ಅಬ್ಬರದ ಮಳೆ: ಜಲಾಶಯ ಭರ್ತಿ

ಬೆಂಗಳೂರು, ಆಗಸ್ಟ್ 26– ಕಳೆದ ಕೆಲವು ದಿನಗಳಿಂದ ರಾಜ್ಯದ ಪ್ರಮುಖ ನದಿಗಳ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಸತತ ಮಳೆಯಿಂದ
ಕೃಷ್ಣರಾಜಸಾಗರ, ಹಾರಂಗಿ, ಹೇಮಾವತಿ ಸೇರಿದಂತೆ ಬಹುತೇಕ ಜಲಾಶಯಗಳು ಭರ್ತಿ ಹಂತ ತಲುಪಿದ್ದು, ರೈತರಲ್ಲಿ ಹರ್ಷ ಚಿಮ್ಮಿದೆ.

ಕೆ.ಆರ್. ಸಾಗರ ಜಲಾಶಯ ತನ್ನ ಗರಿಷ್ಠ ಮಟ್ಟಕ್ಕೆ ಭರ್ತಿಯಾಗಲು ಇನ್ನು ಕೇವಲ ಮೂರೂವರೆ ಅಡಿ ಮಾತ್ರ ನೀರು ಬರಬೇಕಿದ್ದರೆ, ಹಾರಂಗಿ ಗರಿಷ್ಠ ಮಟ್ಟ ಮುಟ್ಟಲು ಕೇವಲ ಎರಡು ಅಡಿ ಮಾತ್ರ ನೀರು ಬರಬೇಕು.

ಶೀಘ್ರ ಕರ್ನಾಟಕ ಜೀವ ಪರಿಸರ ವೈವಿಧ್ಯ ಮಂಡಳಿ

ಬೆಂಗಳೂರು, ಆಗಸ್ಟ್ 26– ರಾಜ್ಯದಲ್ಲಿನ ಜೀವ ಪರಿಸರ ವೈವಿಧ್ಯದ ಸೂಕ್ತ ರಕ್ಷಣೆ, ಬಳಕೆ ಮತ್ತು ನಿರ್ವಹಣೆಗಾಗಿ ಶೀಘ್ರದಲ್ಲಿಯೇ ‘ಕರ್ನಾಟಕ ಜೀವ ಪರಿಸರ ವೈವಿಧ್ಯ ಮಂಡಳಿ’ಯನ್ನು ರಚಿಸಲಾಗುವುದು.

ಈ ವಿಚಾರವನ್ನು ಅರಣ್ಯ ಸಚಿವ ಕೆ.ಎಚ್. ರಂಗನಾಥ್ ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿ, ಮಂಡಳಿಯಲ್ಲಿ ಈ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದ ತಜ್ಞರು ಇರುತ್ತಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.