ಒಮ್ಮೆ ಒಬ್ಬ ವ್ಯಕ್ತಿ ವಯಸ್ಸಾದ ಝೆನ್ ಗುರುವಿನ ಬಳಿಗೆ ಬಂದು ತನ್ನ ಜೀವನದ ಸಮಸ್ಯೆಗಳು ಮತ್ತು ನೋವುಗಳ ಬಗ್ಗೆ ದೂರು ನೀಡಿದ. ವೃದ್ಧ ಗುರು ಆ ಮನುಷ್ಯನ ಮಾತನ್ನು ಎಚ್ಚರಿಕೆಯಿಂದ ಆಲಿಸಿ ಅವನಿಗೆ ಒಂದು ಹಿಡಿ ಉಪ್ಪನ್ನು ಕೊಟ್ಟರು. ಆಗ ಆ ವ್ಯಕ್ತಿಗೆ ಗೊಂದಲ ಉಂಟಾಯಿತು. ಕಷ್ಟ ಹೇಳಿಕೊಂಡರೆ ಇವರು ಉಪ್ಪು ಕೊಡುತ್ತಾರಲ್ಲ. ಈ ಮಾಂತ್ರಿಕ ಉಪ್ಪು ತನ್ನ ಜೀವನದ ಎಲ್ಲಾ ನೋವು ಮತ್ತು ಸಂಕಟಗಳನ್ನು ತೊಳೆಯುತ್ತದೆಯೇ ಎಂದು ಆತ ಆಶ್ಚರ್ಯಪಟ್ಟನು. ನಂತರ ಗುರುಗಳು ಅವನಿಗೆ ಒಂದು ಲೋಟ ನೀರಿಗೆ ಒಂದು ಹಿಡಿ ಉಪ್ಪನ್ನು ಹಾಕಿ ಕುಡಿಯಲು ಸೂಚಿಸಿದರು. ವ್ಯಕ್ತಿಯು ಗುರುವು ಹೇಳಿದಂತೆಯೇ ಮಾಡಿದನು. ‘ಅದರ ರುಚಿ ಹೇಗಿದೆ’ ಎಂದು ಗುರು ಕುತೂಹಲದಿಂದ ಕೇಳಿದರು. ‘ಅಸಹ್ಯಕರ, ಸ್ವಲ್ಪವೂ ಚೆನ್ನಾಗಿಲ್ಲ’ ಆತ ಉಪ್ಪು ನೀರನ್ನು ಉಗುಳುತ್ತಾ ಹೇಳಿದನು.

ಆತನ ಪ್ರತಿಕ್ರಿಯೆಯನ್ನು ನೋಡಿ ಗುರು ನಕ್ಕರು. ನಂತರ ಅವರು ಅಲ್ಲೇ ಇದ್ದ ಯುವಕನಿಗೆ ಅದೇ ಉಪ್ಪನ್ನು ಹತ್ತಿರದ ಸರೋವರದಲ್ಲಿ ಹಾಕಲು ಹೇಳಿದರು. ಯುವಕ ಮತ್ತು ವ್ಯಕ್ತಿ ಇಬ್ಬರೂ ಹತ್ತಿರದ ಸರೋವರಕ್ಕೆ ನಡೆದರು, ಯುವಕ ಉಪ್ಪನ್ನು ಸರೋವರಕ್ಕೆ ಸುರಿದನು. ‘ಈಗ ಸರೋವರದ ನೀರನ್ನು ಕುಡಿಯಿರಿ’ ಎಂದು ಗುರು ಇಬ್ಬರಿಗೂ ಸೂಚಿಸಿದರು. ಆ ಯುವಕ ಯಾವುದೇ ತೊಂದರೆಯಿಲ್ಲದೆ ಸರೋವರದ ನೀರನ್ನು ಕುಡಿದನು. ‘ಹೇಗನಿಸುತ್ತಿದೆ’ ಎಂದು ಗುರು ಕೇಳಿದರು. ಆಗ ಮೊದಲಿನ ವ್ಯಕ್ತಿ ಬಾಯಾರಿಕೆಯಿಂದ ಸರೋವರದ ತಂಪಾದ ನೀರನ್ನು ಸಂಪೂರ್ಣವಾಗಿ ಆನಂದಿಸಿದನು. ‘ಇದು ಚೆನ್ನಾಗಿದೆ. ಆದರೆ ನನಗೆ ಉಪ್ಪು ರುಚಿ ಗೊತ್ತಾಗುತ್ತಿಲ್ಲ’ ಎಂದು ಯುವಕ ಉತ್ತರಿಸಿದ.

ನಂತರ ಗುರುಗಳು ತೊಂದರೆಗೀಡಾದ ವ್ಯಕ್ತಿಯ ಪಕ್ಕದಲ್ಲಿ ಕುಳಿತು, ಅವನ ಕೈಗಳನ್ನು ಹಿಡಿದು, ‘ಜೀವನದಲ್ಲಿ ನೋವು ಶುದ್ಧ ಉಪ್ಪಿನಂತೆ. ಅದು ಹಾಗೆಯೇ ಇರುತ್ತದೆ. ಆದರೆ ನಾವು ಅನುಭವಿಸುವ ಪ್ರಮಾಣ ಅಥವಾ ನಮ್ಮ ಸಂಕಟವು ನಾವು ಅದನ್ನು ಹಾಕುವ ಪಾತ್ರೆಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ, ನೀವು ನೋವಿನಲ್ಲಿರುವಾಗ, ನೀವು ನಿಮ್ಮ ಇಂದ್ರಿಯಗಳನ್ನು ವಿಸ್ತರಿಸಬಹುದು. ಕರುಣೆ ಮತ್ತು ಸಹಾನುಭೂತಿಯಿಂದ ನಿಮ್ಮ ಹೃದಯವನ್ನು ದೊಡ್ಡದಾಗಿಸಿ. ಲೋಟದಂತೆ ಇರುವುದನ್ನು ನಿಲ್ಲಿಸಿ ಮತ್ತು ಸರೋವರದಂತೆ ಇರಲು ಪ್ರಯತ್ನಿಸಿ. ಆಗ ನಿಮ್ಮ ಜೀವನದಲ್ಲಿನ ತೊಂದರೆಗಳು ನಿಮಗೆ ಹೆಚ್ಚು ದುಃಖವನ್ನು ಉಂಟುಮಾಡುವುದಿಲ್ಲ’ ಎಂದರು.

ಅದಕ್ಕೇ ದಾಸರು, ‘ಈಸಬೇಕು ಇದ್ದು ಜಯಿಸಬೇಕು’ ಎಂದು ಹಾಡಿದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೂ ಕಷ್ಟಗಳು ಎದುರಾಗುತ್ತವೆ. ಅದರಲ್ಲೇ ಮುಳುಗಿ ಅಳುತ್ತ ಕುಳಿತರೆ ಪ್ರಯೋಜನವಿಲ್ಲ. ಸುತ್ತಲೂ ಕಣ್ಣಾಡಿಸಿ ನಮಗಿಂತಲೂ ಹೆಚ್ಚು ದುಃಖದಲ್ಲಿರುವವರು ಬಹಳಷ್ಟಿದ್ದಾರೆ. ನಾವು ನೊಂದವರಿಗೆ ಕರುಣೆ, ಸಹಾನುಭೂತಿಯನ್ನು ತೋರಿದಾಗ, ಅವರ ಕಷ್ಟಗಳಲ್ಲಿ ನಿಮ್ಮೊಂದಿಗಿದ್ದೇವೆ ಎಂದು ಸಂತೈಸಿದಾಗ ಸಿಗುವ ಸಂತೋಷ ಪದಗಳಿಗೆ ಸಿಗುವಂಥದ್ದಲ್ಲ. ಪ್ರೀತಿ, ಕರುಣೆಗಳೇ ನಮ್ಮನ್ನು ಮನುಷ್ಯರನ್ನಾಗಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.