ಕೇರಳದ ಜನಪ್ರಿಯ ಪ್ರವಾಸಿ ತಾಣ ವಯನಾಡ್ನಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಉಂಟಾದ ದಿಢೀರ್ ಪ್ರವಾಹವು ಭಾರಿ ಪ್ರಮಾಣದಲ್ಲಿ ಹಾನಿಯನ್ನು ಉಂಟುಮಾಡಿದೆ. ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಿದೆ. ಜನರ ಮನೆ, ಆಸ್ತಿ–ಪಾಸ್ತಿ ಹೇಳಹೆಸರಿಲ್ಲದಂತೆ ನಾಶವಾಗಿವೆ. 150ಕ್ಕೂ ಹೆಚ್ಚು ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಹಲವರು ನಾಪತ್ತೆಯಾಗಿದ್ದಾರೆ. ಅವರ ಪರಿಸ್ಥಿತಿ ಏನಾಗಿದೆ ಎಂಬುದು ಸ್ಪಷ್ಟವಿಲ್ಲ. ಇಡೀ ಹಳ್ಳಿ, ಶಾಲಾ ಕಟ್ಟಡಗಳು, ರಸ್ತೆಗಳು, ಸೇತುವೆಗಳು, ಇತರ ಕಟ್ಟಡಗಳು ಪ್ರವಾಹ ಹಾಗೂ ಭೂಕುಸಿತಕ್ಕೆ ಸಿಲುಕಿ ಧ್ವಂಸಗೊಂಡಿವೆ. ಈ ಪ್ರದೇಶದಲ್ಲಿ ಇದ್ದ ಹಲವು ಕಟ್ಟಡಗಳು ಕಣ್ಮರೆಯಾಗಿವೆ.

ವಯನಾಡ್ನಲ್ಲಿ ಉಂಟಾಗಿರುವ ದುರಂತವು ಈಗ ಕಣ್ಣಿಗೆ ಗೋಚರವಾಗುತ್ತಿರುವುದಕ್ಕಿಂತ ಭೀಕರವಾಗಿರಬಹುದು. ಬೆಟ್ಟಗಳ ಮೇಲಿನಿಂದ ಬಂದ ಮಣ್ಣು ಹಾಗೂ ನೀರಿನ ಸುನಾಮಿಯೊಂದು ಈ ನಯನ ಮನೋಹರ ಪ್ರದೇಶವನ್ನು ಕೆಲವೇ ಗಂಟೆಗಳ ಅವಧಿಯಲ್ಲಿ ಸ್ಮಶಾನದಂತಾಗಿಸಿದೆ. ಭೂತಕಾಲದ ಹಲವು ತಪ್ಪುಗಳಿಗೆ ವರ್ತಮಾನದಲ್ಲಿ ಎದುರಾಗಿರುವ ಶಿಕ್ಷೆಯಂತೆ ಇದು ಕಾಣುತ್ತಿದೆ. ಹಿಂದಿನ ತಪ್ಪುಗಳು ಭವಿಷ್ಯದ ಮೇಲೆಯೂ ಕೆಟ್ಟ ಪರಿಣಾಮ ಉಂಟುಮಾಡುವ ಭೀತಿ ಎದುರಾಗಿದೆ.

ಸರ್ಕಾರಗಳ ಮುಂದೆ, ನಾಗರಿಕ ಸಮಾಜದ ಮುಂದೆ ಈಗ ತಕ್ಷಣಕ್ಕೆ ಇರುವ ಸವಾಲು ರಕ್ಷಣಾ ಕಾರ್ಯವನ್ನು ಭರದಿಂದ ನಡೆಸುವುದು, ಜೀವ ಉಳಿಸಿಕೊಂಡವರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವುದು ಹಾಗೂ ಇನ್ನಷ್ಟು ಹಾನಿ ಆಗದಂತೆ ನೋಡಿಕೊಳ್ಳುವುದು. ವಯನಾಡ್ನಲ್ಲಿ ಆಗಿರುವುದು ವ್ಯಕ್ತಿಗತ ಮಟ್ಟದಲ್ಲೂ ಸಮಷ್ಟಿಯ ಮಟ್ಟದಲ್ಲೂ ಅತೀವ ವೇದನೆ ಉಂಟುಮಾಡುವಂಥದ್ದು. ಈ ದುರಂತದ ಕಾರಣದಿಂದಾಗಿ ಆಗಿರುವ ಹಾನಿ ಮತ್ತು ನಷ್ಟ ಎಷ್ಟು ಎಂಬುದು ನಿಖರವಾಗಿ ಇನ್ನೂ ತಿಳಿದಿಲ್ಲ.

ದೇಶದ ಸಶಸ್ತ್ರ ಪಡೆಗಳು, ಎನ್ಡಿಆರ್ಎಫ್, ಅಗ್ನಿಶಾಮಕ ದಳ, ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮಣ್ಣು ಹಾಗೂ ಇತರ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ಗುರುತಿಸುವ, ಅವರನ್ನು ರಕ್ಷಿಸುವ, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇವರೆಲ್ಲ ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ. ರಕ್ಷಣೆ ಹಾಗೂ ಪರಿಹಾರ ಕಾರ್ಯಗಳು ಇನ್ನೂ ಹಲವು ದಿನಗಳವರೆಗೆ ಮುಂದುವರಿಯುತ್ತವೆ. ನೆಲೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವ ಕೆಲಸಗಳು ಪೂರ್ಣಗೊಳ್ಳಲು ಸುದೀರ್ಘ ಅವಧಿ ಬೇಕಾಗಬಹುದು. ಭೂಕುಸಿತ ಹಾಗೂ ದಿಢೀರ್ ಪ್ರವಾಹದ ಪರಿಣಾಮವಾಗಿ ಕೊಚ್ಚಿಹೋದ ಕೆಲವು ಸ್ಥಳಗಳನ್ನು ಮತ್ತೆ ನಿರ್ಮಿಸಲು ಎಂದಿಗೂ ಸಾಧ್ಯವಾಗದಿರಬಹುದು. ಏಕೆಂದರೆ ಆ ರೀತಿ ಆಗಿರುವೆಡೆಗಳಲ್ಲಿ ಮೊದಲು ಏನಿತ್ತು ಎಂಬುದರ ಕುರುಹು ಕೂಡ ಈಗ ಕಾಣುತ್ತಿಲ್ಲ. ಹಲವರು ತಮ್ಮ ಕುಟುಂಬದ ಸದಸ್ಯರನ್ನು, ತಮ್ಮದೆನ್ನುವ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಅಂಥವರಿಗೆ ನೆರವು ಒದಗಿಸಬೇಕು.

ಈಗ ಆಗಿರುವ ದುರಂತದಿಂದ ಹಾಗೂ ಹಿಂದೆ ಆಗಿಹೋಗಿರುವ ಇದೇ ಬಗೆಯ ಇತರ ದುರಂತಗಳಿಂದ ಪಾಠವನ್ನು ಸಹ ಕಲಿಯಬೇಕು. ಕೇರಳವು 2018ರಲ್ಲಿ ಭಾರಿ ಪ್ರವಾಹಕ್ಕೆ ಸಾಕ್ಷಿಯಾಗಿತ್ತು. ಈ ರಾಜ್ಯವು ಹಿಂದೆಯೂ ಭೂಕುಸಿತಗಳನ್ನು, ದಿಢೀರ್ ಪ್ರವಾಹಗಳನ್ನು, ಹವಾಮಾನ ವೈಪರೀತ್ಯಗಳನ್ನು ಕಂಡಿದೆ. ಈಗ ಭೂಕುಸಿತ ಕಂಡಿರುವ ಪ್ರದೇಶದಲ್ಲೇ ಹಿಂದೆಯೂ ಭೂಕುಸಿತ ಸಂಭವಿಸಿದೆ. ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯ ಪರಿಣಾಮ ಕೆಟ್ಟದ್ದಾಗಿರುತ್ತದೆ ಎಂಬ ಎಚ್ಚರಿಕೆಗಳನ್ನು ಹಲವರು ನೀಡಿದ್ದರು. ಆದರೆ ಅಂತಹ ಎಚ್ಚರಿಕೆಗಳನ್ನು ಸಂಬಂಧಪಟ್ಟವರು ಕಿವಿಗೆ ಹಾಕಿಕೊಳ್ಳಲಿಲ್ಲ.

ಅರಣ್ಯನಾಶ, ಅತಿಕ್ರಮಣ, ಅನಿಯಂತ್ರಿತ ನಿರ್ಮಾಣ ಚಟುವಟಿಕೆಗಳು ಹಾಗೂ ಗಣಿಗಾರಿಕೆಯಿಂದಾಗಿ ಪಶ್ಚಿಮಘಟ್ಟ ಪ್ರದೇಶಕ್ಕೆ ಎದುರಾಗಿರುವ ಅಪಾಯಗಳ ಬಗ್ಗೆ ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿಯು 2011ರಲ್ಲಿ ವರದಿ ಸಿದ್ಧಪಡಿಸಿದೆ. ಇಂತಹ ದುರಂತಗಳು ಸಂಭವಿಸಬಹುದು ಎಂಬುದನ್ನು ವರದಿಯು ಊಹಿಸಿತ್ತು, ವಿಕೋಪಗಳನ್ನು ತಡೆಯಲು ಕೆಲವು ಕ್ರಮಗಳನ್ನು ಸೂಚಿಸಿತ್ತು. ಗಾಡ್ಗೀಳ್ ಸಮಿತಿಯ ವರದಿಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಸರ್ಕಾರವು ಕೆ. ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ದುರ್ಬಲಗೊಳಿಸಿದ ಶಿಫಾರಸುಗಳನ್ನು ಕೂಡ ಅನುಷ್ಠಾನಕ್ಕೆ ತರುವ ಕೆಲಸ ಆಗಲಿಲ್ಲ. ಸರ್ಕಾರವು ರಾಜಕೀಯ ಹಾಗೂ ಇತರ ಒತ್ತಡಗಳಿಗೆ ಮಣಿದು ಎಲ್ಲ ಶಿಫಾರಸುಗಳನ್ನು ನಿರ್ಲಕ್ಷಿಸಿತು. ಈಗ ಪಶ್ಚಿಮಘಟ್ಟ ಪ್ರದೇಶದ ಹಲವೆಡೆ, ಪರಿಸರ ನಾಶ ಹಾಗೂ ಹವಾಮಾನ ಬದಲಾವಣೆಯ ಕಾರಣದಿಂದಾಗಿ ಅವಘಡಗಳು ಸಂಭವಿಸುತ್ತಿವೆ. ವಯನಾಡ್ ದುರಂತವು ಇತರ ರಾಜ್ಯಗಳಿಗೂ ಒಂದು ಎಚ್ಚರಿಕೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.