ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಣಿಪುರ ಸಂಪುಟದ ರಾಜೀನಾಮೆ

Last Updated 26 ಮಾರ್ಚ್ 2023, 20:34 IST
ಅಕ್ಷರ ಗಾತ್ರ

ಮಣಿಪುರ ಸಂಪುಟದ ರಾಜೀನಾಮೆ ವಿಧಾನಸಭೆ ಅಧಿವೇಶನ ಮುಂದಕ್ಕೆ

ಇಂಫಾಲ್, ಮಾರ್ಚ್‌ 26– ಮಣಿಪುರದ ಮುಖ್ಯಮಂತ್ರಿ ಶ್ರೀ ಮಹಮದ್‌ ಅಲಿಮುದ್ದೀನ್‌ ಅವರು ಇಂದು ತಮ್ಮ ಸಚಿವ ಸಂಪುಟದ ರಾಜೀನಾಮೆಯನ್ನು ರಾಜ್ಯಪಾಲ ಶ್ರೀ ಬಿ.ಕೆ. ನೆಹರೂ ಅವರಿಗೆ ಸಲ್ಲಿಸಿದರು.

ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದರು. ಬೇರೆ ವ್ಯವಸ್ಥೆ ಮಾಡುವ ತನಕ ಅಧಿಕಾರದಲ್ಲಿ ಮುಂದುವರೆಯು
ವಂತೆಯೂ ಶ್ರೀ ಮಹಮದ್‌ ಅಲಿಮುದ್ದೀನ್‌ ಅವರಿಗೆ ರಾಜ್ಯಪಾಲರು ಹೇಳಿದರು.

ವಿಧಾನಸಭಾಧ್ಯಕ್ಷ ಡಾ. ಎಲ್‌.ಚಂದ್ರಮಣಿ ಸಿಂಗ್‌ ಅವರು ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ ಸಂಗತಿಯನ್ನು ವಿಧಾನಸಭೆಗೆ ಮಧ್ಯಾಹ್ನ ತಿಳಿಸಿದರು. ಅಲ್ಲದೆ ವಿಧಾನಸಭೆಯ ಅಧಿವೇಶನವನ್ನು ಅನಿರ್ದಿಷ್ಟ
ಕಾಲ ಮುಂದಕ್ಕೆ ಹಾಕಿದರು.

ಈ ವರ್ಷದಲ್ಲಿ ವಾರಾಹಿ ಯೋಜನೆಯ ಆರಂಭ

ಬೆಂಗಳೂರು, ಮಾರ್ಚ್‌ 26– ವಾರಾಹಿ ಜಲವಿದ್ಯುತ್‌ ಯೋಜನೆಯನ್ನು ಈ ವರ್ಷದಲ್ಲಿ ಕೈಗೊಂಡು 1979ರ ವೇಳೆಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಶ್ರೀ ಎಚ್‌.ಎಂ.
ಚನ್ನಬಸಪ್ಪ ವಿಧಾನಸಭೆಯಲ್ಲಿ ತಿಳಿಸಿದರು.

ಶ್ರೀ ಯು.ಟಿ.ಫರೀದ್‌ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಅದರಿಂದ ಉತ್ಪಾದನೆಯಾಗಬಹುದಾದ ವಿದ್ಯುತ್‌ ಪ್ರಮಾಣ ವರ್ಷವೊಂದಕ್ಕೆ 1,180 ದಶಲಕ್ಷ ಕಿಲೊವಾಟ್‌, ಆದಾಯ ಐದು ಕೋಟಿ ರೂಪಾಯಿ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT