ಬೆಂಗಳೂರು ವಿಶ್ವವಿದ್ಯಾಲಯದ ‘ಜ್ಞಾನಭಾರತಿ’ ಕ್ಯಾಂಪಸ್ನಲ್ಲಿ ಇರುವ ಹಸುರಿನ ಮಹತ್ವ ಕಡೆಗಣಿಸಿ, ವಿಶ್ವ ವಿದ್ಯಾಲಯ ಮತ್ತು ಸರ್ಕಾರ ಹೊಸ ಹೊಸ ಯೋಜನೆಗಳ ಹೆಸರಿನಲ್ಲಿ ಹಸುರುಸಿರಿಗೆ ಮುಳುವಾಗುತ್ತಿರುವುದು ದುರದೃಷ್ಟಕರ. ಜ್ಞಾನಭಾರತಿ ಆವರಣದ 25 ಎಕರೆ ಜಾಗದಲ್ಲಿ ‘ಅಂಬೇಡ್ಕರ್ ಥೀಮ್ ಪಾರ್ಕ್’ ಮಾಡಲು ಸರ್ಕಾರ ಮುಂದಾಗಿರುವುದು (ಪ್ರಜಾವಾಣಿ, ಜೂನ್ 20) ಬೌದ್ಧಿಕ ದಾರಿದ್ರ್ಯದ ಸಂಕೇತ.

ಪ್ರಸ್ತುತ, ₹ 200 ಕೋಟಿ ಅಂದಾಜು ವೆಚ್ಚದ ಯೋಜನೆಯಲ್ಲಿರುವ ಬಹುತೇಕ ಅಂಶಗಳು ಈಗಾಗಲೇ ಜ್ಞಾನಭಾರತಿ ಆವರಣದಲ್ಲಿ ಸಾಕಾರಗೊಂಡಿವೆ. ‘ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ’ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ಅಂಬೇಡ್ಕರ್ ಅವರ ಜೀವನಗಾಥೆಗೆ ಸಂಬಂಧಿಸಿದ ಅನೇಕ ಶಿಲ್ಪಗಳು, ಕೋರೆಗಾಂವ್ ಸಂಘರ್ಷದ ಸ್ಮಾರಕ ಮುಂತಾದವನ್ನು ನಿರ್ಮಿಸಲಾಗಿದೆ. ವಿ.ವಿಯ ಆಡಳಿತ ಕಚೇರಿಯ ಮುಂದೆ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಲಾಗಿದೆ. ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ‘ಡಾ. ಬಿ.ಆರ್. ಅಂಬೇಡ್ಕರ್ ಗ್ರಂಥಾಲಯ’ ಎಂದು ನಾಮಕರಣ ಮಾಡಲಾಗಿದೆ. ಈಗ ಆಗಬೇಕಾಗಿರುವುದು, ಅಂಬೇಡ್ಕರ್ ಚಿಂತನೆಗಳನ್ನು ಹರಡಲು ಉತ್ಕೃಷ್ಟ ಉಪನ್ಯಾಸಗ ಳನ್ನು ಏರ್ಪಡಿಸುವುದು, ಉತ್ತಮ ಕೃತಿಗಳ ರಚನೆ, ಅಕಡೆಮಿಕ್ ವಲಯಗಳಲ್ಲಿ ವಿಚಾರಗೋಷ್ಠಿ ಸೇರಿದಂತೆ ವಿದ್ಯಾರ್ಥಿ ಹಾಗೂ ಸಂಶೋಧಕರನ್ನು ಚಿಂತನೆಗೆ ಹಚ್ಚುವ ಮತ್ತು ಬೌದ್ಧಿಕ ವಿಕಾಸದ ಕೆಲಸಗಳು. ಇದರ ಬದಲಾಗಿ, ‘ಪ್ರತಿಮಾ ಸಂಸ್ಕೃತಿ’ಯನ್ನು ವಿಜೃಂಭಿಸುವುದು ಹಾಗೂ ಹಸುರು ನಾಶ ಮಾಡುವುದು ಸರಿಯಲ್ಲ.

ಉದ್ದೇಶಿತ ಥೀಮ್ ಪಾರ್ಕ್ ಯೋಜನೆ ಪ್ರಕಟವಾಗು ವಷ್ಟರಲ್ಲಿ ಬೆಂಗಳೂರು ವಿ.ವಿಯ ಆಡಳಿತವರ್ಗ ಹಸುರಿಗೆ ಪೆಟ್ಟು ಕೊಡುವ ಮತ್ತೊಂದು ಕಾರ್ಯ ಕೈಗೆತ್ತಿಕೊಳ್ಳಲು ಮುಂದಾಗಿದೆ. ₹ 100 ಕೋಟಿ ಅಂದಾಜು ವೆಚ್ಚದಲ್ಲಿ ಜ್ಞಾನಭಾರತಿಯ ಆವರಣದಲ್ಲಿ ಅಧ್ಯಯನ ಮತ್ತು ಸಂಶೋಧನಾ ಬ್ಲಾಕ್ ನಿರ್ಮಿಸಲು ಬಿಬಿಎಂಪಿ ಮೂಲಕ 419 ಮರಗಳನ್ನು ತೆರವುಗೊಳಿಸಲು ಟೆಂಡರ್ ಕರೆದಿದೆ. ಮೂಲಸೌಕರ್ಯಗಳನ್ನು ನಿರ್ಮಿಸಿಕೊಳ್ಳುವ ದಿಸೆಯಲ್ಲಿ ವಿಶ್ವವಿದ್ಯಾಲಯ ವಿವೇಚನೆಯಿಂದ ವರ್ತಿಸಬೇಕಾಗಿದೆ. ಕ್ಯಾಂಪಸ್ನಲ್ಲಿರುವ ಅನೇಕ ಕಟ್ಟಡಗಳು ನೆಲ ಅಂತಸ್ತು ಅಥವಾ ಮೊದಲನೇ ಮಹಡಿಗೆ ಸೀಮಿತವಾಗಿವೆ. ಅವುಗಳ ಮೇಲೆ ಅಗತ್ಯಕ್ಕೆ ತಕ್ಕಂತೆ ಎರಡು, ಮೂರನೆಯ ಅಂತಸ್ತು ಕಟ್ಟಿ ಉಪಯೋಗಿಸಿಕೊಳ್ಳಬಹುದು. ನೆಲ ಅಂತಸ್ತಿನ ಭೂವಿಜ್ಞಾನ ವಿಭಾಗದ ಮೇಲೆ ಭೂಗೋಳ ವಿಭಾಗವನ್ನು ಇತ್ತೀಚೆಗೆ ಕಟ್ಟಿರುವುದನ್ನು ಉಳಿದ ವಿಭಾಗಗಳಿಗೆ ಸಂಬಂಧಿಸಿದಂತೆಯೂ ಅನುಸರಿಸಬಹುದು. ಹಸುರಿನ ಜಾಗವನ್ನು ಉಳಿಸಿಕೊಳ್ಳುವುದು ಮುಖ್ಯವಾಗಬೇಕೇ ಹೊರತು, ಹಸುರು ಸವರಿ ಕಟ್ಟಡ ಕಟ್ಟುವುದಲ್ಲ.

ಎರಡು– ಮೂರು ವರ್ಷಗಳ ಹಿಂದೆ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಯೋಗ ಕೇಂದ್ರ ಸ್ಥಾಪನೆ, ವಿಮಾನ ತಂತ್ರಜ್ಞಾನ ಕುರಿತ ಕೇಂದ್ರ ಹೀಗೆ ಹಲವು ಯೋಜನೆಗಳ ಅನುಷ್ಠಾನ ಪ್ರಯತ್ನಗಳು ನಡೆದವು. 150 ಎಕರೆಗೂ ಹೆಚ್ಚು ಜಾಗದಲ್ಲಿನ ಜೀವವೈವಿಧ್ಯ ನಾಶವಾಗುತ್ತದೆ ಎಂದು ಪರಿಸರಪ್ರಿಯರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದಾಗಿ ಆ ಯೋಜನೆಗಳು ಸದ್ಯಕ್ಕೆ ನಿಂತಿವೆ. ಆದರೆ, ಹೊಸ ಯೋಜನೆಗಳನ್ನು ರೂಪಿಸಿ, ಇಲ್ಲಿನ ಪರಿಸರ ಗಾಸಿಗೊಳಿಸುವ ಪ್ರಯತ್ನಗಳು ನಡೆದೇ ಇವೆ. ಕ್ಯಾಂಪಸ್ಸಿನ ಸುತ್ತಲೂ ಒತ್ತುವರಿಯಾಗಿರುವ 75 ಎಕರೆಗೂ ಹೆಚ್ಚು ಜಾಗವನ್ನು ಒತ್ತುವರಿದಾರರಿಂದ ಮುಕ್ತಗೊಳಿಸಿ ಕ್ಯಾಂಪಸ್ಸಿನ ಸರಹದ್ದಿಗೆ ಸೇರಿಸಿಕೊಳ್ಳುವ ಗಂಭೀರ ಪ್ರಯತ್ನ ಈವರೆಗೆ ನಡೆದಿಲ್ಲ.

ಜ್ಞಾನಭಾರತಿ ಆವರಣದಲ್ಲಿರುವ ಸಸ್ಯರಾಶಿಯ ಅವಿಭಾಜ್ಯ ಅಂಗವಾಗಿ ಮೈದಳೆದಿರುವ ಜೀವವೈವಿಧ್ಯ ಅನನ್ಯವಾದುದು. ಸುಮಾರು 300 ಪ್ರಭೇದಗಳ ಮರ–ಗಿಡಗಳು, 250 ಪ್ರಭೇದಗಳ ಪಕ್ಷಿ– ಪ್ರಾಣಿಗಳು ಇಲ್ಲಿವೆ. ವಿಶ್ವ ವಿದ್ಯಾಲಯದ ಪರಿಸರವು ವಾಯುವಿಹಾರ ಮಾಡುವವರಿಗೆ ‘ಉಚಿತ ಆಕ್ಸಿಜನ್ ಟ್ಯಾಂಕ್’ನಂತಿದೆ. ಕ್ಯಾಂಪಸ್ನ ಮಣ್ಣು–ಕಲ್ಲು, ಗಿಡ–ಮರ, ಪಕ್ಷಿಗಳು, ಇವೆಲ್ಲವೂ ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಕುತೂಹಲಕರ ವಿಷಯಗಳಾಗಿವೆ. ಕ್ಯಾಂಪಸ್ನ ಪರಿಸರಕ್ಕೆ ಇಂಗಾಲ ಹೀರಿಕೊಳ್ಳುವ ಸಾಮರ್ಥ್ಯವೂ ಹೆಚ್ಚಿರುವುದನ್ನು ಅಧ್ಯಯನವೊಂದು ತಿಳಿಸಿದೆ.

ಸುಮಾರು 1,150 ಎಕರೆಯಷ್ಟು ವ್ಯಾಪ್ತಿಯ ಜ್ಞಾನಭಾರತಿಯ ಅಪೂರ್ವ ಪರಿಸರದಲ್ಲಿ ಈಗಾಗಲೇ ಸುಮಾರು 270 ಎಕರೆಯಷ್ಟು ಜಾಗವನ್ನು ಸ್ವಾಯತ್ತ ಸಂಸ್ಥೆಗಳಿಗೆ ಕೊಡಲಾಗಿದೆ. ಉಳಿದಿರುವ ಜಾಗದ ಮೇಲೂ ನಿರಂತರ ದಾಳಿ ನಡೆಯುತ್ತಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸಾರ್ವಜನಿಕರ ಮನವಿಗೆ ಸ್ಪಂದಿಸಿ, ಜ್ಞಾನಭಾರತಿ ಆವರಣವನ್ನು ‘ಬಯಲಾಜಿಕಲ್ ಡೈವರ್ಸಿಟಿ ಆ್ಯಕ್ಟ್– 2002’ರ ಅನ್ವಯ ಜೀವವೈವಿಧ್ಯ ಪಾರಂಪರಿಕ ತಾಣವನ್ನಾಗಿಸಲು ಕ್ರಮ ಕೈಗೊಳ್ಳುವ ದಿಸೆಯಲ್ಲಿ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿರುವುದು ಸಮಾಧಾನಕರ ವಿಷಯ.

‘ಅಂಬೇಡ್ಕರ್ ಥೀಮ್ ಪಾರ್ಕ್’ ಬೇರೆಡೆ ಸ್ಥಾಪಿಸುವ ಮೂಲಕ ಜ್ಞಾನಭಾರತಿಯ ಆರೋಗ್ಯವನ್ನು ರಕ್ಷಿಸಬೇಕಾಗಿದೆ. ಹಾಗೆಯೇ, ‘ಅಧ್ಯಯನ ಮತ್ತು ಸಂಶೋಧನಾ ಕಟ್ಟಡಗಳ’ ಯೋಜನೆಗಳನ್ನು ವಿವೇಚನೆಯಿಂದ ಕಾರ್ಯಗತ ಮಾಡುವುದು ಅವಶ್ಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.