ಮಾಡಿನ ಮೇಲೆ ಬಿದ್ದ ಮಳೆಯ ನೀರು ನೆಲಕ್ಕೆ ಸುರಿಯುವಂತೆ ಮನುಷ್ಯನ ಒಳಗೆ ಇರುವ ಭಾವನೆಗಳು ಹೊರಗೆ ಬರುತ್ತವೆ. ಭಗವಾನ್ ಕ್ರಿಸ್ತರು ಜಗತ್ತಿನ ಪಾಪವನ್ನು ಕಳೆಯಲೆಂದು ಊರೂರು ಸುತ್ತುತ್ತಾ ಒಂದು ಹಳ್ಳಿಗೆ ಬರುತ್ತಾರೆ. ಅಲ್ಲಿ ಅತ್ಯಂತ ಹೀನ ಸ್ಥಿತಿಯಲ್ಲಿರುವ ಹೆಂಗಸನ್ನು ಊರಿಂದ ಹೊರಗೆ ಹಾಕುತ್ತಿರುತ್ತಾರೆ. ಕ್ರಿಸ್ತರಿಗೆ ಆಕೆಯ ಸ್ಥಿತಿಯನ್ನು ನೋಡಿ ಕರುಣೆ ಉಕ್ಕಿ ಬರುತ್ತದೆ. ಆಕೆಯನ್ನು ಆತುಕೊಂಡು ಜನರಿಗೆ, ‘ಈಕೆ ಅಂಥಾ ತಪ್ಪನ್ನು ಏನು ಮಾಡಿದ್ದಳು’ ಎನ್ನುತ್ತಾರೆ. ಆಗ ಜನರು ಆಕೆಯನ್ನು ದೂಷಿಸುತ್ತಾ, ‘ಯವ್ವನದಲ್ಲಿದ್ದಾಗ ದೇಹವನ್ನು ವಿಕ್ರಯಿಸಿದ್ದಳು, ಯಾರಿಗೂ ಸಣ್ಣ ಸಹಾಯವನ್ನೂ ಮಾಡಲಿಲ್ಲ, ದಿನಾ ದೇವರನ್ನೂ ಪ್ರಾರ್ಥಿಸಲಿಲ್ಲ; ಈಕೆಯ ಪಾಪಕ್ಕೆ ಕೊಲ್ಲದೇ ಉಳಿಸಿರುವುದೇ ಹೆಚ್ಚು’ ಎನ್ನುತ್ತಾರೆ.

ಜನರ ಮಾತುಗಳನ್ನು ಕೇಳಿ ಕ್ರಿಸ್ತರ ಮನಸ್ಸಿಗೆ ನೋವಾಗುತ್ತದೆ. ‘ಪಾಪ ಎನ್ನುವುದು ಆಕೆಯೊಬ್ಬಳಿಂದ ಆಗಲು ಸಾಧ್ಯವೇ? ಆಕೆ ದೇಹವನ್ನು ವಿಕ್ರಯಿಸಲು ಒಬ್ಬ ಪುರುಷ ಬೇಕಲ್ಲವೇ. ಅವನನ್ನು ಮಾತ್ರ ಬಿಟ್ಟು ಈಕೆಯನ್ನು ಯಾಕೆ ಪಾಪ ಮಾಡಿದ್ದಾಳೆ ಎನ್ನುತ್ತಿದ್ದೀರ? ಇನ್ನು ಪ್ರಾರ್ಥನೆ ಅಂತರಂಗದ ವಿಷಯ. ಮನುಷ್ಯರ ಬಗ್ಗೆ ಲಘುವಾಗಿ ಯೋಚಿಸಬಾರದು’ ಎನ್ನುತ್ತಾರೆ. ‘ಇಷ್ಟೆಲ್ಲಾ ತಿಳಿದ ನಿನಗೆ ಈಕೆಯ ಮುಖದಲ್ಲಿನ ಪಾಪ ಗೊತ್ತಾಗುತ್ತಿಲ್ಲ ಎಂದರೆ ಹೇಗೆ? ಪಾಪವನ್ನು ಕಳೆದು ಸ್ವರ್ಗದ ಬಾಗಿಲು ಈಕೆಗೆ ತೆರೆಯುವಂತೆ ಮಾಡಬಲ್ಲೆಯಾ?’ ಎನ್ನುತ್ತಾರೆ ಜನ. ಕ್ರಿಸ್ತರು ನಕ್ಕು, ‘ಭಗವಂತ ಯಾರಿಗೂ ಬಾಗಿಲುಗಳನ್ನು ಮುಚ್ಚಿರುವುದಿಲ್ಲ. ನಾವು ಮನುಷ್ಯರು ಭಾವಿಸುತ್ತೇವೆ ನಾವು ಮಾತ್ರ ಪುಣ್ಯ ಮಾಡಿದ್ದೇವೆ ಎಂದು. ಈಕೆಯನ್ನು ನೋಡಿ ಈಗಲೂ ನಿಮಗೆ ದೇಹ ವಿಕ್ರಯಿಸುವ ಹೆಣ್ಣಾಗಿ ಕಾಣುತ್ತಿದ್ದಾಳೆಯೆ’ ಎನ್ನುತ್ತಾರೆ. ಆಗ ಆ ಜನ, ‘ನಾವೇ ಕಣ್ಣಾರೆ ಕಂಡಿದ್ದೇವೆ. ಮತ್ತೊಮ್ಮೆ ನೋಡಲು ಏನಿದೆ. ನಿನಗೆ ಈಕೆ ದೇವದೂತೆಯ ಥರ ಕಾಣುತ್ತಾಳೆಯೇ?’ ಎನ್ನುತ್ತಾರೆ. ‘ಅಲ್ಲ, ನನ್ನ ತಾಯಿಯ ಹಾಗೆ ಕಾಣುತ್ತಿದ್ದಾಳೆ, ಅವಳ ಕಣ್ಣುಗಳ ಅಂತಃಕರಣ ನನ್ನ ಎದೆಯನ್ನು ತಟ್ಟುತ್ತಿದೆ. ಮಾತೃಭಾವದ ಪ್ರತೀಕವಾದ ಅವಳ ವಾತ್ಸಲ್ಯಭರಿತವಾದ ನೋಟದಲ್ಲಿ ಜಗತ್ತಿನ ಕಾರುಣ್ಯ ಕಾಣುತ್ತಿದೆ. ಭಗವಂತ ಈಕೆಗೆ ಸ್ವರ್ಗದ ಪ್ರವೇಶ ಒದಗಿಸುತ್ತಾನೆ. ನಿಮ್ಮ ವಿಷಯ ನನಗೆ ಗೊತ್ತಿಲ್ಲ’ ಎನ್ನುತ್ತಾರೆ.

