ಕಾವೇರಿ ಯೋಜನೆಗಳಿಗೆ ಒಪ್ಪಿಗೆ ಕೊಡಿಸಲು ಮಧ್ಯಪ್ರವೇಶಕ್ಕೆ ಕರೆ

ಬೆಂಗಳೂರು, ನ. 2– ಕಾವೇರಿ ಪ್ರಶ್ನೆಯನ್ನು ಪಂಚಾಯಿತಿಗೆ ಒಪ್ಪಿಸುವುದನ್ನು ‘ಈ ಘಟ್ಟದಲ್ಲಿ’ ಕೇಂದ್ರ ಸರ್ಕಾರ ಯೋಚಿಸಬಾರದೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಪ್ರಧಾನಿ ಅವರನ್ನು ಒತ್ತಾಯ ಮಾಡಿದ್ದಾರೆ.

ಮುಖ್ಯಮಂತ್ರಿಯವರು ಇಂದು ಪ್ರಧಾನಿಗೆ ಬರೆದ ಪತ್ರದಲ್ಲಿ, ಪ್ರಧಾನಿ ಮಧ್ಯೆ ಪ್ರವೇಶಿಸಿ ಕಾವೇರಿ ಯೋಜನೆಗಳಿಗೆ ಕೇಂದ್ರ ಮಂಜೂರಾತಿ ನೀಡುವುದರಲ್ಲಿ ