ಮಂಗಳವಾರ, ಮೇ 17, 2022
29 °C

50 ವರ್ಷಗಳ ಹಿಂದೆ: ಬುಧವಾರ, 3.2.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಕ್ ಸೈನ್ಯದ ಸಮ್ಮುಖದಲ್ಲೇ ಅಪಹೃತ ಭಾರತೀಯ ವಿಮಾನ ಭಸ್ಮ

ನವದೆಹಲಿ, ಫೆ. 2– ಶನಿವಾರ ಪಾಕಿಸ್ತಾನಕ್ಕೆ ಅಪಹರಿಸಲಾಗಿದ್ದ ಭಾರತದ ಫಾಕರ್‌ ಫ್ರೆಂಡ್‌ಷಿಪ್ ವಿಮಾನವನ್ನು ಇಂದು ಲಾಹೋರ್‌ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನಿ ಸೈನಿಕರು ಹಾಗೂ ವಿಮಾನ ಸಾರಿಗೆ ಶಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಭಾರತೀಯ ವೇಳೆ ರಾತ್ರಿ 8.33 ಗಂಟೆಯಲ್ಲಿ ಸ್ಫೋಟಿಸಿ ಧ್ವಂಸ ಮಾಡಲಾಯಿತು.

ಸತತವಾಗಿ ಸಿಡಿದ ಮೂರು ಸ್ಫೋಟಗಳು ಹೆಚ್ಚು ಕಡಿಮೆ ಇಡೀ ವಿಮಾನವನ್ನು ಆಹುತಿ ತೆಗೆದುಕೊಂಡವೆಂದು ಹೇಳಲಾಗಿದೆ. ವಿಮಾನ ಪೂರ್ಣವಾಗಿ ಜಖಂಗೊಂಡಿದೆ.

***

ಭಾರತಕ್ಕೆ ಪ್ರತೀ ವಾರ ಸಿಂಹಳದ ಎರಡು ಜೊತೆ ಕಣ್ಣುಗುಡ್ಡೆ

ಬೆಂಗಳೂರು, ಫೆ. 2– ದಕ್ಷಿಣ ಭಾರತದಲ್ಲಿ ನೇತ್ರ ಶಸ್ತ್ರಚಿಕಿತ್ಸೆ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ, ಬೆಂಗಳೂರಿಗೆ ಭಾರತ– ಸಿಂಹಳ ಮೈತ್ರಿ ಮಂಡಲದ ಮೂಲಕ ಸಿಂಹಳದಿಂದ ಈ ವರ್ಷ ನೂರು ಕಣ್ಣು ಗುಡ್ಡೆಗಳು ದೊರೆಯಲಿವೆ.

ಇಂದು ಸಾಯಂಕಾಲ ರಾಜಭವನದಲ್ಲಿ, ಸಿಂಹಳದಿಂದ ನಿನ್ನೆ ಬಂದ ನಾಲ್ಕು ಕಣ್ಣು ಗುಡ್ಡೆಗಳನ್ನುಳ್ಳ ಸಣ್ಣಪೆಟ್ಟಿಗೆಯೊಂದನ್ನು ಬಿಡುಗಡೆ ಮಾಡುವ ಮೂಲಕ, ರಾಜ್ಯಪಾಲ ಶ್ರೀ ಧರ್ಮವೀರ ಅವರು ಈ ಯೋಜನೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಇವುಗಳಲ್ಲಿ ಒಂದು ಜೊತೆ ಗುಡ್ಡೆಗಳನ್ನು ಸೇಂಟ್‌ ಮಾರ್ತಾ ಆಸ್ಪತ್ರೆಗೂ ಇನ್ನೊಂದು ಜತೆಯನ್ನು ಮಿಂಟೊ ಕಣ್ಣಾಸ್ಪತ್ರೆಗೂ
ನೀಡಲಾಗುವುದು.

ಈ ಯೋಜನೆಯಂತೆ, ಈ ಎರಡೂ ಆಸ್ಪತ್ರೆಗಳಿಗೆ ಈ ವರ್ಷ, ಪ್ರತೀ ವಾರದಲ್ಲೂ ತಲಾ ಒಂದೊಂದು ಜೊತೆ ಕಣ್ಣುಗುಡ್ಡೆಗಳು ಸಿಂಹಳದಿಂದ ಬರಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು