ಭೂಮಿಯ ಮೇಲೆ ಗುಣಮಟ್ಟದ ಅರಣ್ಯವಿದ್ದರೆ ಎಲ್ಲವೂ ಸರಿಯಾಗಿದೆ ಎಂದರ್ಥ. ಅಂತಹ ಅರಣ್ಯಕ್ಕೆ ಪ್ರಾಕೃತಿಕ ವಿಕೋಪಗಳನ್ನು ಸಹಿಸಿಕೊಳ್ಳುವ ಗುಣ ಇರುತ್ತದೆ. ಕಾಳ್ಗಿಚ್ಚು,ಪ್ರವಾಹದಂತಹ ಕೋಪಾಟೋಪಗಳು ಸಂಭವಿಸಿದಾಗ ಅಲ್ಲಿನ ಜೀವಪರಿಸರ ಅಸ್ತವ್ಯಸ್ತವಾಗುತ್ತದೆ. ಹಳೆಯ ಗಿಡಮರ ಗಳು ಉಸಿರು ಕಳೆದುಕೊಂಡು ಹೊಸ ಬಗೆಯ ಗಿಡಮರಗಳು ಉತ್ಪತ್ತಿಯಾಗುತ್ತವೆ. ಇಂತಹ ಪ್ರಕೃತಿಚಕ್ರದ ಘಟನೆಗಳಿಗೆ ಸಾಕ್ಷಿಯಾಗುತ್ತಾ, ಸರಿದೂಗಿಸಿಕೊಳ್ಳುತ್ತಾ ಕಾಡು ಉಳಿದುಕೊಂಡಿರುತ್ತದೆ. ಹಲವಾರು ವರ್ಷಗಳ ಕಾಲ ಸಂಭವಿಸುವ ಈ ಬದಲಾವಣೆಗಳಿಗೆ ಹೊಂದಿಕೊಂಡು ಸಮತೋಲನದ ಸ್ಥಿತಿಗೆ ತಲಪುತ್ತದೆ. ಅಲ್ಲಿನ ಜೀವಸಂಕುಲವೂ ಸ್ಥಿರವಾಗಿರು ತ್ತದೆ.

ಹಾಗಿದ್ದರೆ ಕರ್ನಾಟಕದ ಅರಣ್ಯ ಪರಿಸರ ಹೇಗಿದೆ? ಅರಣ್ಯಗಳ ನಡುವೆ ಸಂಪರ್ಕ ಇದೆಯೇ? ಕಾಡುಪ್ರಾಣಿಗಳೇಕೆ ನಾಡಿಗೆ ನುಗ್ಗುತ್ತಿವೆ? ಮಾನವ ಮತ್ತು ಅವುಗಳ ನಡುವಿನ ಸಂಘರ್ಷವೇಕೆ ಉಲ್ಬಣಿಸಿದೆ? ಈ ಪ್ರಶ್ನೆಗಳ ಸರಮಾಲೆ ಸಂಕೀರ್ಣವಾದುದು.

ಸಂಘರ್ಷಕ್ಕೆ ಕಾರಣಗಳು ಹಲವು. ಇದು ಜಿಲ್ಲೆಯಿಂದ ಜಿಲ್ಲೆಗೆ; ಪ್ರಾಣಿಗಳಿಂದ ಪ್ರಾಣಿಗಳಿಗೆ ಭಿನ್ನವಾಗಿರುತ್ತದೆ. ಗುಣಮಟ್ಟ ಕಳೆದುಕೊಳ್ಳುತ್ತಿರುವ ಅರಣ್ಯಗಳೇ ಈ ಸಮಸ್ಯೆಗೆ ಮೂಲ ಕಾರಣ. ರಾಜ್ಯದಲ್ಲಿ ವನ್ಯಜೀವಿಗಳ ನೆಲೆ ಛಿದ್ರವಾಗುತ್ತಿದೆ. ಜೀವಸಂಕುಲದಲ್ಲಿ ಉಂಟಾಗುತ್ತಿರುವ ಈ ತಲ್ಲಣ ಸಂಘರ್ಷದ ರೂಪ ತಳೆದಿದೆ. ಅಂತಿಮವಾಗಿ ಇದು ಕಾಡುಪ್ರಾಣಿ ಅಥವಾ ಮನುಷ್ಯನ ಸಾವಿನೊಂದಿಗೆ ಪರ್ಯಾವಸಾನ ಕಾಣುತ್ತಿದೆ.

ಕಾಡಿಗೆ ಲಕ್ಷಾಂತರ ಜೀವಿಗಳನ್ನು ಪೋಷಿಸುವ ಶಕ್ತಿ ಇರುವುದು ದಿಟ. ಆದರೆ, ಸುಸ್ಥಿತಿ ಕಳೆದುಕೊಂಡಿರುವ ಅದಕ್ಕೆ ಉಸಿರಾಡಲು ಮತ್ತಷ್ಟು ಜಾಗ ಬೇಕಲ್ಲವೆ? ಅದಕ್ಕಾಗಿ ಅರಣ್ಯದಂಚಿನ ಕುರುಚಲು ಪ್ರದೇಶ, ಕಂದಾಯ ಜಮೀನುಗಳನ್ನು ಕಾಪು ವಲಯಗಳಾಗಿ (ಬಫರ್ ಜೋನ್) ಮಾರ್ಪಾಡು ಮಾಡಬೇಕು. ಆದರೆ, ಕಾಡಂಚಿನ ಪ್ರದೇಶ, ಕಾಯ್ದಿಟ್ಟ ಅರಣ್ಯ, ಕಂದಾಯ ಇಲಾಖೆಗೆ ಸೇರಿದ ವಿವಿಧ ಬಗೆಯ ಕಾಡನ್ನು ಅರಣ್ಯದ ವ್ಯಾಪ್ತಿಗೆ ಸೇರಿಸುವ ಕೆಲಸವಾಗುತ್ತಿಲ್ಲ. ಹಾಗಾಗಿ, ಒಂದು ಅರಣ್ಯದಿಂದ ಮತ್ತೊಂದು ಅರಣ್ಯಕ್ಕೆ ಸಂಪರ್ಕ ಇಲ್ಲದೆ ದ್ವೀಪಗಳಂತೆ ಚದುರಿಹೋಗಿವೆ. ಹತ್ತಾರು ವರ್ಷಗಳ ಹಿಂದೆ ಪುನರ್ವಸತಿ ಹೆಸರಿನಡಿ ಅರಣ್ಯ ಭೂಮಿ ಹಾಗೂ ಕಾಡಂಚಿನ ಸಾವಿರಾರು ಎಕರೆ ಭೂಮಿಯನ್ನು ಭೂರಹಿತರಿಗೆ ಹಂಚಿಕೆ ಮಾಡಲಾಗಿದೆ. ಸರ್ಕಾರದ ಇಂತಹ ಜನಪ್ರಿಯ ನೀತಿಗಳಿಂದ ಈ ಪ್ರದೇಶಗಳು ಹರಿದು ಹಂಚಿಹೋಗಿವೆ. ಇಂತಹ ಸಾವಿರಾರು ಎಕರೆ ಜಮೀನು ಇಂದಿಗೂ ಪಾಳುಬಿದ್ದಿದೆ. ರೈತರು ವ್ಯವಸಾಯ ಮಾಡುತ್ತಿಲ್ಲ. ದಶಕಗಳ ಹಿಂದೆ ಈ ಜಮೀನುಗಳೇ ಕಾಡುಪ್ರಾಣಿಗಳ ಸಂಚಾರಕ್ಕೆ ಮುಖ್ಯಪಥವಾಗಿದ್ದವು.

ಪ್ರಸ್ತುತ ಕಾಡಿನ ಜೀವವೈವಿಧ್ಯ ಏರುಪೇರಾಗಿದೆ. ಹಿಂದಿನ ವೈಭವ ಅಲ್ಲಿಲ್ಲ; ಪ್ರಶಾಂತ ನೀರವತೆಯ ಕುರುಹುಗಳು ಕಾಣುತ್ತಿಲ್ಲ. ಅಲ್ಲೀಗ ಯಂತ್ರಗಳ ಕರ್ಕಶ ಶಬ್ದ. ಆ ಸದ್ದಿಗೆ ಪ್ರಾಣಿಗಳು ನಿದ್ದೆಗೆಟ್ಟಿವೆ. ಅಳಿವಿನಂಚಿನ ಜೀವಿಗಳು ಸಂರಕ್ಷಣೆ ಇಲ್ಲದೆ ಪೊದೆಯಲ್ಲಿ ಅಡಗಿಕೊಂಡು ತಮ್ಮ ಅವನತಿಯ ದಿನಗಳನ್ನು ಎಣಿಸುತ್ತಿವೆ. ಅರಣ್ಯದ ಸಸ್ಯಸಂಯೋಜನೆಯೂ ಬದಲಾಗಿದೆ. ಲಂಟಾನಾ, ಯುಪಟೋರಿಯಾ, ಸೆನ್ನಾ ಸ್ಪೆಕ್ಟಾಬಿಲಿಸ್ನಂತಹ ವಿದೇಶಿ ಕಳೆಗಳು ಆವರಿಸಿವೆ. ಇವು ಸ್ಥಳೀಯ ಪ್ರಾಣಿಗಳಿಗೆ ಅವಶ್ಯವಿರುವ ಆಹಾರ, ಆಸರೆ ನೀಡುವುದಿಲ್ಲ. ಈ ವ್ಯತ್ಯಾಸ ವನ್ಯಜೀವಿಗಳ ಮೇಲೆ ಅಗಾಧ ಪರಿಣಾಮ ಬೀರುತ್ತಿದೆ. ಪ್ರತಿಯೊಂದು ಜೀವಿಯ ಅಂತಿಮ ಗುರಿಯೇ ಸಂತಾನಾಭಿವೃದ್ಧಿ. ಆದರೆ, ಗುಣಮಟ್ಟ ಕಳೆದುಕೊಂಡಿರುವ ಇಂತಹ ಕಾಡಿನಲ್ಲಿ ಅವು ತಮ್ಮ ಜೀವವನ್ನು ಕವಲೊಡೆಸಲು ಸಾಧ್ಯವೆ?

ಮತ್ತೊಂದೆಡೆ ಅರಣ್ಯದ ಮಧ್ಯದಲ್ಲಿಯೇ ಹಳ್ಳಿ, ನಗರ, ಪಟ್ಟಣಗಳು ಹುಟ್ಟಿಕೊಂಡಿವೆ. ವನ್ಯಜೀವಿಗಳ ಮೊಗಸಾಲೆ ಗಳನ್ನು ಅಭಿವೃದ್ಧಿ ಹೆಸರಿನ ಹೆದ್ದಾರಿಗಳು ತುಂಡರಿಸಿವೆ. ಕೈಗಾರಿಕೆ, ಕಲ್ಲು ಗಣಿಗಾರಿಕೆ, ಜಲವಿದ್ಯುತ್ ಯೋಜನೆಯಿಂದ ಕಾಡಿನ ಹರವು ಕಡಿಮೆಯಾಗುತ್ತಿದೆ. ಅರಣ್ಯಗಳನ್ನು ಕುಗ್ಗಿಸುತ್ತಿರುವ ಈ ‘ರಾಜಕೀಯ’ ಕಾರಣಕ್ಕೆ ಮದ್ದೆಲ್ಲಿದೆ? ರಾಜ್ಯದಲ್ಲಿ ಹಲವು ದಶಕಗಳಿಂದ ಕಾಡನ್ನು ವಿಸ್ತರಿಸುವ ಪ್ರಕ್ರಿಯೆಯೇ ನಡೆದಿಲ್ಲ. ಲಕ್ಷಾಂತರ ಎಕರೆ ಅರಣ್ಯಭೂಮಿ ಒತ್ತುವರಿಯಾಗಿದ್ದರೂ ತೆರವುಗೊಳಿಸಲು ಸರ್ಕಾರಕ್ಕೆ ಮನಸ್ಸಿಲ್ಲ. ಈಗಲೂ ಎಗ್ಗಿಲ್ಲದೆ ಒತ್ತುವರಿ ಮುಂದುವರಿದಿದ್ದು, ಕಾನೂನು ನಿದ್ರೆಗೆ ಜಾರಿದೆ.

ಹುಲಿ ಮರಿಗಳು ಬೆಳೆದು ದೊಡ್ಡವಾದ ಮೇಲೆ ತಾಯಿಯೊಂದಿಗೆ ಇರುವುದಿಲ್ಲ. ಜೈವಿಕ ಒತ್ತಡದಿಂದ ಹೊಸ ಆವಾಸದ ಹುಡುಕಾಟ ನಡೆಸುತ್ತವೆ. ಆದರೆ, ಅವುಗಳಿಗೆ ಹೊಸ ಕಾಡುಗಳಿಲ್ಲ. ಕಣ್ಣುಬಿಟ್ಟಾಗ ಅರಣ್ಯದಂಚಿನ ರೈತರ ಅನುಪಯುಕ್ತ ಒಣಭೂಮಿಗಳೇ ಅವುಗಳಿಗೆ ಕಾಡುಗಳಂತೆ ಭಾಸವಾಗುತ್ತವೆ. ವ್ಯಾಘ್ರಗಳು ದೀರ್ಘಕಾಲ ಬದುಕುಳಿಯಲು ಸದೃಢ ತಳಿಗಳು ಬಹುಮುಖ್ಯ. ಇದಕ್ಕಾಗಿ ಆ ತಳಿಗಳ ಗುಣಮಟ್ಟದ ವಂಶವಾಹಿನಿಯು ನಿರಂತರವಾಗಿ ಪ್ರವಹಿಸುತ್ತಿರಬೇಕು. ಇದೇ ಜೀವಜಾಲದಲ್ಲಿ ಹುಲಿಯಂತಹ ಅಪರೂಪದ ಜೀವಿಗಳು ಬದುಕುಳಿಯುವ ಗುಟ್ಟು. ಇಲ್ಲವಾದರೆ ಅವುಗಳ ಭವಿಷ್ಯ ಗಾಢಕತ್ತಲೆಗೆ ಜಾರುತ್ತದೆ. ಆದರೆ, ಅರಣ್ಯಗಳ ನಡುವೆ ಸಂಪರ್ಕ ಕಡಿದುಹೋಗಿರುವು ದರಿಂದ ತಳಿವೈವಿಧ್ಯ ವೃದ್ಧಿಸುವ ಅವಕಾಶಗಳು ಕಡಿಮೆ.

ಚಿರತೆ ಮರಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಬೆಟ್ಟಗುಡ್ಡಗಳಲ್ಲಿ ಆವಾಸ ಕಳೆದುಕೊಂಡಿರುವ ಅವುಗಳಿಗೆ ಕಬ್ಬಿನ ಗದ್ದೆಗಳೇ ಅರಣ್ಯದಂತೆ ಕಾಣುತ್ತಿವೆ. ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿರುವ ಕಾಡಾನೆ ಮರಿಗಳ ಪಾಲಿಗೆ ಅಲ್ಲಿನ ಕಾಫಿತೋಟಗಳೇ ಕಾಡುಗಳಾಗಿವೆ. ಮನುಷ್ಯ ಅರಣ್ಯಕ್ಕೆ ಗಡಿರೇಖೆ ನಿರ್ಮಿಸಿದ್ದಾನೆ. ಅವನ ಅರಿವಿಗೆ ನಿಲುಕುವ ಈ ಗಡಿ ವನ್ಯಜೀವಿಗಳಿಗೆ ಅರ್ಥವಾಗುವುದಿಲ್ಲ. ಈ ಕಟುಸತ್ಯವನ್ನು ಆಳುವ ವರ್ಗಕ್ಕೆ ಅರ್ಥೈಸುವುದಾದರೂ ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.