ಕರ್ನಾಟಕ ಎಕ್ಸ್ಪ್ರೆಸ್ ಅಪಘಾತ; ಮೂರು ಮಂದಿ ಸಾವು

ಬೀರೂರು, ಮೇ 14– ಮೀರಜ್– ಬೆಂಗಳೂರು ಕರ್ನಾಟಕ ಎಕ್ಸ್ಪ್ರೆಸ್ನ ಡೀಸೆಲ್ ಎಂಜಿನ್ ಇಂದು ಬೆಳಗಿನ ಜಾವ 3–30ರ ಸಮಯದಲ್ಲಿ ಬೀರೂರು– ಅಜ್ಜಂಪುರ ನಿಲ್ದಾಣಗಳ ಮಧ್ಯೆ ಕಂಬಿ ತಪ್ಪಿದ ಕಾರಣ ಸಂಭವಿಸಿದ ಅನಾಹುತದಲ್ಲಿ ಮೂವರು ಪ್ರಯಾಣಿಕರು ಪ್ರಾಣ ಕಳೆದುಕೊಂಡರು.

ಗಾಯಗೊಂಡ 55 ಪ್ರಯಾಣಿಕರ ಪೈಕಿ ತೀವ್ರ ಪೆಟ್ಟಾಗಿರುವ ಆರು ಜನರನ್ನು ಬೀರೂರು ಆಸ್ಪತ್ರೆಗೆ ಸೇರಿಸಲಾಗಿದೆ.

ಬೆಟ್ಟ ಅಗೆದು ಇಲಿ ಹಿಡಿದಂತೆ?

ಬೆಂಗಳೂರು, ಮೇ 14– ಕಾವೇರಿ ಯೋಜನೆ ಕಾರ್ಯಗತವಾದ ಮೇಲೆ ಬೆಂಗಳೂರು ನಗರದ ನೀರು ಸರಬರಾಜು ನಿರ್ವಹಣೆಗೆ ಪ್ರತ್ಯೇಕ ಮಂಡಳಿಯೊಂದರ ಅಗತ್ಯದ ಬಗ್ಗೆ ಅನೇಕರು ಸಂಶಯ ವ್ಯಕ್ತಪಡಿಸುತ್ತಿದ್ದಂತೆ ಲೋಕೋಪಯೋಗಿ ಸಚಿವ ಚನ್ನಬಸಪ್ಪ ಅವರೇ ಈ ಸಂಶಯ ಬಗೆಹರಿಸಿದರು.

ಮಂಡಳಿಯ ಅಗತ್ಯವಿಲ್ಲವೆಂದು ಕೆಲವು ವಾರಗಳ ಹಿಂದೆ ಚನ್ನಬಸಪ್ಪನವರು ಬಹಿರಂಗವಾಗಿ ಹೇಳಿದಾಗ ಅವರ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಬಹುಮಂದಿ ಸಿದ್ಧರಿದ್ದರು. ಕಾರಣ, ಮಂಡಳಿಗಾಗಿ ವರ್ಷಕ್ಕೆ ಆಗುವ ವೆಚ್ಚ ಸುಮಾರು ಒಂದು ಕೋಟಿ ರೂಪಾಯಿ. ಅದನ್ನು ತೆರಬೇಕಾದವರು ನಾಗರಿಕರು.

ನಗರಸಭೆಯೇ ನೀರು ಸರಬರಾಜನ್ನು ಕೆಲವು ಲಕ್ಷ ರೂಪಾಯಿ ಹೆಚ್ಚಿನ ವೆಚ್ಚದಿಂದ ನಿರ್ವಹಿಸಬಲ್ಲದೆಂಬುದು ಸಾಕಷ್ಟು ಮಂದಿಯ ಅಭಿಪ್ರಾಯ. ಆದರೂ ಈ ಅಭಿಪ್ರಾಯವನ್ನು ಒಪ್ಪದೆ, ಮಂಡಳಿಯ ಅಗತ್ಯವಿದೆಯೆಂದು ಸದುದ್ದೇಶದಿಂದಲೆ ಹೇಳುವವರೂ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.