ಕ್ರಿಸ್ತರ ಮಾತುಗಳನ್ನು ಕೇಳಿದ ಜನ, ‘ನಾವು ದಿನನಿತ್ಯ ಪ್ರಾರ್ಥನೆಯಲ್ಲಿ ತೊಡಗುತ್ತೇವೆ, ಧರ್ಮದಲ್ಲಿ ಹೇಳುವ ಯಾವ ತಪ್ಪನ್ನೂ ಮಾಡುವುದಿಲ್ಲ. ಹಾಗಿದ್ದೂ ನಮಗೆ ಸ್ವರ್ಗದಲ್ಲಿ ಪ್ರವೇಶವಿಲ್ಲ. ಕುಲಟೆಯಾದ ಈ ಹೆಣ್ಣಿಗೆ ಪ್ರವೇಶ ಸಾಧ್ಯ ಹೇಗೆ?’ ಎನ್ನುತ್ತಾರೆ. ನಗುತ್ತಾ, ‘ಕೆಡಕು ಮಾಡುವವನಿಗೆ, ಕೆಡುಕಿನ ಬಗ್ಗೆ ಯೋಚಿಸುವವನಿಗೆ ಕೆಡುಕು ಜೊತೆಯಾಗುತ್ತದೆ. ಅವರಿಗೆ ಸ್ವರ್ಗದ ಪ್ರವೇಶ ಹೇಗೆ ಸಾಧ್ಯ? ಮೇಲೆ ಚೆನ್ನಾಗಿ ಕಂಡರೂ ಹಣ್ಣಿನ ಒಳಗೆ ಹುಳುಕಿದ್ದರೆ ಅದು ತಿನ್ನಲು ಯೋಗ್ಯ ಇರುವುದಿಲ್ಲ. ಮನುಷ್ಯನ ಮನಸ್ಸು ಕೂಡ ಹಾಗೆಯೇ. ಇನ್ನೊಬ್ಬರಲ್ಲಿ ಕೆಡುಕೇ ಇದೆ ಎಂದು ನೋಡುವಿರಿ ಎಂದರೆ, ಅದಕ್ಕೆ ನೀವೇ ಬಲಿಯಾಗುವಿರಿ’ ಎನ್ನುತ್ತಾರೆ ಕ್ರಿಸ್ತರು.

ಕೆಡುಕೆನ್ನುವುದು ಹಿಮದ ಪದರದ ಕೆಳಗಿನ ಖಾಲಿ ಜಾಗದಂತೆ; ಹೆಜ್ಜೆ ಇಟ್ಟರೆ ಅದು ನಮ್ಮನ್ನೇ ಸೆಳೆದುಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.