ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಗೆಲಿಲಿಯೋ ಗಣಿತದ ತರಗತಿಗಳನ್ನು ಕದ್ದು ಕೇಳುತ್ತಿದ್ದ. ಕುತೂಹಲ ಮತ್ತು ಆಸಕ್ತಿಯ ಪರಿಣಾಮವಾಗಿ ಅವನ ಖಗೋಳ ವಿಜ್ಞಾನದ ಪ್ರಯೋಗಗಳು ಮನುಷ್ಯ ಜಗತ್ತಿಗೆ ಸತ್ಯದರ್ಶನ ಮಾಡಿಸಿದವು. ಸಾವಿರಾರು ವರ್ಷಗಳಿಂದ ಭೂಮಿಯೇ ವಿಶ್ವದ ಕೇಂದ್ರ ಎಂದು ನಂಬಿದ್ದ ಪ್ರಪಂಚಕ್ಕೆ ವೈಜ್ಞಾನಿಕ ಸತ್ಯವನ್ನು ಒಪ್ಪಿಕೊಳ್ಳಲು ಕಾಲಾವಕಾಶ ಬೇಕಾಯಿತು. ತಾನು ರೂಪಿಸಿದ ಟೆಲಿಸ್ಕೋಪ್ ಮೂಲಕ ದೂರದ ನಕ್ಷತ್ರಗಳನ್ನು ಅವಲೋಕಿಸುತ್ತ ತಾನು ನಿಂತ ಭೂಮಿಯೂ ಸೇರಿದಂತೆ ಅನೇಕ ಗ್ರಹಗಳು ಸೂರ್ಯನನ್ನು ಸುತ್ತುವ ಖಭೌತವಿಸ್ಮಯವನ್ನು ಕಂಡು ಸಂಭ್ರಮಿಸಿದ. ಹಾದಿಯಲ್ಲಿ ಹೋಗಿ ಬರುವವರನ್ನೆಲ್ಲಾ ಕರೆದು ತೋರಿಸಿ ಜಗತ್ತು ಆವರೆಗೆ ನಂಬಿದುದಕ್ಕಿಂತ ಭಿನ್ನವಾದ ಸತ್ಯವೊಂದರ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸಿ ಧರ್ಮರಾಜಕಾರಣದ ಕೇಂದ್ರವಾಗಿದ್ದ ಚರ್ಚ್ನ ಅವಕೃಪೆಗೆ ಒಳಗಾದ. ಸತ್ಯ ಸಾರುವ ಅನಿವಾರ್ಯ ಹಟಕ್ಕೆ ಬಿದ್ದು ಕ್ಷಮೆ ಕೇಳಿ ಹೊರಬಂದವನೇ ಕಾಲಿನಿಂದ ನೆಲಕ್ಕೊಮ್ಮೆ ಝಾಡಿಸಿ ‘ಇದು ತಿರುಗಿಯೇ ತೀರುತ್ತದೆ, ಯಾರಪ್ಪನ ಮಾತನ್ನೂ ಕೇಳುವುದಿಲ್ಲ’ ಎಂದು ಅಧಿಕಾರದಿಂದ ನುಡಿದ.

