ಒಂದು ಊರಿನಲ್ಲಿ ಒಂದು ಚಿಕ್ಕ ಮನೆಯಲ್ಲಿ ರಾಮಣ್ಣ ಎಂಬ ದಯಾಳು ರೈತನು ತನ್ನ ಮೂರು ಮಕ್ಕಳೊಂದಿಗೆ ನೆಲಸಿದ್ದ. ಆ ಮನೆಯಲ್ಲಿ ಗಾಳಿ ಬೆಳಕು ಸೂರ್ಯನ ಬಿಸಿಲು ಧಾರಾಳವಾಗಿ ಬರುತ್ತಿದ್ದು, ಮನೆ ಮಕ್ಕಳ ನಗುವಿನಿಂದ ಜೀವಂತಿಕೆಯಿಂದಿತ್ತು. ರಾಮಣ್ಣ ಯಾವಾಗಲೂ ಹೇಳುತ್ತಿದ್ದ: ‘ದಾನವು ನಮ್ಮ ಹೃದಯದ ಬೀಜ. ಅದನ್ನು ಸರಿಯಾದ ಮಣ್ಣಿನಲ್ಲಿ ಬಿತ್ತಿದರೆ ಸಮಾಜದ ಮರವಾಗಿ ಬೆಳೆಯುತ್ತದೆ’. ಮಕ್ಕಳು ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಕೇಳುತ್ತಿದ್ದರು.

ಒಂದು ಬಿಸಿಲು ಬೆಚ್ಚಗಿನ ಮಧ್ಯಾಹ್ನದಲ್ಲಿ, ಮನೆಯ ಮುಂಗಟ್ಟಿನಲ್ಲಿ ಒಬ್ಬ ಯುವಕ ಭಿಕ್ಷೆಗಾಗಿ ಬಂದ. ‘ಅಯ್ಯಾ, ನಾನು ಮೂರು ದಿನಗಳಿಂದ ಏನೂ ತಿಂದಿಲ್ಲ. ಒಂದು ರೊಟ್ಟಿಯನ್ನಾದರೂ ನೀಡಿ’ ಎಂದು ಬೇಡಿಕೊಂಡ. ಅವನ ದೈನ್ಯವನ್ನು ಕಂಡು ರಾಮಣ್ಣನ ಕಣ್ಣುಗಳು ತುಂಬಿ ಬಂದವು. ‘ಬಾರಪ್ಪಾ’ ಎಂದು ಅವನ ಕೈಯನ್ನು ಹಿಡಿದುಕೊಂಡು ಮನೆಯೊಳಗೆ ಕರೆದುಕೊಂಡು ಬಂದ. ಸ್ನಾನಕ್ಕೆ ಬಿಸಿ ನೀರು ಕೊಟ್ಟು ಉಪಚರಿಸಿದ. ನಂತರ, ಹೊಸದಾಗಿ ಖರೀದಿಸಿದ ಪ್ಯಾಂಟ್ ಮತ್ತು ಶರ್ಟ್ ತೊಟ್ಟುಕೊಳ್ಳಲು ನೀಡಿದ. ರಾಮಣ್ಣನ ಹೆಂಡತಿ ಬಿಸಿಬಿಸಿ ಅನ್ನ, ಉಪ್ಪಿನಕಾಯಿ, ಚಪಾತಿ, ಸೊಪ್ಪುಪಲ್ಯ ಹೊಟ್ಟೆ ತುಂಬಾ ಉಣಬಡಿಸಿದಳು. ಯುವಕನು ಊಟ ಮಾಡುತ್ತಾ ‘ಅಣ್ಣಾ, ನೀವು ನನ್ನ ಜೀವ ಉಳಿಸಿದ್ದೀರಿ. ಇದು ನನ್ನ ಜೀವನದ ಅತ್ಯಂತ ಸಂತಸದ ದಿನ’ ಎಂದು ಕೈಜೋಡಿಸಿ ಹೇಳಿದ. ಮಕ್ಕಳು ಆ ದೃಶ್ಯವನ್ನು ನೋಡಿ ಕೈ ತಟ್ಟುತ್ತಾ ಸಂತೋಷಪಡುತ್ತಿದ್ದರು. ರಾಮಣ್ಣನು ಕೆಲವು ನೋಟುಗಳನ್ನು ಅವನಿಗೆ ಕೊಡುತ್ತಾ, ‘ಇದು ನಿನ್ನ ಭವಿಷ್ಯದ ಬೀಜ. ಅದನ್ನು ಉತ್ತಮ ಕೆಲಸಕ್ಕೆ ಬಳಸು ತಮ್ಮಾ’ ಎಂದ. ಯುವಕನು ನಗುಮುಖದೊಂದಿಗೆ ವಿದಾಯ ಹೇಳಿ ಹೊರಟ. ಆ ಮನೆಯಲ್ಲಿ ಒಂದು ದಿವ್ಯ ಸಂತೋಷದ ಗಾಳಿ ಬೀಸುತ್ತಿತ್ತು.

ಸಂಜೆ, ರಾಮಣ್ಣನು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋದ. ಟಿಕೆಟ್ ಕೌಂಟರ್ ಬಳಿ ಹಠಾತ್ ಅವನ ಕಣ್ಣು ಒಂದು ಕಡೆ ನೆಟ್ಟಿತು. ಅದೇ ಯುವಕ, ಹೊಸ ಬಟ್ಟೆಗಳಲ್ಲಿ, ‘ಬ್ಲ್ಯಾಕ್ ಟಿಕೆಟ್’ ಮಾರುತ್ತಿದ್ದ.

‘ಸರ್, ಇನ್ಸೈಡ್ ಎಂಟ್ರಿ, ಕೇವಲ 50 ರೂಪಾಯಿ. ಫಸ್ಟ್ ರೋ’ ಎಂಬ ಉತ್ಸಾಹದ ದನಿ. ದುಃಖದ ಮುಖ, ಕಣ್ಣೀರು ಎಲ್ಲವೂ ನಟನೆಯಾಗಿತ್ತು.

ಆ ಕ್ಷಣ ರಾಮಣ್ಣನಿಗೆ ಹೃದಯ ಒಡೆದಂತೆ ಕಣ್ಣೀರು ಬಂತು. ‘ಅಯ್ಯೋ ತಮ್ಮಾ, ನಾನು ನಿನ್ನನ್ನು ದೇವರಂತೆ ಕಂಡಿದ್ದೆ. ನೀನು ಇದನ್ನೇನು ಮಾಡಿದ್ದೀಯಾ?’ ಎಂದು ಮನಸ್ಸಿನೊಳಗೆ ಕೇಳಿಕೊಂಡ. ಆ ದಾನ, ಪುಣ್ಯದ ಬೀಜವು ಇಲ್ಲಿ ದುರ್ಬಳಕೆಯ ಬೇರುಗಳನ್ನು ಹೊರಸೂಸುತ್ತಿತ್ತು– ದುಷ್ಕರ್ಮಕ್ಕೆ ಬೆಂಬಲವಾಗಿ.

ಆ ರಾತ್ರಿ ಮನೆಯಲ್ಲಿ ಕುಟುಂಬದ ಸಭೆಯಾಯಿತು. ಮಕ್ಕಳು ಆಶ್ಚರ್ಯದಿಂದ ಕೇಳುತ್ತಿದ್ದರು. ರಾಮಣ್ಣ ಗಂಭೀರವಾಗಿ ಹೇಳಿದ: ‘ಮಕ್ಕಳೇ, ದಾನವು ಸೂರ್ಯನಂತೆ– ಅದನ್ನು ಎಲ್ಲರಿಗೂ ಕೊಡದಿರಿ. ಸರಿಯಾದ ಕೈಗಳಿಗೆ ಮಾತ್ರ ಕೊಡಿ. ಅಪಾತ್ರರಿಗೆ ಕೊಟ್ಟರೆ ಅದು ನಮ್ಮ ಪುಣ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಸತ್ಪಾತ್ರರನ್ನು ಹುಡುಕಿ, ನೇರವಾಗಿ ಸಹಾಯ ಮಾಡಿ. ಅದರಲ್ಲೇ ನಿಜವಾದ ಬೆಳವಣಿಗೆಯಿದೆ’ ಎಂದು ತಿಳಿಹೇಳಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.