‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿರುವುದು, ಖಾಸಗಿತನದ ಹಕ್ಕನ್ನು ಗೌರವಿಸುವ ದೃಷ್ಟಿಯಿಂದ ಅಗತ್ಯವಾಗಿತ್ತು.

ಭಾರತದಲ್ಲಿ ಮಾರಾಟವಾಗುವ ಮೊಬೈಲ್ ಫೋನ್ಗಳಲ್ಲಿ ತಯಾರಿಕೆಯ ಹಂತದಲ್ಲಿಯೇ ‘ಸಂಚಾರ ಸಾಥಿ’ ಆ್ಯಪ್ ಅಳವಡಿಸುವ ನಿರ್ದೇಶನವನ್ನು ಹಿಂದಕ್ಕೆ ತೆಗೆದುಕೊಂಡಿರುವುದು ಕೇಂದ್ರ ಸರ್ಕಾರಕ್ಕೆ ಅನಿವಾರ್ಯವಾದ ಕ್ರಮವಾಗಿತ್ತು. ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಸರ್ವಾಧಿಕಾರಕ್ಕೆ ಸಮಾನವಾದ ನಡೆಯಾಗಿದ್ದು, ಜನಧ್ವನಿಯನ್ನು ಹತ್ತಿಕ್ಕಲು ಸರ್ಕಾರ ನಡೆಸಿರುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ವಿಶ್ವದ ಪ್ರಮುಖ ಮೊಬೈಲ್ ಫೋನ್ ತಯಾರಿಕಾ ಕಂಪನಿಯಾದ ‘ಆ್ಯಪಲ್’, ತಾನು ತಯಾರಿಸುವ ಫೋನ್ಗಳಲ್ಲಿ ಆ್ಯಪ್ ಅಳವಡಿಸಲು ನಿರಾಕರಿಸಿತ್ತು. ಉತ್ತಮ ಉದ್ದೇಶ ಹೊಂದಿರುವ ಹಾಗೂ ಕಾನೂನುಬದ್ಧವಾದ ನಡೆ ಎಂದು ತನ್ನ ನಿಲುವನ್ನು ಸರ್ಕಾರ ಸಮರ್ಥಿಸಿಕೊಂಡರೂ, ಅಂತಿಮವಾಗಿ ಸಾರ್ವಜನಿಕ ಪ್ರತಿರೋಧಕ್ಕೆ ಮಣಿದಿದೆ. ಗ್ರಾಹಕರ ಸುರಕ್ಷತೆಯನ್ನು ಉತ್ತಮಗೊಳಿಸುವುದು, ಡಿಜಿಟಲ್ ವಿಶ್ವಾಸಾರ್ಹತೆಯನ್ನು ಬಲಗೊಳಿಸುವುದು ಹಾಗೂ ಸೈಬರ್ ಅಪರಾಧಗಳನ್ನು ತಡೆಗಟ್ಟುವ ದಿಸೆಯಲ್ಲಿ ಆ್ಯಪ್ ಅಳವಡಿಕೆ ಅಗತ್ಯವಾಗಿದ್ದ ಕ್ರಮ ಎಂದು ಸರ್ಕಾರ ಹೇಳಿತ್ತು. ಆದರೆ, ಸರ್ಕಾರದ ಪ್ರಯತ್ನಗಳು ಅನುಷ್ಠಾನಕ್ಕೆ ಬಂದಲ್ಲಿ ಜನರ ಖಾಸಗಿತನಕ್ಕೆ ಧಕ್ಕೆ ಉಂಟಾಗುವ ಅನುಮಾನ ಇದ್ದೇ ಇತ್ತು. ಬಹು ಮುಖ್ಯವಾಗಿ, ಗೋಪ್ಯತೆಯ ಹಕ್ಕುಗಳ ಉಲ್ಲಂಘನೆಯಾಗಿ, ನಾಗರಿಕರ ಮೇಲೆ ಸರ್ಕಾರದ ಕಣ್ಗಾವಲಿಗೆ ಅವಕಾಶ ದೊರೆಯುತ್ತದೆ ಎಂದು ಶಂಕಿಸಲಾಗಿತ್ತು. ನಾಗರಿಕರ ಹಕ್ಕುಗಳೊಂದಿಗೆ ಸರ್ಕಾರ ಈ
ಹಿಂದೆ ವ್ಯವಹರಿಸಿರುವ ನಿದರ್ಶನಗಳ ಹಿನ್ನೆಲೆಯಲ್ಲಿ ಈ ಶಂಕೆ ನಿರಾಧಾರ ಆದುದೇನೂ ಅಲ್ಲ. ಡಿಜಿಟಲ್
ವಿಶ್ವಾಸಾರ್ಹತೆ ಬಲಗೊಳ್ಳುತ್ತದೆ ಎಂದು ಸರ್ಕಾರ ಹೇಳುವುದನ್ನು ನಂಬಲು ಬಲವಾದ ಸಾಕ್ಷ್ಯಗಳೂ ಇಲ್ಲ. ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಮ್ ಆ್ಯಪ್ಗಳಿಗೆ ಸಿಮ್ ಕಾರ್ಡ್ಗಳು ನಿರಂತರ ಸಂಪರ್ಕ ಹೊಂದಿರಬೇಕು ಎನ್ನುವ ಪ್ರಸ್ತಾಪ, ಆ ಸೇವೆಗಳ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪದ ಪ್ರಯತ್ನವಾಗಿದೆ.

‘ಸಂಚಾರ ಸಾಥಿ’ ಆ್ಯಪ್ಗೆ ಸಂಬಂಧಿಸಿದ ಸರ್ಕಾರದ ನಡೆ ಸಂದೇಹಗಳಿಗೆ ಆಸ್ಪದ ಕಲ್ಪಿಸುವಂತಿದೆ ಹಾಗೂ
ಗೊಂದಲಗಳಿಂದ ಕೂಡಿದೆ. ಫೋನ್ ಗಳಲ್ಲಿ ತಯಾರಿಕೆ ಹಂತದಲ್ಲಿಯೇ ಆ್ಯಪ್ ಅಳವಡಿಸಬೇಕು ಎನ್ನುವ ನಿರ್ದೇಶನ ಈಗಾಗಲೇ ಬಳಕೆಯಲ್ಲಿರುವ ಫೋನ್ಗಳಲ್ಲಿಯೂ ಆ್ಯಪ್ ಅಳವಡಿಸಲು ಒತ್ತಡ ಹೇರುವಂತಿತ್ತು. ತಯಾರಿಕೆ ಸಂದರ್ಭದಲ್ಲಿ ಅಳವಡಿಸಲಾದ ಆ್ಯಪ್ ಅನ್ನು ಬಳಕೆದಾರರು ಅಳಿಸಲು ಸಾಧ್ಯವಾಗಬಾರದು ಎಂದು ಆರಂಭದಲ್ಲಿ ಹೇಳಲಾಗಿತ್ತಾದರೂ, ವಿರೋಧ ಎದುರಾದ ನಂತರ, ‘ಸಂಚಾರ ಸಾಥಿ ಅಪ್ಲಿಕೇಷನ್ ಉಳಿಸಿಕೊಳ್ಳಲು ಅಥವಾ ಅಳಿಸಲು ಬಳಕೆದಾರರು ಸ್ವತಂತ್ರರು’ ಎಂದು ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ ನೀಡಿದ್ದರು. ಆದರೆ, ಸಚಿವರ ಸ್ಪಷ್ಟನೆ ಎಲ್ಲ ಗೊಂದಲಗಳಿಗೆ ಉತ್ತರ ನೀಡುವಂತಿರಲಿಲ್ಲ ಹಾಗೂ ಅವರು ನೀಡಿದ ಭರವಸೆಗಳು ಎಲ್ಲ ಆತಂಕಗಳನ್ನು ದೂರ ಮಾಡುವಂತಿರಲಿಲ್ಲ. ವಂಚನೆಯ ಪ್ರಯತ್ನ ಗಳನ್ನು ವರದಿ ಮಾಡುವುದು, ಕಳವಾದ ಅಥವಾ ಕಾಣೆಯಾದ ಫೋನನ್ನು ಪತ್ತೆ ಹಚ್ಚಲು ನೆರವಾಗುವುದು ಸೇರಿದಂತೆ ಹಲವು ಸವಲತ್ತುಗಳನ್ನು ಹೊಂದಿರುವ ಸಂಚಾರ ಸಾಥಿ ಆ್ಯಪ್ ಬಳಕೆದಾರರ ಹಿತಾಸಕ್ತಿ ರಕ್ಷಿಸಲಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಇದ್ಯಾವುದೂ ಆ್ಯಪ್ ಅನ್ನು ಬಳಕೆದಾರರ ಮೇಲೆ ಕಡ್ಡಾಯವಾಗಿ ಹೇರಲು ಕಾರಣ ಆಗಬಾರದು.

ಬಳಕೆದಾರರ ಸಮ್ಮತಿ ಇಲ್ಲದೆಯೇ ಆ್ಯಪ್ ಅಳವಡಿಸುವುದು ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಕ್ಯಾಮೆರಾ, ಎಸ್ಎಂಎಸ್, ಮುಂತಾದವುಗಳ ಪ್ರವೇಶ ಆ್ಯಪ್ಗೆ ಲಭ್ಯವಾಗುವುದರಿಂದ ದೊಡ್ಡ ಪ್ರಮಾಣದ ಕಣ್ಗಾವಲಿಗೆ ಹಾಗೂ ಮಾಹಿತಿಯ ದುರುಪಯೋಗಕ್ಕೆ ಕಾರಣವಾಗಬಹುದು. ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಕಣ್ಗಾವಲಿಗೆ ಸರ್ಕಾರ ಪೆಗಾಸಸ್ ಕುತಂತ್ರಾಂಶ ಬಳಸಿದ ಆರೋಪವನ್ನು ಎದುರಿಸಿತ್ತು. ಈಗ, ಜನಸಾಮಾನ್ಯರ ಮೇಲೆ ನಿಗಾ ವಹಿಸಲು ಸಂಚಾರ ಸಾಥಿ ಆ್ಯಪ್ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪವನ್ನು ಸರ್ಕಾರ ಎದುರಿಸಬೇಕಾಯಿತು. ಆ್ಯಪ್ ಅಳಿಸುವ ಸ್ವಾತಂತ್ರ್ಯವಿದೆ ಎನ್ನುವುದು, ಸಮ್ಮತಿಯಿಲ್ಲದೆ ಫೋನ್ನಲ್ಲಿ ಆ್ಯಪ್ ಅಳವಡಿಸುವುದಕ್ಕೆ ನೀಡಿದ ಸಮ್ಮತಿ ಎಂದರ್ಥವಲ್ಲ. ನಾಗರಿಕರ ಖಾಸಗಿ ಬದುಕಿನಲ್ಲಿ ಸರ್ಕಾರ ಇಣುಕಿನೋಡಲು ಹಿಂಬಾಗಿಲಿನ ಪ್ರವೇಶವನ್ನು ಆ್ಯಪ್ ಒದಗಿಸಬಹುದು. ಕಳ್ಳತನ ಮತ್ತು ದರೋಡೆ ತಡೆಗಟ್ಟುವ ಉದ್ದೇಶದಿಂದ ಪ್ರತಿ ಮನೆಯಲ್ಲಿ ಪೊಲೀಸರ ನಿಯೋಜನೆ ಅಥವಾ ಕ್ಯಾಮೆರಾ ಅಳವಡಿಸಿದಷ್ಟೇ ಅಸಂಗತವಾದ ಪ್ರಯತ್ನ ಇದಾಗಿದೆ. ಈ ಪ್ರಯತ್ನಕ್ಕೆ ಎದುರಾದ ವಿರೋಧದ ಹಿನ್ನೆಲೆಯಲ್ಲಿ, ತಯಾರಿಕಾ ಹಂತದಲ್ಲಿಯೇ ಫೋನ್ಗಳಲ್ಲಿ ಸಂಚಾರ ಸಾಥಿ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿರುವುದು ಹಾಗೂ ಆ್ಯಪ್ ಬಳಕೆಯನ್ನು ಸಾರ್ವಜನಿಕರ ವಿವೇಚನೆಗೆ ಬಿಟ್ಟಿರುವುದು ಪ್ರಜಾಧ್ವನಿಗೆ ಸಂದಿರುವ ಮನ್ನಣೆಯಾಗಿದೆ. ನಾಗರಿಕರ ಖಾಸಗಿ ಜೀವನದಲ್ಲಿ ಇಣುಕುವ ಪ್ರಯತ್ನವನ್ನು ಸರ್ಕಾರ ಮಾಡದೇ ಇರಲು ಪ್ರಸಕ್ತ ಪ್ರಕರಣ ಪಾಠ ಆಗಲಿ.