ಪ್ರಯೋಗ, ಪರೀಕ್ಷೆ ಮತ್ತು ಪರಿಶೀಲನೆಗಳ ಮೂಲಕ ಸಾಧಿತವಾಗುವ ವೈಜ್ಞಾನಿಕ ಸತ್ಯಕ್ಕೆ ಆತ್ಯಂತಿಕವೆಂಬ ಅಹಂ ಇರುವುದಿಲ್ಲ. ಅದು ಯಾವಾಗಲೂ ತರ್ಕಕ್ಕೆ, ಪರೀಕ್ಷೆಗೆ ಒಡ್ಡಿಕೊಳ್ಳುತ್ತದೆ. ಸ್ವರೂಪದಲ್ಲಿ, ಫಲಿತಾಂಶದಲ್ಲಿ ವ್ಯತ್ಯಾಸ ಕಂಡುಬಂದರೆ ಪರಿಷ್ಕರಣೆಗೆ ಸದಾ ತೆರೆದುಕೊಳ್ಳುತ್ತದೆ. ಬುದ್ಧಿ ಪ್ರಧಾನ ಎಂದು ವಿಜ್ಞಾನವನ್ನು ಕೇವಲ ಲೌಕಿಕ ಸುಖ ಭೋಗದ ಉಪಯುಕ್ತತೆಗಾಗಿ ಬಳಸಿಕೊಳ್ಳುವ ಮನುಷ್ಯ ಸಮಾಜ ಭಾವುಕವೂ ದುರ್ಬಲವೂ ಆದ ಸಂದರ್ಭಗಳಲ್ಲಿ ಚೈತನ್ಯ ಕಂಡುಕೊಳ್ಳಲು ಧಾರ್ಮಿಕ ನಂಬಿಕೆಗಳನ್ನು ಆಶ್ರಯಿಸುತ್ತದೆ. ಭಯಮೂಲವಾದ ಸಂಕಟಗಳನ್ನು ನಿಗ್ರಹಿಸಿಕೊಳ್ಳಲು ಅತಾರ್ಕಿಕವಾದ ದೇವರು ದಿಂಡರ ಮೊರೆಹೋಗುತ್ತದೆ. ಪಾಪಪ್ರಜ್ಞೆಯ ಭಾರದಲ್ಲಿ ಸ್ವರ್ಗ ನರಕಗಳನ್ನು ಕಲ್ಪಿಸಿ ಕೊರಗುತ್ತದೆ. ಪಾವಿತ್ರ್ಯದ ಮುಖವಾಡದಲ್ಲಿ ಅಸಮಾನತೆಯನ್ನು ಸೃಷ್ಟಿಸುತ್ತದೆ. ಕರ್ಮ ಪರಂಪರೆಯ ಹುಸಿ ವಿಶ್ಲೇಷಣೆಗೆ ತೊಡಗಿ ಆತ್ಮೋದ್ಧಾರದ ಅಲೌಕಿಕ ಸುಖಾಪೇಕ್ಷೆಯನ್ನು ಹರಡುತ್ತಾ ಇಹದ ಉಲ್ಲಾಸವನ್ನು ಉಪೇಕ್ಷಿಸುತ್ತದೆ. ವಿಜ್ಞಾನ ಸತ್ಯಾಸತ್ಯಗಳಿಗೆ ಮುಖಾಮುಖಿಯಾದರೆ ಧರ್ಮ ಸಂವಾದವನ್ನು ನಿರಾಕರಿಸುತ್ತದೆ. ಈ ಎರಡರ ಸಮಾನಾಂತರ ಪಯಣದಿಂದಾಗಿ ಮನುಷ್ಯ ಬದುಕು ದ್ವಂದ್ವಗಳಿಂದ ಯಾತನಾಮಯವಾಗಿದೆ.

ಇಂಥ ಇಬ್ಬಗೆಯಿಂದ ಪಾರಾಗುವುದು ಧರ್ಮ ಮತ್ತು ವಿಜ್ಞಾನಗಳ ಸಾಹಚರ್ಯದಿಂದ ಮಾತ್ರ ಸಾಧ್ಯ. ಪಾಪ ಮತ್ತು ಪಾವಿತ್ರ್ಯಗಳ ಹಂಗು ತೊರೆದು ವಿಜ್ಞಾನ ಧರ್ಮಗಳೆರಡೂ ಸತ್ಯಸಾಕ್ಷಾತ್ಕಾರದ ಸಮಗ್ರ ಭಾಗಗಳೆಂಬ ಅರಿವಿನಲ್ಲಿ ಹುಟ್ಟುವ ನೈತಿಕತೆ ಮಾನವ ಬದುಕನ್ನು ಬೆಳಗಬಲ್ಲದು. ನಂಬಿಕೆ, ಪ್ರದೇಶ, ವಸ್ತು, ವ್ಯಕ್ತಿ, ಗ್ರಂಥ ಹೀಗೆ ಯಾವುದೂ ಅಂತಿಮವೂ ಅಲ್ಲ ಪವಿತ್ರವೂ ಅಲ್ಲ ಎಂಬ ತಿಳಿವಳಿಕೆ ನೋವಿನಲ್ಲೂ ನಲಿವಿನಲ್ಲೂ ನಮ್ಮನ್ನು ಒಂದಾಗಿಸುತ್ತದೆ. ಪಾವಿತ್ರ್ಯ ಸೋಕಿದ ಎಲ್ಲವೂ ಶ್ರೇಷ್ಠವೋ ಅನ್ಯವೋ ಆಗಿ ದೂರ ಉಳಿಯುತ್ತದೆ. ಮನುಷ್ಯ ಚರಿತ್ರೆಯಲ್ಲಿ ಧರ್ಮದ ಸಾಂಗತ್ಯವಿಲ್ಲದೇ ವಿಜ್ಞಾನವು ದುರ್ಬಲಗೊಂಡು ಅನಾಹುತಗಳನ್ನು ಸೃಷ್ಟಿಸಿದೆ ನಿಜ, ಆದರೆ ವಿಜ್ಞಾನದ ಸಾಹಚರ್ಯವನ್ನು ಒಪ್ಪದೇ ಧರ್ಮವು ಕುರುಡಾಗಿ ಸೃಷ್ಟಿಸಿರುವ ಅವಾಂತರಗಳು ಅದಕ್ಕಿಂತ ಸಾವಿರಪಟ್ಟು ಕ್ರೂರವಾಗಿವೆ. ಅಂಧ ಧರ್ಮವು ಮೂರ್ಖ ವಿಜ್ಞಾನಕ್ಕಿಂತ ಅಪಾಯಕಾರಿ ಎಂಬುದು ಸಾಬೀತಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ನಾವಿದ್ದೇವೆ. ವಿಜ್ಞಾನ ಮತ್ತು ಧರ್ಮಗಳೆರಡೂ ಅಸ್ವಸ್ಥರಾದವರ ರಾಜಕೀಯ ಸಾಧನಗಳಂತೆ ಬೇಕಾಬಿಟ್ಟಿ ಬಳಕೆಗೆ ಸಿಕ್ಕುಬಿಡುವ ಆತಂಕದಲ್ಲಿ ಜಗತ್ತು ನಲುಗುತ್ತಿದೆ.

ಧರ್ಮವು ಮನುಷ್ಯ ಸತ್ತ ನಂತರದ ಕಾಣದ ಲೋಕದ ವಿಶ್ಲೇಷಣೆಯಲ್ಲಿ ಮಾತ್ರ ಮುಳುಗದೇ ಜೀವಿತಾವಧಿಗೆ ಅಗತ್ಯವಾದ ನೈತಿಕ ನಿಷ್ಠೆಯನ್ನು ರೂಪಿಸುವ ಹೊಣೆಗಾರಿಕೆಗೆ ಸದಾ ಹೆಗಲಾಗಬೇಕು. ಸಾವಿರಾರು ಮೂರ್ಖರನ್ನು ಉತ್ಪಾದಿಸುವ ಕಾರ್ಖಾನೆಯಾಗದೇ ಕರುಳಕಾಳಜಿಯ ಕಮ್ಮಟವಾಗಬೇಕು. ಆತ್ಮವೆಂಬುದು ನಿಘಂಟಿನಲ್ಲಿ ಸಿಗುವ ಶುಷ್ಕ ಪದವಾಗಿ ಉಳಿಯದೇ ಸಮಾಜದ ನ್ಯಾಯದಾನದ ತಕ್ಕಡಿಯಾಗಬೇಕು. ವಿಜ್ಞಾನ ಬುದ್ಧಿ ಸಮತೂಕ ಹೃದಯವಾಗಿ ಮಿಡಿಯಬೇಕು. ಧರ್ಮ ವಿಜ್ಞಾನಗಳೆರಡೂ ಪ್ರಕೃತಿ ಸುರಕ್ಷೆಯ ಕವಚಗಳಾಗಿ ಕಾಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.