ಮನೆಬಳಕೆಯ ವೆಚ್ಚಕ್ಕೆ ಸಂಬಂಧಿಸಿದ ಅಂಕಿ–ಅಂಶಗಳು ಜನ ತಮ್ಮಲ್ಲಿನ ಹಣವನ್ನು ಹೇಗೆ ಖರ್ಚು ಮಾಡುತ್ತಿದ್ದಾರೆ ಎಂಬ ಬಗ್ಗೆ ಬಹಳ ಉಪಯುಕ್ತವಾದ ಮಾಹಿತಿಯನ್ನು ನೀಡುತ್ತವೆ. ಅರ್ಥವ್ಯವಸ್ಥೆಯು ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದನ್ನೂ ಅವು ಹೇಳುತ್ತವೆ. ಮನೆಬಳಕೆಯ ವೆಚ್ಚಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಚೆಗೆ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು, ಕುಟುಂಬಗಳ ಸರಾಸರಿ ತಲಾವಾರು ಮಾಸಿಕ ವೆಚ್ಚದಲ್ಲಿ ಹೆಚ್ಚಳ ಆಗಿರುವುದನ್ನು ತೋರಿಸುತ್ತಿವೆ. ಅಲ್ಲದೆ, ನಗರ ಹಾಗೂ ಗ್ರಾಮೀಣ ಪ್ರದೇಶ
ಗಳಲ್ಲಿ ವಾಸಿಸುವವರ ವೆಚ್ಚದಲ್ಲಿನ ಅಂತರವು ಕಡಿಮೆ ಆಗಿರುವುದನ್ನು ಕೂಡ ಈ ಅಂಕಿ–ಅಂಶಗಳು ತೋರಿಸಿವೆ. ಆಹಾರ ವಸ್ತುಗಳ ಮೇಲಿನ ವೆಚ್ಚವು ಕೆಲವು ವರ್ಷಗಳಿಂದ ಕಡಿಮೆ ಆಗುತ್ತಿತ್ತು. ಆದರೆ ಅದು ಮತ್ತೆ ಹೆಚ್ಚಾಗಿರುವುದನ್ನು ಕೂಡ ಹೊಸ ವರದಿಯು ತೋರಿಸಿದೆ. 2023– 24ರಲ್ಲಿ ಗ್ರಾಮೀಣ ಪ್ರದೇಶಗಳ ಸರಾಸರಿ ಮಾಸಿಕ ತಲಾವಾರು ಮನೆಬಳಕೆ ವೆಚ್ಚವು ₹4,122ಕ್ಕೆ ಏರಿಕೆ ಆಗಿದೆ. ಇದು ಹಿಂದಿನ ವರ್ಷದಲ್ಲಿ ₹3,773 ಆಗಿತ್ತು. ನಗರ ಪ್ರದೇಶಗಳಲ್ಲಿ ಇದು 2022– 23ರಲ್ಲಿ ₹6,459 ಇದ್ದದ್ದು 2023– 24ರಲ್ಲಿ ₹6,996ಕ್ಕೆ ಹೆಚ್ಚಳವಾಗಿದೆ. ಮನೆಬಳಕೆ ವೆಚ್ಚದಲ್ಲಿ ಆಗಿರುವ ಏರಿಕೆಗೆ ದೊಡ್ಡ ಕಾರಣ ಹಣದುಬ್ಬರದಲ್ಲಿನ ಏರಿಕೆ. ಹಣದುಬ್ಬರದ ಏರಿಕೆಯನ್ನು ಲೆಕ್ಕಕ್ಕೆ ಪರಿಗಣಿಸಿದ ನಂತರದಲ್ಲಿ, ಮನೆಬಳಕೆ ವೆಚ್ಚದಲ್ಲಿ ಆಗಿರುವ ಹೆಚ್ಚಳವು ಶೇಕಡ 3.5ರಷ್ಟು ಆಗುತ್ತದೆ. ಆದರೆ ಈ ಏರಿಕೆಯು ದೇಶದ ಜಿಡಿಪಿ ಬೆಳವಣಿಗೆ ದರವಾದ ಶೇಕಡ 8.2ಕ್ಕಿಂತ ಬಹಳ ಕಡಿಮೆ ಎಂಬುದನ್ನು ಗಮನಿಸಬೇಕು.

