ಆ ಉಪನ್ಯಾಸಕರು ನಡೆಸಿದ ಪ್ರಯೋಗವೇ ಭಿನ್ನವಾದುದು. ಹರೆಯಕ್ಕೆ ಬಂದ ವಿದ್ಯಾರ್ಥಿಗಳನ್ನು ಸಂಭಾಳಿಸುವುದು ಸುಲಭವಲ್ಲ. ಅವರ ಮಾತಿನ ಮೂಲಕವೇ ಅವರ ಹಂತಕ್ಕೆ ಇಳಿದು ಕಲಿಸಬೇಕಾಗುತ್ತದೆ. ಪಾಠ ಮಾಡುವುದಕ್ಕೆ ಆಯ್ದುಕೊಂಡ ವಿಷಯ ಕೂಡಾ ಭಿನ್ನ. ಅದು ‘ಭಾರ’ಕ್ಕೆ ಸಂಬಂಧಪಟ್ಟದ್ದು. ಒಂದು ಲೋಟದ ತುಂಬಾ ನೀರನ್ನು ತುಂಬಿಸಿ ಎಲ್ಲರನ್ನೂ ಉದ್ದೇಶಿಸಿ ಕೇಳಲಾಯಿತು. ‘ಈ ಲೋಟ ಎಷ್ಟು ಭಾರ? ನೂರು ಗ್ರಾಂ, ಇನ್ನೂರು ಗ್ರಾಂ?’ ಬಗೆಬಗೆಯ ಅಂದಾಜಿನ ಉತ್ತರಗಳು ಬಂದವು. ಕೊನೆಯ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿನಿಯೊಬ್ಬಳು ಎದ್ದು ‘ಸರ್, ಅದರ ಭಾರ ಅದನ್ನು ಹಿಡಿದುಕೊಂಡವರನ್ನು ಅವಲಂಬಿಸಿದೆ’ ಎಂದಳು. ಉಪನ್ಯಾಸಕ ಅವಾಕ್ಕಾದರು. ಅವರು ನಿರೀಕ್ಷೆ ಮಾಡಿದ್ದು ಇದೇ ಉತ್ತರವನ್ನೇ.

ನಿಜ ಅಲ್ಲವೇ? ಆ ಲೋಟವನ್ನು ಸೆಕೆಂಡ್ಗಟ್ಟಲೆ ಹಿಡಿದರೆ ಭಾರವೇ ಅಲ್ಲ, ನಿಮಿಷಗಟ್ಟಲೆ ಹಿಡಿದರೆ ತುಸು ಭಾರ ಎನಿಸಲೂಬಹುದು. ಗಂಟೆಗಟ್ಟಲೆ ಹಿಡಿದುಕೊಂಡರೆ ಭುಜ ನೋವು ಬರುತ್ತದೆ. ಹಾಗೇ ಹಿಡಿದೇ ಕೂತರೆ ಭುಜ ಕೈಗಳು ಕಾಯಂ ನೋವಿಗೆ ಒಳಗಾಗುತ್ತವೆ. ಗಹನವಾದ ಮತ್ತು ಚೊಕ್ಕವಾದ ತಾತ್ವಿಕತೆ ಹೀಗೇ ಬಿಚ್ಚಿಕೊಳ್ಳುತ್ತದೆ. ಯಾವುದೂ ಭಾರವಲ್ಲ. ಆದರೆ ಅದನ್ನು ಹೊರುವ ರೀತಿ ಮತ್ತು ಸಮಯ ಆ ಭಾರವನ್ನು ವ್ಯಾಖ್ಯಾನಿಸುತ್ತವೆ.

ಜೀವನವೂ ಹಾಗೇ ನೋಡಿ. ದಾಟುವ ತನಕ ಎಲ್ಲವೂ ಸವಾಲೇ. ಆನಂತರ ಅದೊಂದು ಇನ್ನೊಬ್ಬರಿಗೆ ಹಗುರವಾಗಿ ವಿವರಿಸಬಹುದಾದ ನೀತಿ ಪಾಠವಾಗುತ್ತದೆ. ‘ಅವರವರ ಯೋಚನೆಗಳೇ ಅವರವರನ್ನು ನಡೆಸುತ್ತವೆ’ ಎಂಬ ಮಾತನ್ನು ಕವಿ ಸು.ರಂ.ಎಕ್ಕುಂಡಿ ಅವರ ಅನೇಕ ಕಥನ ಕವನಗಳು ಸಾರಿ ಸಾರಿ ಹೇಳುತ್ತವೆ. ಬಾಳಿನ ವೈವಿಧ್ಯಕ್ಕೆ ಇಂತಹ ಭಿನ್ನ ಮನಃಸ್ಥಿತಿಗಳೇ ಕಾರಣ. ನೀರು ತುಂಬಿದ ಲೋಟ ಭಾರಕ್ಕೆ ಒಂದು ಸಂಕೇತವಷ್ಟೇ. ಆದನ್ನು ಹೇಗೆ ಪರಿಭಾವಿಸುತ್ತೇವೆ ಎನ್ನುವುದರ ಮೇಲೆ ಬಾಳು ಹಾಸಿಕೊಳ್ಳುತ್ತದೆ

ಈ ಕಾಲಘಟ್ಟದ ಬಹುದೊಡ್ಡ ಸವಾಲು ಎಂದರೆ, ಭಾವನೆಗಳ ನಿರ್ವಹಣೆ. ಸರಿಯಾದ ನಿರ್ವಹಣೆಯು ಎಂತಹ ಭಾರವನ್ನೂ ಹಗುರ ಮಾಡಬಲ್ಲದು. ಸವಾಲುಗಳಿಗೆ ಅಡೆತಡೆಗಳಿಗೆ ಯಾವ ನೆಲೆಯಲ್ಲಿ ಮತ್ತು ಯಾವ ತೀವ್ರತೆಯಲ್ಲಿ ಎದುರಾಗಬೇಕು ಎಂಬುದೇ ಬಹುದೊಡ್ಡ ಪ್ರಶ್ನೆ. ಭಾರ ಅಲ್ಲವೇ ಅಲ್ಲ ಅಂತ ಅಂದುಕೊಳ್ಳುವುದರಲ್ಲೇ ಮುಕ್ಕಾಲು ಸಮಸ್ಯೆ ಮುಗಿದುಹೋಗಿರುತ್ತದೆ. ಯಾವ ಭಾರವನ್ನು ಎಷ್ಟು ಹೊತ್ತು ಹೊರಬೇಕು ಮತ್ತು ಹೇಗೆ ನಿಭಾಯಿಸಿ ಹೊರಬರಬೇಕು ಎನ್ನುವ ತಾರ್ಕಿಕ ಶಕ್ತಿಯೇ ಆ ಭಾರದ ಪ್ರಮಾಣವನ್ನು ಪತ್ತೆ ಹಚ್ಚಬಲ್ಲದಲ್ಲವೆ?

ಇಡೀ ಕುಟುಂಬವನ್ನು ಅರಗಿನ ಮನೆಯೊಳಗೆ ಕಳಿಸಿ ಸುಟ್ಟು ಹಾಕಲು ಹೊರಟರೂ ಕೂಡಾ ಅಲ್ಲೊಂದು ಬಾಗಿಲು ಅವರನ್ನು ಉಳಿಸಿತು. ಎಂತಹ ಭಾರ ನೋಡಿ ಇದು. ಪಲಾಯನ ಹೂಡದೇ ಈ ಭಾರವನ್ನು ನಿಭಾಯಿಸುವ ತಂತ್ರಗಳೇ ಸಾವಿನ ಭಾರವನ್ನೂ ಹಗುರ ಮಾಡಿದ ಕಥೆಯನ್ನು ನಾವೆಲ್ಲ ಓದಿದ್ದೇವೆ.

ಉಪನ್ಯಾಸಕರ ಪ್ರಯೋಗದ ಲೋಟದೊಳಗಿನ ನೀರು ಮತ್ತು ಲೋಟದ ಗಾತ್ರಗಳು ಇಲ್ಲಿ ಲೆಕ್ಕಕ್ಕೇ ಬರುವುದಿಲ್ಲ. ಹಾಗೇ ಈ ಬಾಳು. ನಮ್ಮ ನಮ್ಮ ಮನೋಬಲ ಮತ್ತು ಆತ್ಮವಿಶ್ವಾಸಗಳು ಎಲ್ಲ ಭಾರವನ್ನೂ ಸಲೀಸಾಗಿ ಹೊತ್ತು ದಾಟಬಲ್ಲದು. ಭಾರ ಎನ್ನುವ ಮಾತೇ ಅವರವರ ನೆಪಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.