ಶಾಲಾ ಹುಡುಗರು ‘ನಮಗೆ ಭೂಮಿಯ ಚಲನೆಯ ಅರಿವೇಕೆ ಆಗದು?’ ಎಂದು ಮಾಸ್ತರರನ್ನು ಕೇಳಿ ಅವರ ಸಿಟ್ಟಿಗೆ ಗುರಿಯಾಗುವುದುಂಟು. ಏಕರೂಪದ ವೇಗವೇ ಚಲನೆ ಗೊತ್ತಾಗದಿರುವುದರ ರಹಸ್ಯ ಎಂದು ಅವರು ವಿವರಿಸಿರುತ್ತಾರೆ. ಸೂರ್ಯ ಏಕೆ ಪಶ್ಚಿಮ ದಿಕ್ಕಿನಲ್ಲೇ ಉದಯಿಸುತ್ತಾನೆ ಎಂಬ ಪ್ರಶ್ನೆ ಬಾಲಿಶವೇನಲ್ಲ. ಈ ಶಿಸ್ತಿಗೆ ನಮ್ಮ ವಾಸನೆಲೆಯಾದ ಭೂಮಿಯ ಕ್ರಮಬದ್ಧ ಚಲನೆಯೇ ಕಾರಣ.

ಭೂಮಿಗೆ ಎರಡು ಬಗೆಯ ಚಲನೆಗಳಿವೆ. ಬುಗುರಿಯಂತೆ ಗಿರಕಿ ಹೊಡೆಯುತ್ತಲೇ ಭೂಮಿಯು ಸೂರ್ಯನನ್ನು ಸುತ್ತುವುದು. ಈ ಚಲನೆಗಳಿಗೆ ಕ್ರಮ ವಾಗಿ ಆವರ್ತನ ಮತ್ತು ಪರಿಭ್ರಮಣ ಎನ್ನಲಾಗುತ್ತದೆ. ಅಕ್ಷದಲ್ಲಿ ಆವರ್ತನ ಮತ್ತು ಕಕ್ಷೆಯಲ್ಲಿ ಪರಿಭ್ರಮಣ. ಆವರ್ತನ ಅಕ್ಷವು ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಜೋಡಿಸುವ ಒಂದು ಊಹಾತ್ಮಕ ಸರಳರೇಖೆ. ಭೂಮಿಯು ತನ್ನ ಕಕ್ಷೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಹೊರಳುವುದು. ಹಾಗಾಗಿ, ಸ್ಥಿರವಾಗಿರುವ ಸೂರ್ಯನೇ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗಿದಂತೆ ನಮಗೆ ಭಾಸವಾಗುತ್ತದೆ. ಒಂದು ವೇಳೆ ಭೂಮಿ ಆವರ್ತಿಸ ದಿದ್ದರೆ ಅದರ ಅರ್ಧಭಾಗ ಸದಾ ಅತಿ ತಾಪದಲ್ಲೂ ಉಳಿದರ್ಧ ಅತಿ ಶೈತ್ಯದಲ್ಲೂ ಇರುತ್ತಿತ್ತು. ಧರೆಯಲ್ಲಿ ಜೀವವೈವಿಧ್ಯವೇ ಸಾಧ್ಯವಿರುತ್ತಿರಲಿಲ್ಲ.

1851ರ ಜನವರಿ 8ರಂದು ಫ್ರಾನ್ಸ್ನ ಭೌತವಿಜ್ಞಾನಿ ಲಿಯಾನ್ ಫೌಕಾಲ್ಟ್, ಭೂಮಿ ತನ್ನ ಅಕ್ಷದ ಸುತ್ತ ಬುಗುರಿಯಂತೆ ಸುತ್ತುವುದಾಗಿ ಕಂಡುಹಿಡಿದ. ಈ ಬಹು ಮಹತ್ವದ ವಿದ್ಯಮಾನವನ್ನು ಸಂಭ್ರಮಿಸಲು ಪ್ರತಿ ವರ್ಷವೂ ವಿಶ್ವದೆಲ್ಲೆಡೆ ‘ಭೂಮಿಯ ಆವರ್ತನ ದಿನ’ ಆಚರಿಸಲಾಗುತ್ತದೆ. ‘ನಮ್ಮ ಶಕ್ತಿ, ನಮ್ಮ ಗ್ರಹ’ ಎನ್ನುವುದು ಈ ಬಾರಿಯ ಧ್ಯೇಯವಾಕ್ಯ. ಭೂನಿವಾಸಿಗಳಿಗೆ ಇರಬೇಕಾದ ಒಗ್ಗಟ್ಟು ಮತ್ತು ಸಾಮೂಹಿಕ ಜವಾಬ್ದಾರಿಯನ್ನು ಈ ಕೂಗು ಎತ್ತಿ ಹಿಡಿಯುತ್ತದೆ. ಅದು ಆತನೇ ರೂಪಿಸಿದ ಉಪಕರಣ. 28 ಕಿಲೊ ಗ್ರಾಂ ತೂಕದ ಹಿತ್ತಾಳೆ ಗುಂಡನ್ನು 67 ಮೀಟರ್ ಉದ್ದದ ತಂತುವಿನಿಂದ ತೂಗುಹಾಕಿದ್ದ ಲೋಲಕ. ಪ್ಯಾರಿಸ್ನಲ್ಲಿ ಫೌಕಾಲ್ಟ್ ಸಾರ್ವಜನಿಕವಾಗಿ ನೀಡಿದ ಪ್ರಾತ್ಯಕ್ಷಿಕೆ ಸರಳವಾಗಿದ್ದರೂ ಅದ್ಭುತವಾಗಿತ್ತು. ಗುಂಡು ಹಿಂದಕ್ಕೂ ಮುಂದಕ್ಕೂ ಓಲಾಡುತ್ತಲೇ ಪ್ರದಕ್ಷಿಣಾಕಾರ ದಲ್ಲಿ ಚಲಿಸುತ್ತಿತ್ತು.

ಭೂಮಿಯ ಚಲನವಲನವನ್ನು ಅರ್ಥೈಸಿಕೊಳ್ಳುವುದೆಂದರೆ ಬ್ರಹ್ಮಾಂಡದ ಅರಿವಿನತ್ತ ಹೆಜ್ಜೆಗಳನ್ನಿಟ್ಟಂತೆ. ಅಂದಹಾಗೆ ಈ ಸಡಗರದ ಬೆನ್ನಲ್ಲೇ ಧರೆಯ ಎಲ್ಲ ನಿವಾಸಿಗಳಿಗೆ ದೊಡ್ಡ ಹೊಣೆಗಾರಿಕೆಯೂ ಇದೆ. ಆವರ್ತನ ಅಕ್ಷದ 23.5 ಡಿಗ್ರಿ ವಾಲಿಕೆ ನಿಸರ್ಗ ಸಹಜ ವಿದ್ಯಮಾನ. ಆದರೆ ಮನುಷ್ಯನ ನಾಗರಿಕತೆಯ ಅತಿ ವ್ಯಾಮೋಹ ಎನ್ನುವುದಿದೆಯಲ್ಲ. ಸೇವನೆ, ಕೃಷಿ, ಕೈಗಾರಿಕೆಯಂತಹ ನಾನಾ ಬಳಕೆಗಳ ನಿಮಿತ್ತ ಎಗ್ಗಿಲ್ಲದೆ ಅಂತರ್ಜಲವನ್ನು ಮೇಲೆತ್ತಲಾಗುತ್ತಿದೆ. ಇದರ ಪರಿಣಾಮ ಗೊತ್ತೇ? ಭೂಮಿಯ ಆವರ್ತನ ಅಕ್ಷ ಅಸಹಜ ಪಲ್ಲಟಕ್ಕೊಳಗಾಗಿದೆ. 1993- 2010ರ ಅವಧಿಯಲ್ಲಿ ಅದು 80 ಸೆಂ.ಮೀ. ಪೂರ್ವಕ್ಕೆ ಕದಲಿದೆ. ಪ್ರತಿವರ್ಷ ಸಾವಿರಾರು ಕೋಟಿ ಟನ್ನುಗಳಷ್ಟು ನೀರನ್ನು ಹೊರತೆಗೆಯುವುದರಿಂದ ಅಕ್ಷವು 4.3 ಸೆಂ.ಮೀ. ವಾಲುತ್ತಿದೆ. ಇದರಿಂದಾಗಿ ಜಾಗತಿಕ ಸಾಗರ ಮಟ್ಟ 1.6 ಸೆಂ.ಮೀ. ಏರಿದೆ. ಭೂಗ್ರಹದ ಸ್ಥಿರತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಮನುಷ್ಯ ತನ್ನ ಅಗತ್ಯಗಳನ್ನು ಪ್ರಕೃತಿಯೊಂದಿಗೆ ಪರಿಷ್ಕರಿಸಿ ಕೊಳ್ಳಬೇಕು, ಹೊಂದಿಸಿಕೊಳ್ಳಬೇಕು. ನಮ್ಮ ಮನೆಗೆ ಬೋರ್ವೆಲ್ ಹಾಕಿಸಿಲ್ಲ ಎನ್ನುವುದೇ ಹೆಗ್ಗಳಿಕೆ ಆಗಬೇಕು. ಏಕೆಂದರೆ ನೀರಿಗಾಗಿ ಒಂದೊಂದು ಅಗೆತವೂ ಆವರ್ತನ ಅಕ್ಷವನ್ನು ಕಿಂಚಿತ್ತಾದರೂ ಪ್ರತಿಕೂಲವಾಗಿ ಕದಲಿಸುವುದು.

ಭೂಮಿಯ ಆವರ್ತನ ಅಕ್ಷವನ್ನು ಸುಸ್ಥಿರಗೊಳಿಸುವ ಪ್ರಮುಖ ಅಂಶಗಳೆಂದರೆ, ಸುಧಾರಿತ ಜಲ ನಿರ್ವಹಣೆ, ಮಳೆ ನೀರಿನ ಸಂಗ್ರಹ, ನೀರಿನ ಮರುಬಳಕೆ ಹಾಗೂ ವ್ಯರ್ಥಕ್ಕೆ ಕಡಿವಾಣ. ನೀರಿನ ವಿತರಣೆಯನ್ನು ಸ್ವಯಂ ನಿರ್ದೇಶಿಸಿಕೊಳ್ಳುವಷ್ಟು ಪ್ರಕೃತಿ ಸಶಕ್ತವಾಗಿದೆ. ಬೃಹತ್ ಅಣೆಕಟ್ಟುಗಳು, ಗೋಪುರಗಳು, ಕಟ್ಟಡಗಳು ಭೂಮಿಯ ಆವರ್ತನಕ್ಕೆ ಸಂಚಕಾರ ಒಡ್ಡುತ್ತವೆ. ಚೀನಾದ ಅತಿ ದೊಡ್ಡದಾದ ಯಾಂಗ್ಟಿಜ್ ನದಿಗೆ ಅಡ್ಡವಾಗಿ ನಿರ್ಮಿಸಿರುವ ಬೃಹತ್ ಅಣೆಕಟ್ಟು ಸೃಷ್ಟಿಸಿರುವ ದುರ್ದೆಸೆ ಎಷ್ಟೆಂದರೆ, ಆವರ್ತನ ಅಕ್ಷ ದಿನಕ್ಕೆ 0.06 ಮೈಕ್ರೊ ಸೆಕೆಂಡ್ನಷ್ಟು (ಒಂದು ಸೆಕೆಂಡ್ ಕೋನದ ಮಿಲಿಯನ್ನಿನ ಒಂದು ಅಂಶ) ವಾಲುತ್ತಿದೆ.

ಸಕಲ ಜೀವರಾಶಿಯ ಅಸ್ತಿತ್ವವೂ ಆವರ್ತನ ಅಕ್ಷವನ್ನು ನೆಚ್ಚಿಕೊಂಡಿದೆ. ನಮ್ಮ ಗಡಿಯಾರದ ಸಮಯವೂ ಭೂಮಿಯ ಆವರ್ತನವನ್ನು ಅವಲಂಬಿಸಿದೆ. ಹಗಲು-ಇರುಳಿನ ಲಯಕ್ಕೆ ತಕ್ಕಂತೆ ಉಷ್ಣತೆ- ಆರ್ದ್ರತೆಯ ಲಯ ಉಂಟಾಗುವುದು. ಅಕ್ಷದ ಆವರ್ತನ ಕ್ರಮ ಊನಗೊಂಡರೆ ಎಚ್ಚರ-ನಿದ್ರೆಯ ಲಯಕ್ಕೂ ಭಂಗವಾಗಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ವ್ಯತ್ಯಯವಾಗುವುದು. ಭೂಮಿಯ ಆವರ್ತನ ಕ್ರಮ ಹದಗೆಟ್ಟರೆ ಶಿಸ್ತಿನ ಋತು, ಹಗಲಿರುಳು, ಮಳೆ, ಬೆಳೆ, ಇಳುವರಿಗೆ ಎಲ್ಲಿದೆ ಭವಿಷ್ಯ? ಎರಡೂ ಧ್ರುವಗಳಲ್ಲಿ ನಡೆದಾಡಿದ ಬ್ರಿಟನ್ನಿನ ಸಾಹಸಿ, ಪರಿಸರವಾದಿ ರಾಬರ್ಟ್ ಚಾರ್ಲ್ಸ್ ಸ್ವಾನ್ ನುಡಿದ ಮಾತಿದು: ‘ಪರಿಸರವನ್ನು ಕಾಡುತ್ತಿರುವ ಅತಿ ದೊಡ್ಡ ಆತಂಕವೆಂದರೆ ಯಾರೋ ಅದನ್ನು ಸಂರಕ್ಷಿಸುತ್ತಾರೆ ಎಂಬ ನಂಬಿಕೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.