ಒಟ್ಟು ವೆಚ್ಚದಲ್ಲಿ ಆಹಾರ ವಸ್ತುಗಳ ಮೇಲಿನ ವೆಚ್ಚದ ಪ್ರಮಾಣವು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ
ಹೆಚ್ಚಳ ಕಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇ 46.4ರಷ್ಟು ಇದ್ದದ್ದು ಶೇ 47.04ಕ್ಕೆ ಹೆಚ್ಚಳ ಕಂಡಿದೆ. ನಗರ ಪ್ರದೇಶಗಳಲ್ಲಿ ಇದು ಶೇ 39.17ರಷ್ಟು ಇದ್ದದ್ದು, ಶೇ 39.48ಕ್ಕೆ ಏರಿಕೆ ಆಗಿದೆ. 2011– 12ರಲ್ಲಿ ಆಹಾರ ವಸ್ತುಗಳ ಮೇಲಿನ ವೆಚ್ಚದ ಪ್ರಮಾಣಕ್ಕಿಂತ ಇದು ಕಡಿಮೆಯೇ ಆದರೂ, ಮನೆಬಳಕೆಯ ವೆಚ್ಚದ ಮೇಲೆ ಹಣದುಬ್ಬರದ ಪರಿಣಾಮವು ಹೇಗಿದೆ ಎಂಬುದನ್ನು ಇದು ತೋರಿಸುತ್ತಿದೆ. 2011– 12ರಲ್ಲಿ ಗ್ರಾಮೀಣ ಪ್ರದೇಶಗಳ ತಿಂಗಳ ಮನೆಬಳಕೆಯ ಸರಾಸರಿ ಖರ್ಚಿನಲ್ಲಿ ಆಹಾರ ವಸ್ತುಗಳ ಪ್ರಮಾಣವು ಶೇಕಡ 52.9ರಷ್ಟು ಇತ್ತು. ನಗರ ಪ್ರದೇಶಗಳಲ್ಲಿ ಇದು ಶೇ 42.62ರಷ್ಟು ಇತ್ತು. ಈ ದೀರ್ಘ ಅವಧಿಯಲ್ಲಿ ಆಹಾರ ವಸ್ತುಗಳಿಗೆ ಮಾಡುವ ವೆಚ್ಚದಲ್ಲಿ ಇಳಿಕೆ ಆಗಿರುವುದು ಒಳ್ಳೆಯದು ಎಂದೇ ಪರಿಗಣಿತವಾಗುತ್ತದೆ. ಏಕೆಂದರೆ, ಹೀಗೆ ಆದಾಗ ಜನರಿಗೆ ಇತರ ಅಗತ್ಯಗಳಾದ ಶಿಕ್ಷಣ, ಸಾರಿಗೆ, ಮನರಂಜನೆಯ ಮೇಲೆ ವೆಚ್ಚ ಮಾಡಲು ಹೆಚ್ಚು ಹಣ ಉಳಿದುಕೊಳ್ಳುತ್ತದೆ. ಆದರೆ, ತೀರಾ ಈಚಿನ ದಿನಗಳಲ್ಲಿ ಆಹಾರ ವಸ್ತುಗಳಿಗಾಗಿ ಹೆಚ್ಚು ವೆಚ್ಚ ಮಾಡಬೇಕಾದ ಸ್ಥಿತಿ ಬಂದಿರುವುದು ಕಳವಳಕಾರಿ ಸಂಗತಿ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಕುಟುಂಬಗಳ ಬಜೆಟ್ನಲ್ಲಿ ಇತರ ಅಗತ್ಯಗಳಿಗೆ ಮಾಡುವ ವೆಚ್ಚದ ಪ್ರಮಾಣವು ಇನ್ನೂ ಕಡಿಮೆ ಆಗಬಹುದು.

ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರ ಮನೆಬಳಕೆ ವೆಚ್ಚದಲ್ಲಿನ ಅಂತರವು ಕಡಿಮೆ ಆಗುತ್ತಿರುವುದು ಈ ಬಾರಿಯ ವರದಿಯಲ್ಲಿ ಇರುವ ಇನ್ನೊಂದು ಮುಖ್ಯವಾದ ಅಂಶ. ತಿಂಗಳ ಮನೆಬಳಕೆ ವೆಚ್ಚದ ಏರಿಕೆಯು ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಗಿಂತ ಹೆಚ್ಚು ತೀವ್ರವಾಗಿ ಇತ್ತು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ತಲಾವಾರು ವೆಚ್ಚದಲ್ಲಿನ ಅಂತರವು ಶೇ 84ರಷ್ಟು ಇದ್ದದ್ದು ದಶಕದ ಅವಧಿಯಲ್ಲಿ ಶೇ 70ಕ್ಕೆ ತಗ್ಗಿದೆ. ಗ್ರಾಮೀಣ ಪ್ರದೇಶಗಳ ಜನರ ಆದಾಯದಲ್ಲಿ ಏರಿಕೆ, ಡಿಜಿಟಲ್ ಪಾವತಿ ವ್ಯವಸ್ಥೆಗಳು ನೆಲೆಯನ್ನು ಹೆಚ್ಚು ಮಾಡಿಕೊಂಡಿದ್ದು ಹಾಗೂ ಗ್ರಾಮೀಣ ಸಮುದಾಯಗಳ ಆಕಾಂಕ್ಷೆಗಳು ಇನ್ನಷ್ಟು ಹಿಗ್ಗಿರುವುದು ಇದಕ್ಕೆ ಕಾರಣಗಳಾಗಿರಬಹುದು. ಇದು ಕೂಡ ಒಂದು ಒಳ್ಳೆಯ ಲಕ್ಷಣ. ಆದರೆ ಇದನ್ನು ಹೀಗೇ ಕಾಪಾಡಿಕೊಳ್ಳುವ ಸವಾಲು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.