ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ಬಸ್ ಜಲಾಶಯಕ್ಕೆ ಬಿದ್ದು 100 ಮಂದಿ ಸಾವು

Published 7 ಜೂನ್ 2024, 23:30 IST
Last Updated 7 ಜೂನ್ 2024, 23:30 IST
ಅಕ್ಷರ ಗಾತ್ರ

ದಾವಣಗೆರೆ, ಜೂನ್ 7: ಹರಿಹರ ತಾಲ್ಲೂಕು ದೇವರ ಬೆಳಕೆರೆ ಬಳಿ ಶ್ಯಾಗಲಹಳ್ಳ ಮತ್ತು ಸೂಳೆಕೆರೆ ಹಳ್ಳದ ಸಂಗಮದಲ್ಲಿ ಕಟ್ಟಿದ ಜಲಾಶಯಕ್ಕೆ ಇಂದು ಸಂಜೆ ಖಾಸಗಿ ಬಸ್ ಬಿದ್ದು ಸುಮಾರು 50 ಶಾಲಾ ಮಕ್ಕಳು ಸೇರಿ 100ಕ್ಕೂ ಹೆಚ್ಚು ಮಂದಿ ಜಲಸಮಾಧಿ ಆಗಿರಬಹುದು ಎಂದು ಶಂಕಿಸಲಾಗಿದೆ. 

ಬಸ್ಸಿನಲ್ಲಿ ದಾವಣಗೆರೆ ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರು ಇದ್ದು, ಅವರೂ ನೀರುಪಾಲಾಗಿರುವ ಶಂಕೆ ಇದೆ. ಸತತ ಪ್ರಯತ್ನದಿಂದ ಮಧ್ಯರಾತ್ರಿವರೆಗೆ 40 ಶವಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಗಿದೆ. 

ದಾಳಿಗೆ ದಿಗಿಲು: ಪಾಕ್ ಸೈನಿಕ ಪರಾರಿ

ನವದೆಹಲಿ, ಜೂನ್ 7: ಭಾರತದ ಗಡಿ ಪ್ರವೇಶಿಸಲು ಪ್ರಯತ್ನ ನಡೆಸಿದ ಪಾಕಿಸ್ತಾನದ ಸೈನಿಕರು ಮತ್ತು ಮುಜಾಹಿದ್ದೀನ್ ಉಗ್ರಗಾಮಿಗಳನ್ನು ಭಾರತೀಯ ಸೈನಿಕರು ಯಶಸ್ವಿಯಾಗಿ ತಡೆದ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಕಡೆ ಹೆಚ್ಚು ಸಾವು–ನೋವುಗಳು ಸಂಭವಿಸಿವೆ. 

ಬಟಾಲಿಕ್ ವಲಯದಲ್ಲಿ ನಡೆದ ಈ ಪ್ರಯತ್ನವನ್ನು ತಡೆಯುವಾಗ ಪಾಕಿಸ್ತಾನದ ಸೈನಿಕರು ಗುಂಡು ಮತ್ತು ಫಿರಂಗಿ ದಾಳಿ ನಡೆಸಿದರೂ, ಭಾರತೀಯ ಸೇನೆಯ ಕಾರ್ಯಾಚರಣೆಯು ಅವರು, ಹಿಮ್ಮೆಟ್ಟುವಂತೆ ಮಾಡಿದ್ದಾಗಿ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT