ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ರಾಜಸ್ಥಾನ ಟೀಮಿನ ಮೇಲೆ185 ರನ್‌ ಭಾರಿ ಜಯ

Published 27 ಮಾರ್ಚ್ 2024, 22:56 IST
Last Updated 27 ಮಾರ್ಚ್ 2024, 22:56 IST
ಅಕ್ಷರ ಗಾತ್ರ

ರಾಜಸ್ಥಾನ ಟೀಮಿನ ಮೇಲೆ185 ರನ್‌ ಭಾರಿ ಜಯ

ಜಯಪುರ, ಮಾರ್ಚ್‌ 27– ರಣಜಿ ಟ್ರೋಫಿ ವಿಜಯಿಗಳ ಪಟ್ಟಿಗೆ ಕರ್ನಾಟಕದ ಹೆಸರು ಇಂದು ಸೇರಿತು.

ಜಯಪುರದ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಐದು ದಿನಗಳ ಫೈನಲ್‌ ಪಂದ್ಯದ ನಾಲ್ಕನೇ ದಿನದ ಟೀ ವಿರಾಮ ಅರ್ಧಗಂಟೆ ಇದ್ದಾಗ, ಕರ್ನಾಟಕ ಟೀಮಿನವರು ರಾಜಸ್ಥಾನದ ವಿರುದ್ಧ 185 ರನ್‌ಗಳ ಐತಿಹಾಸಿಕ ವಿಜಯ ಸಾಧಿಸಿದರು.

ಖಾಸಗಿ ಶಾಲೆಗಳ ಸಮರ್ಪಕ ನಿಯಂತ್ರಣಕ್ಕೆ ಖಚಿತ ಕ್ರಮ

ಬೆಂಗಳೂರು, ಮಾರ್ಚ್‌ 27– ಬಹುತೇಕ ಪ್ರಕರಣಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯೂ ಆಡಳಿತಕ್ಕೆ ತಲೆನೋವಾಗಿಯೂ ಉಳಿದು, ಬೆಳೆದಿರುವ ಕರ್ನಾಟಕದ ಖಾಸಗಿ ಶಿಕ್ಷಣ ಶಾಲಾ ವ್ಯವಸ್ಥೆಯು ಶ್ರೀ ಜೆ.ಬಿ. ಮಲ್ಲಾರಾಧ್ಯ ಅವರ ಸಮಿತಿ ತಯಾರಿಸಿದ ಕರಡು ವಿಧೇಯಕದ ಪ್ರಕಾರ ತೀವ್ರ ನಿಯಂತ್ರಣದ ಹದ್ದುಬಸ್ತಿಗೆ ಒಳಪಡುತ್ತದೆ.

ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ವಿಧಾನಮಂಡಲದ ಹೊರಗೂ ಒಳಗೂ ಕೇಳಿಬರುತ್ತಿರುವ ಟೀಕೆಗಳನ್ನು ಅನುಸರಿಸಿ, ಈ ವ್ಯವಸ್ಥೆಯ ಸುಧಾರಣೆಗೆ ಸೂಚಿಸಲು ಕಳೆದ ವರ್ಷ ರಚಿತವಾದ ಹಿರಿಯ ತಜ್ಞ ಶ್ರೀ ಮಲ್ಲಾರಾಧ್ಯ ನೇತೃತ್ವದ ಸಮಿತಿಯು, ಸುಮಾರು 200 ಪುಟಗಳ ವರದಿಯನ್ನು ತಯಾರಿಸಿದೆ.

ವಿಧಾನಮಂಡಲದ ಮುಂದೆ ಬರುವುದ
ಕ್ಕಿಂತ ಮುನ್ನ ವರದಿಯ ಪ್ರಕಟಣೆ ಸಾಧುವಲ್ಲ ಎಂಬ ನಿಲುವನ್ನು ಸರ್ಕಾರ ತಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT