ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಎಸ್ಸೆಸ್ಸೆಲ್ಸಿ ಪರೀಕ್ಷೆ: ದಂಡ ರದ್ದು ಬಗ್ಗೆ ಪರಿಶೀಲನೆ

Published 24 ಮೇ 2024, 23:30 IST
Last Updated 24 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು, ಮೇ 24– ಶೇಕಡ 20ಕ್ಕಿಂತ ಕಡಿಮೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಬರುವ ಖಾಸಗಿ ಶಾಲೆಗಳಿಗೆ ವಿಧಿಸಲಾಗುತ್ತಿರುವ ದಂಡವನ್ನು ರದ್ದುಗೊಳಿಸುವ ಸಾಧ್ಯತೆ ಬಗ್ಗೆ ಸರ್ಕಾರ ಪರಿಶೀಲಿಸುವುದು ಎಂದು ಶಾಲಾ ಶಿಕ್ಷಣ ರಾಜ್ಯ ಮಂತ್ರಿ ಈವಾವಾಜ್‌ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಈ ಸಂಬಂಧದಲ್ಲಿ ಮಳ್ಳೂರು ಆನಂದರಾಯರು ಎತ್ತಿದ ಚರ್ಚೆಗೆ ಉತ್ತರ ನೀಡಿದ ವಾಜ್ ಅವರು, ತೀರಾ ಕಳಪೆ ಫಲಿತಾಂಶ ಬರುವ ಶಾಲೆಗಳನ್ನು ಸುಧಾರಿಸಲು ಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.

ಪರೀಕ್ಷೆಗಳಲ್ಲಿ ಕಾಪಿ ಹೊಡೆಯುವ ಪದ್ಧತಿ ತಪ್ಪಿಸಲು ಪರೀಕ್ಷೆಗಾಗಿ ಒಂದು ಶಾಲೆಯ ವಿದ್ಯಾರ್ಥಿಗಳನ್ನು ಇನ್ನೊಂದು ಕೇಂದ್ರಕ್ಕೆ ಕಳುಹಿಸುವ, ಶಿಕ್ಷಕರನ್ನು ಪರೀಕ್ಷಕರಾಗಿ ಬೇರೆ ಶಾಲೆಗಳಿಗೆ ಕಳುಹಿಸುವ ಪ್ರಯೋಗಗಳು ನಡೆಯುತ್ತಿವೆ ಎಂದರು.

ಆನಂದರಾಯರು ತಮ್ಮ ಭಾಷಣದಲ್ಲಿ, ಪರೀಕ್ಷಾ ದಂಡಗಳ ಹೆದರಿಕೆಯಿಂದಾಗಿ ಖಾಸಗಿ ಶಾಲೆಗಳಲ್ಲಿ ಕಾಪಿ ಹೊಡೆದು ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಅಭ್ಯಾಸ ಬೆಳೆಯುತ್ತಿದೆ ಎಂದು ಆಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT