಳತೊಡಗಿದ.

ಮಗಳು ಮತ್ತೆ ಗುನುಗುತ್ತಾ ಹೊರಟಳು, ‘ಯೇ ಮೇರಾ ಇಂಡಿಯಾ, ಐ ಲವ್ ಮೈ ಇಂಡಿಯಾ...’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT