ಶಾಲೆ, ಕಾಲೇಜುಗಳಲ್ಲಿ ಈಗ ವಿವಿಧ ವಿಷಯಗಳಲ್ಲಿ ಪಠ್ಯಕ್ರಮದ ಬೋಧನೆ ಬಹುತೇಕ ಮುಗಿದಿರುತ್ತದೆ. ಸಿದ್ಧತಾ ಪರೀಕ್ಷೆಗಳು ಸಮೀಪಿಸುತ್ತಿವೆ. ಬೋಧನೆಯಾದ ಅಧ್ಯಾಯಗಳಲ್ಲಿ ಸಂದೇಹ, ಪ್ರಶ್ನೆಗಳು ಕಾಡಿದರೆ ವಿದ್ಯಾರ್ಥಿಗಳು ಗುರುಗಳನ್ನು ಕೇಳಿ ಪರಿಹರಿಸಿಕೊಳ್ಳುವ ದಿನಗಳಿವು. ಬೋಧನೆಗಿಂತ ಹೆಚ್ಚು ಅಸ್ಥೆ ತೋರಿ ಗುರುಗಳು ಅವುಗಳನ್ನು ನಿರ್ವಹಿಸಬೇಕಾದುದು ಅಪೇಕ್ಷಣೀಯ.

ವಿದ್ಯಾರ್ಥಿಗಳಿಗೆ ಎದುರಾಗುವ ಜಿಜ್ಞಾಸೆಗಳು ಗುರುಗಳ ಅರಿವನ್ನು ಕೂಡ ಪುನಶ್ಚೇತನಗೊಳಿಸ ಬಲ್ಲವು. ಬೋಧಿಸುವಾಗ ಅದೆಷ್ಟು ಕಣ್ಣು, ಕಿವಿಗಳು ಸೂಕ್ಷ್ಮವಾಗಿ ಅಧ್ಯಾಪಕರನ್ನು ಗಮನಿಸುತ್ತಿರುತ್ತವೆ.ತರಗತಿಯಲ್ಲಿ ಒಂದು ಬಗೆಯಲ್ಲಿ ಗುರುವಿನ ಸತ್ವಪರೀಕ್ಷೆಯೇ ನಡೆಯುತ್ತದೆ. ಮಕ್ಕಳು ಕಲಿಯಲು ಶಾಲೆಗೆ ಬರುತ್ತಾರೆ. ಆದರೆ ಶಿಕ್ಷಕರು ಅವರಿಂದಲೂ ಕಲಿತುಕೊಳ್ಳಬೇಕಾದ ಪಾಠ ಮಹತ್ತರವೇ ಆಗಿರುತ್ತದೆ. ಅಪಾರ ಪಾಂಡಿತ್ಯವಿರಲಿ, ಅನುಭವವಿರಲಿ ಶಿಕ್ಷಕರು ನಿತ್ಯ ವಿದ್ಯಾರ್ಥಿಗಳು. ಬೋಧನೆಯು ಹೆಚ್ಚು ಪಾಲು ಕಲಿಯುವುದೇ ಆಗಿರುತ್ತದೆ ಎಂಬುದು ಗಮನಿಸಬೇಕಾದ ಸೂಕ್ಷ್ಮ ಸಂಗತಿ.

ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳನ್ನೂ ಸೃಷ್ಟಿಸುವ ವೃತ್ತಿ.ಮಾದರಿ ಶಿಕ್ಷಕರೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೊಬ್ಬನಿಗೆ ಮನನವಾಗುವಂತೆ ಕಲಿಸಿದರೆಂಬ ಭಾವ ಸೃಜಿಸುವುದು ಎಂಬ ನುಡಿಯಿದೆ. ಮಕ್ಕಳು ತ್ವರಿತವಾಗಿ ಕಲಿಯಬಲ್ಲರು. ಮರಳು ಬಗೆದು ಬಗೆ ಬಗೆಯ ಗೂಡು ರಚಿಸಲು ಅವರಿಗೆ ತರಬೇತಿ ಬೇಕೇ? ವಿವಿಧ ಚಿತ್ರಗಳಿರುವ ಹಾಳೆ ಕಂಡರಾಯಿತು, ತಮಗೆ ಇಷ್ಟವಾದ ಬಣ್ಣಗಳಿಂದ ತುಂಬಲು ಹವಣಿಸುತ್ತಾರೆ. ಸುತ್ತಮುತ್ತಲಿನ ವಾತಾವರಣ ಬದಲಾಗಬಹುದು, ತಂತ್ರಜ್ಞಾನ ಬದಲಾಗಬಹುದು. ಆದರೆ ಮಕ್ಕಳ ಸಹಜ ನೈಪುಣ್ಯ ಅಬಾಧಿತ. ಕೆಟ್ಟ ವಿದ್ಯಾರ್ಥಿಗಳೆಂದರೆ ಕೆಟ್ಟವರೆಂದಲ್ಲ, ಅರಿಯಲು ಅಣಿಯಾಗಿರುವರೆಂದೇ ಪರಿಗಣಿಸಬೇಕು. ಕ್ರಿಯಾಶೀಲ ವಿದ್ಯಾರ್ಥಿಗಳು ಶಿಕ್ಷಕರ ಬೋಧನಾ ವಿಧಾನ ಸುಧಾರಣೆಗೆ ಪ್ರೇರಣೆ ಆಗಬಲ್ಲರು.

ವಿದ್ಯಾರ್ಥಿಗಳ ಪ್ರಶ್ನೆಗಳು ಮೇಲ್ನೋಟಕ್ಕೆ ಒಂದೇ ತೆರನಾಗಿರುತ್ತವೆ. ಆದರೆ ಶಿಕ್ಷಕರ ಕೂಲಂಕಷ ಪರಿಶೀಲನೆಗೆ ಅವುಗಳ ಹಿಂದಿನ ನವನವೀನ ಹೊಳಹುಗಳು ಲಭಿಸುತ್ತವೆ. ತರಗತಿಯನ್ನು ವಾಸ್ತವ ಪ್ರಪಂಚಕ್ಕೆ ತರುವುದು ಶಿಕ್ಷಕರ ದೊಡ್ಡ ಹೊಣೆಗಾರಿಕೆ. ಪಠ್ಯದ ಸಂಗತಿಗಳು ಹೇಗೆ ದೈನಂದಿನ ಬದುಕಿನೊಂದಿಗೆ ಹೆಣೆದುಕೊಂಡಿರಬಲ್ಲವು ಎನ್ನುವುದರ ಗ್ರಹಿಕೆಯು ಶಿಕ್ಷಕ ಸಾಮರ್ಥ್ಯದ ಕೈಗನ್ನಡಿ. ಬೋಧಿಸಿದ ಪಾಠದಿಂದಾಚೆಗೂ ಪ್ರಶ್ನಿಸಲು ಸಾಮಾನ್ಯವಾಗಿ ವಿದ್ಯಾರ್ಥಿಗಳು ಹೆದರರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆ, ವಿಶೇಷ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹ ನೀಡುವ ಕೆಲಸವು ಶಿಕ್ಷಕರು ಮತ್ತು ಪೋಷಕರಿಂದ ಆಗಬೇಕು.

‘ಶಿಕ್ಷಕರು ಒಂದು ದೃಷ್ಟಿಯಿಂದ ಸಂಭಾವನೆ ಪಡೆಯುವ ವಿದ್ಯಾರ್ಥಿಗಳು’ ಎಂದು ಗ್ರೀಕ್ ತತ್ವಜ್ಞಾನಿ ಸಾಕ್ರೆಟಿಸ್ ಹೇಳುತ್ತಿದ್ದರು. ಒಮ್ಮೆ ಒಂದು ಕಾಲೇಜಿನ ಅಂಗಳದಲ್ಲಿ ಭೂಗೋಳದ ಪ್ರೊಫೆಸರ್ ಆತುರ– ಕಾತರದಿಂದ ಓಡಾಡುತ್ತಿದ್ದರು. ಕಂಕುಳಲ್ಲಿ ಐದಾರು ಸುರುಳಿ ಸುತ್ತಿದ್ದ ಭೂಪಟಗಳು, ಕೈಯಲ್ಲಿ ಬಣ್ಣದ ಸೀಮೆಸುಣ್ಣಗಳ ಡಬ್ಬಿ. ‘ಬನ್ನಿ ಸರ್, ಇಲ್ಲೇ ಆರನೇ ನಂಬರ್ ಕೊಠಡಿ...’ ಎಂದು ಅವರನ್ನು ವಿದ್ಯಾರ್ಥಿಗಳ ಹಿಂಡು ಕೈ ಹಿಡಿದು ತರಗತಿಗೆ ಕರೆದೊಯ್ದಿತ್ತು. ‘ಜಗತ್ತಿನ ದೇಶ, ಖಂಡಗಳನ್ನೆಲ್ಲ ತೋರಿಸಬೇಕೆಂದಿದ್ದ ನನಗೆ ಅಂತೂ ಒಳ್ಳೆಯ ಪಾಠವನ್ನೇ ಹೇಳಿದಿರಲ್ಲಪ್ಪ’ ಎಂದರಂತೆ ಪ್ರೊಫೆಸರ್!

ಶಿಕ್ಷಕರಿಗೆ ಪ್ರತಿದಿನವೂ ವಿದ್ಯಾರ್ಥಿಗಳಿಂದ ಲಭಿಸುವ ಭಾವನಾತ್ಮಕ ಪ್ರತಿಫಲವು ಮೌಲಿಕ. ಶಿಕ್ಷಕರ ಸೇವೆಯ ಅತ್ಯುತ್ತಮ ವಲಯ ವಿದ್ಯಾರ್ಥಿಗಳೇ. ಒಂದೊಂದು ತರಗತಿಯೂ ಒಂದು ಜ್ಞಾನ ಯಾನ. ಗೌಜು, ತಂಟೆ, ಗದ್ದಲ ಇರುವುದು ನಿರೀಕ್ಷಿತವೆ. ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ‘ನಮ್ಮನ್ನು ಎಲ್ಲರ ಎದುರಿಗೆ ಹೊಗಳಿ, ಆದರೆ ವೈಯಕ್ತಿಕವಾಗಿ ತಿದ್ದಿ’ ಎಂಬ ಇಂಗಿತ ತಲುಪಿಯೇ ಇರುತ್ತದೆ. ಒಂದು ಮೊನಚಾದ ಪ್ರಸಂಗ ನೆನಪಾಗುತ್ತದೆ. ಹೋಮ್ ವರ್ಕ್ಗೆ ಕೊಟ್ಟಿದ್ದ ಪ್ರಬಂಧವನ್ನು ಮೌಲ್ಯಮಾಪನ ಮಾಡಿ ಕೊನೆಯಲ್ಲಿ ‘ಅಕ್ಷರ ಸ್ಪಷ್ಟವಿಲ್ಲ’ ಎಂಬ ಒಕ್ಕಣೆಯೇ ಓದಲಾಗದಿದ್ದರೆ! ಹಾಗಾಗಿ ಶಿಕ್ಷಕರ ಕೈಬರಹವೂ ವಿದ್ಯಾರ್ಥಿಗಳ ಪರಾಮರ್ಶೆಗೆ ಒಳಪಡಬಹುದು.

ವಿದ್ಯಾರ್ಥಿಗಳಿಗೆ ಅವರದೇ ಧ್ವನಿ, ವಿವರಣೆ ಮತ್ತು ಮೇಧಾಶಕ್ತಿಯನ್ನು ಒಳಗೊಂಡ ಪರಿಸರದಲ್ಲಿ ಕಲಿಯಲು ಆಸ್ಪದ ಕಲ್ಪಿಸಬೇಕು. ತಮ್ಮ ಬದುಕಿನಲ್ಲಿ ಏನೋ ಒಂದು ಸುಧಾರಣೆ ಆಗುತ್ತಿದೆಯೆಂದು ವಿದ್ಯಾರ್ಥಿಗಳು ನಿರೀಕ್ಷಿಸುತ್ತಾರೆ. ನೇರ, ನಿಸ್ಸಂಕೋಚದ ಅವರ ಪ್ರಶ್ನೆಗಳಲ್ಲಿ ಗಾಢವಾದ ಜ್ಞಾನ ಸಂಪತ್ತು ಸಾಂದ್ರ
ಗೊಂಡಿರುತ್ತದೆ. ಹಾಗಾಗಿ ಶಿಕ್ಷಕರು ಅವನ್ನು ತೆರೆದ ಮನಸ್ಸಿನಿಂದ ಬರಮಾಡಿಕೊಳ್ಳಬೇಕು. ‘ಕೂತ್ಕೊ, ಇಂಥವು ಪರೀಕ್ಷೆಗೆ ಬರುವುದಿಲ್ಲ’ ಅಂತ ಹತ್ತಿಕ್ಕಿದರೆ ಅರಿವಿನ ತವನಿಧಿ ಕೈ ತಪ್ಪುವುದು.

ರಾಮಾನುಜನ್ ಅವರು ‘ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೆ ಬರುವ ಫಲವೇನು’ ಎಂದು ಗುರುಗಳನ್ನು ಕೇಳಿದ್ದರು. ಗುರು ಮುನಿಯಲಿಲ್ಲ, ಆ ಕುರಿತ ವ್ಯಾಪಕ ಅಧ್ಯಯನಕ್ಕೆ ಶಿಷ್ಯನ ಪ್ರಶ್ನೆಯನ್ನು ಅಡಿ ಗಲ್ಲಾಗಿಸಿಕೊಂಡರು. ವಿದ್ಯಾರ್ಥಿಗಳು ಬೋಧಕರಿಗೆ ಅಸ್ಮಿತೆಯನ್ನು ಕಟ್ಟಿಕೊಡುವ ಇಂಥ ಪ್ರಸಂಗಗಳು ಒಂದಲ್ಲೊಂದು ರೂಪದಲ್ಲಿ ಜರುಗುತ್ತಲೇ ಇರುತ್ತವೆ. ಶ್ರೇಷ್ಠ ಕಲಿಕಾರ್ಥಿಗಳಿಂದ ಶ್ರೇಷ್ಠ ಶಿಕ್ಷಕರು ರೂಪುಗೊಳ್ಳುವ ಆಯಾಮ ಗಮನಾರ್ಹ. ತರಗತಿ ತುಂಬ ಗುರುಗಳೇ ಇದ್ದಾರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.