ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಭಾನುವಾರ 7-2-1971

Last Updated 6 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಅತಿ ದೀರ್ಘ ನಡಿಗೆಯನಂತರ ಚಂದ್ರಕೋಶದ ಮರುಪ್ರಯಾಣ ಆರಂಭ

ಹೂಸ್ಟನ್, ಫೆ. 6–ಚಂದ್ರನ ಮೇಲೆ ಒಟ್ಟು 8ಗಂಟೆಗೂ ಹೆಚ್ಚುಕಾಲ ನಡೆದು ಚಂದ್ರ ನಡಿಗೆಯಲ್ಲಿ ಅತಿದೀರ್ಘ ದಾಖಲೆ ಸ್ಥಾಪಿಸಿದ ಅಮೆರಿಕದ ಇಬ್ಬರು ಗಗನಯಾತ್ರಿಗಳಿದ್ದ ಚಂದ್ರಕೋಶವು ಇಂದು ಮಧ್ಯರಾತ್ರಿ ಭಾರತೀಯ ವೇಳೆ 12.18ಗಂಟೆಗೆ ಮಾತೃನೌಕೆಯನ್ನು ಸೇರಲು ಚಂದ್ರನನ್ನು ಬಿಟ್ಟು ಹೊರಟಿತು.

ಚಂದ್ರನ ಸುತ್ತ ಕಕ್ಷಾಪಥವನ್ನು ಚಂದ್ರಕೋಶ ಪ್ರವೇಶಿಸಿದೆ.

ಆದರೆ, ಅಪೋಲೊ 14ರ ಗಗನಯಾತ್ರಿಗಳ ಪ್ರಮುಖ ಉದ್ದೇಶವಾಗಿದ್ದ ಚಂದ್ರಗ್ರಹದ ’ನೇಮ್ ಕೋನ್’ ಕಂದರದ ಏರಿಯನ್ನು ಪೂರ್ಣ ಏರಲು ಅವರಿಂದ ಸಾಧ್ಯವಾಗಲಿಲ್ಲ.

ನಾಲ್ಕು ನೂರು ಅಡಿ ಎತ್ತದರದ ಈ ಏರಿಯ ಮೂರನೇ ಎರಡು ಭಾಗದಷ್ಟು ಎತ್ತರವನ್ನು ಅವರು ಮುಟ್ಟುವಷ್ಟರಲ್ಲಿ ಎದೆಬಡಿತ ತೀವ್ರಗೊಂಡಿದ್ದೇ ಅಂಚನ್ನು ಮುಟ್ಟಲು ವಿಫಲರಾದುದಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT