ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಸೋಮವಾರ 18–3–1996

Last Updated 17 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಮಿಗ್–21 ಆಧುನೀಕರಣಕ್ಕೆ ರಷ್ಯಾ ಜತೆ ಭಾರತ ಒಪ್ಪಂದ

ನವದೆಹಲಿ, ಮಾರ್ಚ್ 17 (ಯುಎನ್ಐ)– ಭಾರತೀಯ ವಾಯುಪಡೆಯ 125 ಮಿಗ್–21 ಯುದ್ಧ ವಿಮಾನಗಳ ಆಧುನೀಕರಣಕ್ಕೆ ರಷ್ಯಾದ ವಿಮಾನ ನಿರ್ಮಾಣ ಕಂಪನಿಗಳ ಜತೆ ಭಾರತವು 1,100 ಕೋಟಿ ರೂಪಾಯಿಗಳ ಒಪ್ಪಂದವೊಂದಕ್ಕೆ ಸಹಿ ಮಾಡಿದೆ.

ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ, ಒಪ್ಪಂದಕ್ಕೆ ಮಾರ್ಚ್ ಒಂದರಂದು ಸಹಿ ಮಾಡಲಾಗಿದೆ. ಹೊಸ ವಿಮಾನಕ್ಕೆ ಮಿಗ್–21 ಹೋರಾಟ ಜೆಟ್ ಅನ್ನು ಅಳವಡಿಸಿ ಅತ್ಯಾಧುನಿಕ ಉಪಕರಣ ಹಾಗೂ ವ್ಯವಸ್ಥೆ ಮಾಡಬೇಕಿದೆ. ಆಧುನೀಕರಣ ಹಾಗೂ ಉನ್ನತೀಕರಣ ಆಗಿರುವ ಯುದ್ಧ ವಿಮಾನವನ್ನು ಒಪ್ಪಂದದ 29 ತಿಂಗಳ ನಂತರ ರಷ್ಯಾ ಪೂರೈಸಲಿದೆ. ಅಲ್ಲದೆ ಹೆಚ್ಚುವರಿಯಾಗಿ 50 ಮಿಗ್‌–21 ಹೋರಾಟ ವಿಮಾನಗಳ ಆಧುನೀಕರಣವು ಒಪ್ಪಂದದಲ್ಲಿ ಸೇರಿದೆ.

ಶ್ರೀಲಂಕಾ ಶಿರಕ್ಕೆ ವಿಶ್ವಕಪ್ ಕಿರೀಟ

ಲಾಹೋರ್, ಮಾರ್ಚ್ 17– ಪುಟ್ಟ ದ್ವೀಪದ ಕನಸು ನನಸಾಯಿತು. ಕಳೆದ ಒಂದೂವರೆ ವರ್ಷದಿಂದ ಯಶಸ್ಸನ್ನು ಕಾಣುತ್ತ ಬಂದಿದ್ದ ಶ್ರೀಲಂಕಾ, ಕ್ರಿಕೆಟ್‌ನ ಎವರೆಸ್ಟ್ ಶಿಖರವನ್ನು ಇಂದು ಯಶಸ್ವಿಯಾಗಿ ಏರಿತು. ವಿಲ್ಸ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಆರಾಮವಾಗಿ ಏಳು ವಿಕೆಟ್‌ಗಳಿಂದ ಸೋಲಿಸಿದ ಶ್ರೀಲಂಕಾದವರು ಮೊತ್ತಮೊದಲ ಬಾರಿಗೆ ಕ್ರಿಕೆಟ್ ಜಗತ್ತಿನ ಸಾಮ್ರಾಟರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT