ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಶಿಕ್ಷಕರು ಸಂಗ್ರಹಿಸಿ ಆನ್ಲೈನ್ನಲ್ಲಿ ಅಳವಡಿಸುವುದು, ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತಹ ಆಡಳಿತಾತ್ಮಕ ಕಾರ್ಯಗಳ ಭರಾಟೆ ಶಾಲೆಗಳಲ್ಲಿ ಸ್ವಲ್ಪ ಹೆಚ್ಚೇ ಎನಿಸುವಂತೆ ಇರುತ್ತದೆ. ಇದರ ನಡುವೆ ಶಿಕ್ಷಕರು ತಮ್ಮ ದೈನಂದಿನ ಬೋಧನೆ- ಕಲಿಕಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೈಗೊಂಡ ನವೀನ ಪ್ರಯತ್ನ, ಬೋಧನಾ ಅನುಭವಗಳನ್ನು ಹಂಚಿಕೊಳ್ಳಲು ಹೆಚ್ಚಿನ ವೇದಿಕೆಗಳು ಇರುವುದಿಲ್ಲ. ಅವರ ಬೋಧನಾ ಅನುಭವಗಳಿಗೆ ಕಿವಿಯಾಗುವವರು ದೊರೆತಾಗ ಹೆಚ್ಚಿನ ಶಿಕ್ಷಕರು ಬಹಳ ಸಂತಸದಿಂದ ವಿವರಿಸಲು ಮುಂದಾಗುತ್ತಾರೆ.

ಇತ್ತೀಚಿನ ನನ್ನ ಶಾಲಾ ಭೇಟಿಯಲ್ಲಿ ಕೆಲವು ಶಿಕ್ಷಕರು ಹಂಚಿಕೊಂಡ ಅನುಭವಗಳು ವಿಶೇಷ ಎನಿಸಿದವು. ಒಬ್ಬ ಶಿಕ್ಷಕಿ ತಮ್ಮ ಅನುಭವ ಹಂಚಿಕೊಳ್ಳಲು ಮುಂದಾಗುತ್ತಿದ್ದಂತೆ, ಅವರ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಮೂರ್ನಾಲ್ಕು ಮಂದಿ ಶಿಕ್ಷಕಿಯರು ಪೈಪೋಟಿಗೆ ಬಿದ್ದವರಂತೆ ಅವರ ಸಹೋದ್ಯೋಗಿ ಕೈಗೊಂಡ ಶೈಕ್ಷಣಿಕ ಪ್ರಯತ್ನಗಳ ಕುರಿತು ಉತ್ಸಾಹದಿಂದ ವಿವರಿಸಿದರು. ಅಷ್ಟೇ ಅಲ್ಲ, ಅವರ ಕುರಿತಾಗಿ ಮೆಚ್ಚುಗೆಯ ಮಳೆಯನ್ನೇ ಸುರಿಸಿದರು.

ಈ ಶಿಕ್ಷಕಿ ಅವರ ತರಗತಿಯ ಎಲ್ಲಾ ಮಕ್ಕಳನ್ನು ಚಿನ್ನ, ರನ್ನ, ಮುದ್ದು, ಬಂಗಾರ ಎಂದೆಲ್ಲ ಬಹಳ ಪ್ರೀತಿ, ಅಕ್ಕರೆಯಿಂದ ಮಾತನಾಡಿಸುತ್ತಾರೆ. ಇದರ ಜೊತೆಗೆ ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಅಕ್ಷರ, ಪದಗಳನ್ನು ಓದಲು, ಬರೆಯಲು ತಾಳ್ಮೆಯಿಂದ ಹಾಗೂ ಸಂತೋಷದಿಂದ ಕಲಿಸುತ್ತಿದ್ದಾರೆ. ಅವರ ತರಗತಿಯ 25 ಮಕ್ಕಳಲ್ಲಿ 10 ಮಕ್ಕಳು ಅಕ್ಷರಗಳನ್ನು ಬಹಳ ಅಂದವಾಗಿ, ತಪ್ಪಿಲ್ಲದೇ ಬರೆಯುತ್ತಾರೆ. ವಿದ್ಯಾರ್ಥಿಗಳು ಅಂದವಾಗಿ ಬರೆದಾಗ ಬರೀ ‘ಗುಡ್’ ಎಂದು ಬರೆಯುವುದು ಅಥವಾ ಸ್ಟಾರ್ ಕೊಡುವುದನ್ನಷ್ಟೇ ಅವರು ಮಾಡುವುದಿಲ್ಲ. ಜಾಣೆ, ಜಾಣಮರಿ ಎಂದೆಲ್ಲ ಬರೆದು ಸಹಿ ಹಾಕುತ್ತಾರೆ. ಕಷ್ಟಪಟ್ಟು ಓದುವುದನ್ನು ಕಲಿಯುತ್ತಿರುವ ಮಕ್ಕಳು ತಮ್ಮ ಬಗ್ಗೆ ಬರೆದ ಈ ಮೆಚ್ಚುಗೆಯ ಬರಹವನ್ನು ಆಸಕ್ತಿಯಿಂದ ಓದುವ ಪ್ರಯತ್ನ ಮಾಡಿ, ಸಂತಸಗೊಳ್ಳುತ್ತಾರೆ. ಲಿಖಿತವಾಗಿ ಪ್ರಶಂಸಿಸುವುದನ್ನು ಓದುವ ಚಟುವಟಿಕೆಯಾಗಿಯೂ ಶಿಕ್ಷಕಿ ಮಾರ್ಪಡಿಸಿದ್ದಾರೆ.

ಶಿಕ್ಷಕಿಯು ಮಕ್ಕಳೆಡೆಗೆ ತೋರುತ್ತಿರುವ ಪ್ರೀತಿ ಹಾಗೂ ಆತ್ಮೀಯತೆ ಬೆರೆತ ಒಡನಾಟವು ತರಗತಿಯ ಎಲ್ಲಾ ಮಕ್ಕಳಿಗೆ ಆಪ್ಯಾಯಮಾನವಾಗಿವೆ. ನಿವೃತ್ತಿಗೆ ಬರೀ ಮೂರು ವರ್ಷ ಬಾಕಿ ಇರುವ ಶಿಕ್ಷಕಿಯು ಉತ್ಸಾಹದ ಕಾರಂಜಿಯಂತೆ ತರಗತಿಯಲ್ಲಿ ತೊಡಗಿ ಕೊಳ್ಳುತ್ತಾರೆ. ಈ ಬಗ್ಗೆ ಸಹ ಅವರ ಸಹೋದ್ಯೋಗಿಗಳು ಮೆಚ್ಚುಗೆಯ ಮಾತನಾಡಿದರು.

ಈ ಶಾಲೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ವಲಸೆ ಬಂದ ಕುಟುಂಬಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಮಕ್ಕಳು ಊರಿನಲ್ಲಿ ಜಾತ್ರೆ, ಅನಾರೋಗ್ಯದಂತಹ ಕಾರಣಗಳಿಂದ ಶಾಲೆಗೆ ಆಗಾಗ್ಗೆ ಗೈರುಹಾಜರಾಗುವುದು
ಸಹಜ. ಆದರೆ ಶಾಲೆಯ ಕೆಲವು ಆಸಕ್ತ ಶಿಕ್ಷಕರು ತೋರುವ ಪ್ರೀತಿಯ ಕಾರಣದಿಂದ, ಮಕ್ಕಳು ತಮಗೆ ಅನಾರೋಗ್ಯ ಇದ್ದಾಗಲೂ ಶಾಲೆಗೆ ಹೋಗುವುದಾಗಿ ಪೋಷಕರ ಬಳಿ ಹಟ ಹಿಡಿಯುತ್ತಾರೆ.

ಶಿಕ್ಷಕರು ಶಾಲೆಯಲ್ಲಿ ತನ್ನ ಇರವನ್ನು ಪ್ರೀತಿ, ಒತ್ತಾಸೆಯಿಂದ ಬಯಸುತ್ತಾರೆ ಹಾಗೂ ತಾನು ಕಲಿಯಲು ಅವರು ತಾಳ್ಮೆಯಿಂದ ಸಹಾಯ ಮಾಡುತ್ತಾರೆ ಎಂಬ ಎರಡು ಅಂಶಗಳು ಶಾಲೆಗೆ ತಪ್ಪದೇ ಬರಲು ಹಾಗೂ ಕಲಿಕೆಯಲ್ಲಿ ತೊಡಗಲು ವಿದ್ಯಾರ್ಥಿಗೆ ಸಹಾಯ ಮಾಡುತ್ತವೆ. ಪೋಷಕರ ಒತ್ತಾಯದಿಂದ ಶಾಲೆಗೆ ಬರುವ ಮಕ್ಕಳ ಮನಃಸ್ಥಿತಿಯನ್ನು ಶಿಕ್ಷಕರು ತಮ್ಮ ಪ್ರೀತಿ, ಉತ್ಸಾಹ, ಆಸಕ್ತಿಯಿಂದ ಬದಲಿಸಿದಲ್ಲಿ ತರಗತಿಯಲ್ಲೊಂದು ಚೇತೋಹಾರಿ ವಾತಾವರಣ ಸೃಷ್ಟಿಯಾಗುತ್ತದೆ. ‘ಬೋಧಿಸುವುದು ನನ್ನ ಕಾಯಕ, ನಾನು ನನ್ನ ಕೆಲಸ ಮಾಡುತ್ತೇನೆ’ ಎಂಬ ನಿರ್ಭಾವುಕ ಧೋರಣೆಯುಳ್ಳ ಶಿಕ್ಷಕರ ತರಗತಿಗಳು ನೀರಸವಾಗಿ ಇರುತ್ತವೆ.

ತಮ್ಮ ವೃತ್ತಿಯ ಬಗ್ಗೆ ಪ್ರೀತಿ, ಆಸಕ್ತಿಯುಳ್ಳ ಶಿಕ್ಷಕರು ಉತ್ಸಾಹ, ಶಕ್ತಿ, ಲವಲವಿಕೆಯನ್ನು ತಮ್ಮೊಳಗೆ ತುಂಬಿಕೊಂಡಿರುತ್ತಾರೆ. ಆತ್ಮೀಯತೆಯಿಂದ ಮಕ್ಕಳೊಂದಿಗೆ ಒಡನಾಡುವುದು ಹಾಗೂ ತಾಳ್ಮೆಯಿಂದ ಕಲಿಸುವ ಗುಣದಿಂದ ತಮ್ಮ ತರಗತಿಯಲ್ಲೊಂದು ಚೈತನ್ಯದಾಯಕ ವಾತಾವರಣವನ್ನು ಸೃಷ್ಟಿಸುತ್ತಾರೆ.

ಒಂದು ತರಗತಿಯಲ್ಲಿ ಇರುವ ವಾತಾವರಣ ಹಾಗೂ ಮಕ್ಕಳಲ್ಲಿ ನೆಲೆಯಾಗಿರುವ ಆಸಕ್ತಿ, ಉತ್ಸಾಹವನ್ನು ಗಮನಿಸಿದರೆ, ಆ ತರಗತಿಯ ಶಿಕ್ಷಕರು ಹೇಗಿದ್ದಾರೆ ಮತ್ತು ಅವರು ಕಲಿಕೆಯ ಪ್ರಕ್ರಿಯೆಯಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಹೇಗೆ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ನಾವು ಖಚಿತವಾಗಿ ಊಹಿಸಬಹುದು.

ಅನೇಕ ಸಂಶೋಧನಾ ಅಧ್ಯಯನಗಳು ಕಂಡು ಕೊಂಡಂತೆ, ಶಿಕ್ಷಕ-ವಿದ್ಯಾರ್ಥಿಗಳ ನಡುವಿನ ಉತ್ತಮ ಬಾಂಧವ್ಯವು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡುತ್ತದೆ. ಜೊತೆಗೆ ಅವರ ಶೈಕ್ಷಣಿಕ ಸಾಧನೆಯನ್ನು ಉತ್ತಮ ಪಡಿಸಿಕೊಳ್ಳಲು ನೆರವಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸುವುದಲ್ಲದೆ ಅವರಲ್ಲಿನ ಅಶಿಸ್ತಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದ, ಶಿಕ್ಷಕರು ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದರ ಜೊತೆಗೆ ತಾಳ್ಮೆಯಿಂದ ಕಲಿಸಿದಲ್ಲಿ ಶೈಕ್ಷಣಿಕ ಗುಣಮಟ್ಟದ ಹೆಚ್ಚಳ ಖಾತರಿಯಾಗುತ್ತದೆ.

ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಬೆಂಗಳೂರು ನಗರ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.