ಬೀದಿನಾಯಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಚೆಗೆ ನೀಡಿರುವ ಸೂಚನೆಗಳು ಅವಾಸ್ತವಿಕವಾಗಿವೆ, ಅಮಾನವೀಯವಾಗಿವೆ. ಈ ವಿಚಾರವಾಗಿ ಕೋರ್ಟ್ ಈ ಹಿಂದೆ ನೀಡಿದ್ದ ಆದೇಶಕ್ಕೆ ಹೋಲಿಸಿದರೆ ಈ ಬಾರಿಯ ನಿರ್ದೇಶನಗಳು ಪ್ರತಿಗಾಮಿಯಾಗಿ ಕಾಣುತ್ತಿವೆ. ಬೀದಿನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಂದ ಅವುಗಳಿಗೆ ನಿಗದಿಪಡಿಸಿದ ಆಶ್ರಯಕೇಂದ್ರಗಳಿಗೆ ಸ್ಥಳಾಂತರ ಮಾಡಬೇಕು, ಅದಕ್ಕೂ ಮುನ್ನ ಅವುಗಳ ಸಂತಾನಶಕ್ತಿಹರಣ ಮಾಡಬೇಕು, ಅವುಗಳಿಗೆ ಲಸಿಕೆ ನೀಡಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠವೊಂದು ಸೂಚಿಸಿದೆ. ಇದಕ್ಕೂ ಮೊದಲು ಇದೇ ನ್ಯಾಯಪೀಠವು, ಆಗಸ್ಟ್ 11ರ ಕಠಿಣ ಆದೇಶವೊಂದನ್ನು ಮಾರ್ಪಾಡು ಮಾಡಿತ್ತು. ಬೀದಿನಾಯಿಗಳಿಗೆ ಲಸಿಕೆ ನೀಡಿ, ಅವುಗಳ ಸಂತಾನಶಕ್ತಿಹರಣ ಮಾಡಿ, ಅವುಗಳನ್ನು ಮೊದಲು ಇದ್ದ ಸ್ಥಳಕ್ಕೇ ಬಿಡಬೇಕು ಎಂದು ಹೇಳಿತ್ತು. ರೇಬಿಸ್ ಕಾಯಿಲೆಗೆ ತುತ್ತಾಗಿರುವ ಹಾಗೂ ತೀರಾ ಆಕ್ರಮಣಕಾರಿ ವರ್ತನೆಯನ್ನು ತೋರುವ ನಾಯಿಗಳನ್ನು ಮಾತ್ರ ಆಶ್ರಯಕೇಂದ್ರಗಳಲ್ಲಿ ಇರಿಸಿಕೊಳ್ಳಬೇಕು ಎಂದು ಆ ಆದೇಶದಲ್ಲಿ ಹೇಳಲಾಗಿತ್ತು. ಈ ಆದೇಶದ ಅನುಷ್ಠಾನದಲ್ಲಿ ಕೂಡ ಒಂದಿಷ್ಟು ಸಮಸ್ಯೆಗಳು ಇದ್ದವು. ಆದರೆ ಈ ಆದೇಶವು, ಎಲ್ಲ ಬೀದಿನಾಯಿಗಳನ್ನು ಆಶ್ರಯಕೇಂದ್ರಗಳಿಗೆ ಶಾಶ್ವತವಾಗಿ ವರ್ಗಾಯಿಸುವಂತೆ ಹೇಳಿದ್ದ ಹಿಂದಿನ ಇನ್ನೊಂದು ಆದೇಶಕ್ಕೆ ಹೋಲಿಸಿದರೆ ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿತ್ತು ಮತ್ತು ಸಹಾನುಭೂತಿಯಿಂದ ಕೂಡಿತ್ತು.

ಬೀದಿಗಳಲ್ಲಿ ಇರುವ ನಾಯಿಗಳನ್ನೆಲ್ಲ ಅಲ್ಲಿಂದ ತೆರವು ಮಾಡಿಸುವ ಸಂಪನ್ಮೂಲ ಅಥವಾ ಸಿಬ್ಬಂದಿಬಲ ದೇಶದ ಯಾವುದೇ ಸರ್ಕಾರದ ಬಳಿ, ಯಾವುದೇ ನಗರ ಸ್ಥಳೀಯ ಸಂಸ್ಥೆಯ ಬಳಿ ಇಲ್ಲ. ದೇಶದ ಎಲ್ಲ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು, ಶಾಲೆಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳು ಬೀದಿನಾಯಿಗಳಿಂದ ಮುಕ್ತವಾಗುವಂತೆ ಮಾಡಲು ಕೋಟ್ಯಂತರ ರೂಪಾಯಿ ಬೇಕಾಗುತ್ತದೆ. ಈ ಕೆಲಸ ಮಾಡಲು ತರಬೇತಿ ಪಡೆದ ನೂರಾರು ಮಂದಿ ಸಿಬ್ಬಂದಿಯೂ ಬೇಕು. ನಾಯಿಗಳು ಹೆದ್ದಾರಿಗಳಿಗೆ ಬಾರದಂತೆ ತಡೆಯಲು ಸಾಧ್ಯವೇ? ಒಂದು ನಾಯಿಯನ್ನು ಆಶ್ರಯ ಕೇಂದ್ರಕ್ಕೆ ರವಾನಿಸಿದರೆ, ಆ ಜಾಗಕ್ಕೆ ಇನ್ನೊಂದು ನಾಯಿ ಬರುತ್ತದೆ. ಬೀದಿಯಲ್ಲಿ ಅಲೆಯುವ ಪ್ರಾಣಿಗಳನ್ನು ನಿಭಾಯಿಸಲು, ಅವುಗಳ ಸಂತಾನಶಕ್ತಿಹರಣ ಮಾಡಿ, ಅವುಗಳಿಗೆ ಲಸಿಕೆ ನೀಡುವ ಮಾನವೀಯ ಹಾಗೂ ಪರಿಣಾಮಕಾರಿ ಮಾರ್ಗವನ್ನು ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ನಿಯಮಗಳು–2023ರಲ್ಲಿ ಹೇಳಲಾಗಿದೆ. ನಾಯಿಗಳು ಮನುಷ್ಯನ ಆರೋಗ್ಯಕ್ಕೆ ಅಥವಾ ಮನುಷ್ಯನ ಜೀವಕ್ಕೆ ಅಪಾಯ ತಂದೊಡ್ಡುತ್ತಿವೆ ಎಂದಾದರೆ ಅದಕ್ಕೆ ಕಾರಣ, ನಿಯಮಗಳ ಅನುಷ್ಠಾನದಲ್ಲಿನ ಲೋಪ. ಅಧಿಕಾರಿಗಳು ನಿಯಮಗಳ ವಿಚಾರದಲ್ಲಿ ಉದಾಸೀನ ಧೋರಣೆ ತೋರುತ್ತಿದ್ದಾರೆ. ಅಲ್ಲದೆ, ಅಗತ್ಯ ಸಂಪನ್ಮೂಲ ಒದಗಿಸದ ಕಾರಣಕ್ಕೆ ಈ ನಿಯಮಗಳ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಈಗ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ಅಗತ್ಯ ಸಂಪನ್ಮೂಲ ಇಲ್ಲದ ಅಧಿಕಾರಿಗಳು ನಾಯಿಗಳನ್ನು ಸಾಮೂಹಿಕವಾಗಿ ಕೊಲ್ಲುವ ಪರ್ಯಾಯ ಮಾರ್ಗವನ್ನು ಅನುಸರಿಸುವ ಸಾಧ್ಯತೆ ಇದೆ.

ಈಗ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳು ಎಬಿಸಿ ನಿಯಮಗಳಿಗೆ ಅನುಗುಣವಾಗಿ ಇಲ್ಲ. ಈ ನಿರ್ದೇಶನಗಳು, ಪ್ರಾಣಿಗಳ ಜೀವದ ಪಾವಿತ್ರ್ಯವನ್ನು ಗುರುತಿಸುವ ಸಂವಿಧಾನದ ಆಶಯಕ್ಕಿಂತ ಭಿನ್ನವಾಗಿವೆ ಎಂದೂ ಹೇಳಬಹುದು. ಪ್ರಾಣಿಗಳನ್ನು ರಕ್ಷಿಸುವುದು ಹಾಗೂ ಅವುಗಳನ್ನು ಘನತೆಯಿಂದ ಕಾಣುವುದು ಪ್ರಜೆಗಳ ಕರ್ತವ್ಯ ಎಂದು ಸಂವಿಧಾನ ಹೇಳುತ್ತದೆ. ಸಂವಿಧಾನದ 21ನೇ ವಿಧಿಯು ಮನುಷ್ಯರ ಹಕ್ಕುಗಳನ್ನು ರಕ್ಷಿಸುವ ಜೊತೆಗೆ, ಜೀವಕ್ಕೂ ರಕ್ಷಣೆಯ ಭರವಸೆ ನೀಡುತ್ತದೆ; ಇಲ್ಲಿ ಜೀವವೆಂದರೆ ಎಲ್ಲರ ಜೀವ, ಅದರಲ್ಲಿ ಪ್ರಾಣಿಗಳ ಜೀವವೂ ಸೇರಿದೆ ಎಂದು ಕೋರ್ಟ್ ಈ ಹಿಂದೆ ಹೇಳಿತ್ತು. ಆದರೆ, ಈಗಿನ ನಿರ್ದೇಶನಗಳು ಈ ಪರಿಕಲ್ಪನೆಗೆ ವಿರುದ್ಧವಾಗಿವೆ. ಈ ಭೂಮಿಯು ಮನುಷ್ಯನಿಗೆ ಸೇರಿದ್ದು ಹಾಗೂ ಇತರ ಎಲ್ಲ ಜೀವಿಗಳು ಮನುಷ್ಯನ ಅಧೀನ ಎಂಬ ತಪ್ಪು ಆಲೋಚನೆಯ ಕಾರಣದಿಂದಾಗಿ ಈ ಬಗೆಯ ನಿರ್ದೇಶನ ಬಂದಿದೆ. ಈ ಭೂಮಿಯು ಮನುಷ್ಯನಿಗೆ ಎಷ್ಟು ಸೇರಿದ್ದೋ ಇತರ ಪ್ರಾಣಿಗಳಿಗೂ ಅಷ್ಟೇ ಪ್ರಮಾಣದಲ್ಲಿ ಸೇರಿದೆ. ದುರದೃಷ್ಟದ ಸಂಗತಿಯೆಂದರೆ ಈ ಸತ್ಯವನ್ನು ಒಪ್ಪಿಕೊಂಡು, ಅದನ್ನು ಎತ್ತಿಹಿಡಿಯುವ ಕೆಲಸಕ್ಕೆ ಬೇಕಿರುವ ವಿವೇಕವನ್ನು ದೇಶದ ನ್ಯಾಯಾಂಗದ ಅತ್ಯುನ್ನತ ಸಂಸ್ಥೆ ಕೂಡ ಬಳಸಿಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.