‘ಡಿಜಿಟಲ್ ಇಂಡಿಯಾ’ ಅಭಿಯಾನ ಶುರುವಾಗಿ ಈ ತಿಂಗಳಿಗೆ 10 ವರ್ಷಗಳು ಪೂರ್ಣಗೊಂಡಿವೆ. ಈ ಅಭಿಯಾನವು ವ್ಯಾಪಾರ ವಹಿವಾಟು ನಡೆಯುವ ಬಗೆಯನ್ನು ಹಾಗೂ ದೇಶದ ಕೋಟ್ಯಂತರ ಜನರ ಬದುಕಿನ ರೀತಿಯನ್ನು ಬದಲಾಯಿಸಿದೆ. ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ, ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ತಂತ್ರಜ್ಞಾನದ ಮೂಲಕ ತಗ್ಗಿಸಲು ನೆರವಾಗುವ ಗುರಿಯೊಂದಿಗೆ ಈ ಅಭಿಯಾನವನ್ನು ಆರಂಭಿಸಲಾಯಿತು. ಆ ಕೆಲಸ ಈಗಲೂ ಚಾಲ್ತಿಯಲ್ಲಿದೆ. ಆದರೆ, ‘ಡಿಜಿಟಲ್ ಇಂಡಿಯಾ’ ಅಭಿಯಾನವು, ಸರ್ಕಾರದ ನೀತಿಗಳ ಬೆಂಬಲದೊಂದಿಗೆ ಜಾರಿಗೆ ಬಂದ ಇತರ ಹಲವು ಯೋಜನೆಗಳಿಗಿಂತ ಹೆಚ್ಚಿನ ಪರಿಣಾಮವನ್ನು ಬಹಳ ಕಡಿಮೆ ಅವಧಿಯಲ್ಲಿ ಜನರ ಮೇಲೆ ಬೀರಿದೆ ಎಂದರೆ ಅತಿಶಯೋಕ್ತಿ ಆಗಲಾರದು. 2014ರಲ್ಲಿ, ದೇಶದಲ್ಲಿ 25 ಕೋಟಿ ಜನರಿಗೆ ಇಂಟರ್ನೆಟ್ ಸೇವೆ ಲಭ್ಯವಿತ್ತು. ಆದರೆ, ಎರಡು ವರ್ಷಗಳ ಹಿಂದೆ, 97 ಕೋಟಿಗೂ ಹೆಚ್ಚು ಜನರಿಗೆ ಇಂಟರ್ನೆಟ್ ಸೌಲಭ್ಯ ಲಭ್ಯವಾಗಿದೆ. ಎಲ್ಲ ಬಗೆಯ ಡಿಜಿಟಲ್ ಪಾವತಿಗಳು ಭಾರಿ ಪ್ರಮಾಣದಲ್ಲಿ ಹೆಚ್ಚಳ ಕಂಡಿವೆ. 2022–23ರಲ್ಲಿ ಯುಪಿಐ ವ್ಯವಸ್ಥೆ ಮೂಲಕ ₹139 ಲಕ್ಷ ಕೋಟಿ ಮೊತ್ತದ ಒಟ್ಟು 8,375 ಕೋಟಿ ಪಾವತಿಗಳನ್ನು ಮಾಡಲಾಗಿದೆ. 2017–18ರಲ್ಲಿ ಯುಪಿಐ ವ್ಯವಸ್ಥೆಯ ಮೂಲಕ ಆದ ಪಾವತಿಗಳ ಸಂಖ್ಯೆ 92 ಕೋಟಿ ಮಾತ್ರವೇ ಆಗಿತ್ತು. ಈಗ ಯುಪಿಐ ವ್ಯವಸ್ಥೆ ಮೂಲಕ ಆಗುವ ಪಾವತಿಗಳ ಸಂಖ್ಯೆಯು ಇನ್ನೂ ಹೆಚ್ಚಾಗಿರಬಹುದು.

ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವು ಅರ್ಹರಿಗೆ ‘ನೇರ ನಗದು ವರ್ಗಾವಣೆ’ (ಡಿಬಿಟಿ) ರೂಪದಲ್ಲಿ ದೊರೆತ ಕಾರಣದಿಂದಾಗಿ ಈ ಅಭಿಯಾನವು ಬಹಳಷ್ಟು ಜನರಿಗೆ ಪ್ರಯೋಜನಕಾರಿ ಆಯಿತು. ₹44 ಲಕ್ಷ ಕೋಟಿ ಮೊತ್ತವು ಅರ್ಹ ಫಲಾನುಭವಿ ಗಳಿಗೆ ಸರ್ಕಾರದಿಂದ ನೇರವಾಗಿ ವರ್ಗಾವಣೆ ಆಗುವುದಕ್ಕೆ ‘ಡಿಬಿಟಿ’ ಸಹಾಯ ಮಾಡಿತು. ಇದರಿಂದಾಗಿ, ಯೋಜನೆಗಳ ಲಾಭವನ್ನು ತಲುಪಿಸುವ ಪ್ರಕ್ರಿಯೆಯಲ್ಲಿ ಆಗುತ್ತಿದ್ದ ₹3.48 ಲಕ್ಷ ಕೋಟಿ ಸೋರಿಕೆ ತಡೆಯಲು ಸಾಧ್ಯವಾಗಿದೆ. ಸರ್ಕಾರದ ಕೆಲಸವು ಹೆಚ್ಚು ಪರಿಣಾಮಕಾರಿ ಆಯಿತು, ನಷ್ಟ ಮತ್ತು ಸೋರಿಕೆಯ ಪ್ರಮಾಣ ಕಡಿಮೆ ಆಯಿತು, ಹಣಕಾಸು ವ್ಯವಸ್ಥೆಯು ಹೆಚ್ಚು ಜನರನ್ನು ತಲುಪಿತು. ಹಣಕಾಸು ಮಾತ್ರವೇ ಅಲ್ಲದೆ, ‘ಡಿಜಿಟಲ್ ಇಂಡಿಯಾ’ ಅಭಿಯಾನವು ಸಾರಿಗೆ ಮತ್ತು ಸಂವಹನ, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಕೃಷಿ ಮತ್ತು ಮನರಂಜನಾ ವಲಯದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದಿದೆ. ಈ ಎಲ್ಲ ವಲಯಗಳಲ್ಲಿನ ಚಟುವಟಿಕೆಗಳನ್ನು ನಡೆಸುವುದಕ್ಕೆ ಹೊಸದೊಂದು ವಿಧಾನ ದೊರಕಿದೆ. ದೇಶದಾದ್ಯಂತ 42 ಲಕ್ಷ ಕಿ.ಮೀ.ಗಿಂತ ಹೆಚ್ಚಿನ ಉದ್ದದ ಆಪ್ಟಿಕಲ್ ಫೈಬರ್ ಕೇಬಲ್ ಜಾಲದ ಅಳವಡಿಕೆ ಆಗಿದೆ; 4.8 ಲಕ್ಷ 5ಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಿಂದೆ ಇಂಟರ್ನೆಟ್ ಲಭ್ಯವಾಗದಿದ್ದ ಹಲವು ಸ್ಥಳಗಳಲ್ಲಿ ಈಗ ವೇಗದ ಇಂಟರ್ನೆಟ್ ಸಂಪರ್ಕ ಸಿಗುತ್ತಿದೆ. ಇ–ಆಡಳಿತ ಮತ್ತು ಡಿಜಿಟಲ್ ಸಾಕ್ಷರತೆಯ ಕಾರಣದಿಂದಾಗಿ ಹೆಚ್ಚಿನ ಮಟ್ಟದ ಪಾರದರ್ಶಕತೆ ಹಾಗೂ ದಕ್ಷತೆಯು ಸಾಧ್ಯವಾಗಿದೆ.

ಗಮನಾರ್ಹ ಯಶಸ್ಸಿನ ನಂತರವೂ ಡಿಜಿಟಲ್ ರಸ್ತೆಯಲ್ಲಿ ದೇಶವು ಸಾಗಬೇಕಾದ ಹಾದಿಯು ಇನ್ನೂ ಸುದೀರ್ಘವಾಗಿಯೇ ಇದೆ. ಮುಂದಿನ ದಿನಗಳಲ್ಲಿ ಎದುರಿಸ
ಬೇಕಿರುವ ಸವಾಲುಗಳು ಕೂಡ ಬಹಳಷ್ಟಿವೆ. ಡಿಜಿಟಲ್ ಸೇವೆಗಳ ಲಭ್ಯತೆಯಲ್ಲಿ, ಗುಣಮಟ್ಟದ ಸೇವೆಗಳ ಲಭ್ಯತೆಯಲ್ಲಿ ಗ್ರಾಮೀಣ ಪ್ರದೇಶಗಳು ಹಾಗೂ ನಗರ ಪ್ರದೇಶಗಳ ನಡುವಿನ ಅಂತರವು ದೊಡ್ಡದಾಗಿಯೇ ಇದೆ. ಸಮೀಕ್ಷೆಯೊಂದರ ಪ್ರಕಾರ, ನಗರ ಪ್ರದೇಶಗಳ ಶೇ 66ರಷ್ಟು ಮನೆಗಳಿಗೆ ಗುಣಮಟ್ಟದ ಇಂಟರ್ನೆಟ್ ಲಭ್ಯತೆ ಇದೆ. ಗ್ರಾಮೀಣ ಪ್ರದೇಶಗಳ ಶೇ 24ರಷ್ಟು ಮನೆಗಳಿಗೆ ಮಾತ್ರ ಈ ಲಭ್ಯತೆ ಇದೆ. ಗ್ರಾಮೀಣ ಪ್ರದೇಶ ಗಳಲ್ಲಿ ಇರುವ ಮಹಿಳೆಯರ ಪೈಕಿ ಶೇ 50ರಷ್ಟು ಮಂದಿಯ ಬಳಿ ಮೊಬೈಲ್ ಫೋನ್ ಇಲ್ಲ,ಶೇ 57ರಷ್ಟು ಶಾಲೆಗಳಲ್ಲಿ ಮಾತ್ರ ಕೆಲಸ ಮಾಡುತ್ತಿರುವ ಕಂಪ್ಯೂಟರ್ಗಳು ಇವೆ, ಶೇ 53ರಷ್ಟು ಶಾಲೆಗಳಿಗೆ ಮಾತ್ರ ಇಂಟರ್ನೆಟ್ ಸಂಪರ್ಕ ಇದೆ. ಹಳ್ಳಿಗಳಿಗೆ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ಒದಗಿಸುವ ‘ಭಾರತ್ನೆಟ್’ ಯೋಜನೆಯು ನಿಗದಿತ ಗುರಿಯನ್ನು ತಲುಪಿಲ್ಲ. ಸೈಬರ್ ಅಪರಾಧಗಳು ಹಾಗೂ ವಂಚನೆಗಳು ಹೆಚ್ಚುತ್ತಿವೆ, ಇಂತಹ ವಂಚನೆಗಳಿಗೆ ಸಿಲುಕಿ ಜನರು ಭಾರಿ ಪ್ರಮಾಣದಲ್ಲಿ ಹಣ ಕಳೆದುಕೊಂಡಿದ್ದಾರೆ. ವೈಯಕ್ತಿಕ ದತ್ತಾಂಶ ಹಾಗೂ ಖಾಸಗೀತನದ ರಕ್ಷಣೆಗೆ ಪರಿಣಾಮಕಾರಿ ಕಾನೂನು ಚೌಕಟ್ಟು ಇಲ್ಲದ ಕಾರಣದಿಂದಾಗಿ ಅವುಗಳ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.