ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಕೊಡಗು: ಅಂದು ಹೋಂಸ್ಟೇ, ಇಂದು ಬಾಡಿಗೆ ಮನೆ!

ಹೋಂ ಸ್ಟೇ ಮಾಲೀಕರ ಬದುಕು ಏರುಪೇರು
Last Updated 26 ಫೆಬ್ರುವರಿ 2022, 19:32 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಅವಲಂಬಿತರ ಬದುಕು ಸಂಕಷ್ಟದಲ್ಲಿದೆ. ಪ್ರವಾಸೋದ್ಯಮ ಚಿಗುರುವ ನಿರೀಕ್ಷೆ ಹುಟ್ಟಿಸಿದ್ದರೂ ಲಾಕ್‌ಡೌನ್‌ ಆಘಾತದಿಂದ ಹೋಂ ಸ್ಟೇ ಮಾಲೀಕರು ಮೇಲೇಳಲು ಸಾಧ್ಯವಾಗುತ್ತಿಲ್ಲ.

ಕೊಡಗಿನಲ್ಲಿ ಅಂದಾಜು ನಾಲ್ಕು ಸಾವಿರ ಹೋಂಸ್ಟೇಗಳಿವೆ. ಬಹುತೇಕ ಹೋಂ ಸ್ಟೇಗಳು ವಾರದಲ್ಲಿ ಒಂದು ದಿನವೂ ಭರ್ತಿಯಾಗುತ್ತಿಲ್ಲ. ಹೀಗಾಗಿ ನೂರಾರು ಹೋಂಸ್ಟೇಗಳು ಬಾಡಿಗೆ ಮನೆಗಳಾಗಿ ಬದಲಾಗಿವೆ. ಬಾಡಿಗೆಗೆ ಮನೆ ಪಡೆದು ಹೋಂಸ್ಟೇ ನಡೆಸುತ್ತಿದ್ದವರೂ ಮನೆ ಬಿಟ್ಟುಕೊಟ್ಟು ‘ಹೋಂಸ್ಟೇಗಳ ಸಹವಾಸವೇ ಬೇಡ’ ಎನ್ನುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಪ್ರವಾಸಿಗರು ಹೆಚ್ಚಿದ್ದರಿಂದ ಗುಡ್ಡಗಳ ಮೇಲೆ, ನದಿಗಳ ಬದಿ ಹೋಂಸ್ಟೇಗಳು ತಲೆಯೆತ್ತಿದ್ದವು. ತೋಟಗಳ ನಡುವೆ ಕಾಫಿ ಗಿಡಗಳನ್ನೇ ತೆರವುಗೊಳಿಸಿ ಹೋಂಸ್ಟೇ ನಿರ್ಮಿಸಲಾಗಿತ್ತು. ಹಸಿರಿನ ಅಂದ, ಪುಟ್ಟ ಝರಿಗಳ ಸೌಂದರ್ಯ ಸವಿಯಲು ಅವಕಾಶವಿತ್ತು. ಲಾಕ್‌ಡೌನ್‌ ವೇಳೆ ಪ್ರವಾಸಿಗರಿಲ್ಲದೇ ಹೋಂಸ್ಟೇಗಳು ಮೌನವಾಗಿದ್ದವು. ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದರು.

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಹೋಂಸ್ಟೇ ನಿರ್ವಹಣೆಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಅಡುಗೆ, ಸ್ವಚ್ಛತಾ ಸಿಬ್ಬಂದಿಗೆ ಸಂಬಳ ಕೊಡುವುದೂ ಕಷ್ಟವಾಗಿದೆ. ವಾರಾಂತ್ಯದಲ್ಲಿ ಮಾತ್ರ ಹೋಂಸ್ಟೇಗಳು ಭರ್ತಿಯಾದರೆ ನಿರ್ವಹಣೆ ಕಷ್ಟ’ ಎಂದು ಹೋಂಸ್ಟೇ ಮಾಲೀಕ ವಿನು ಸಂಕಟ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT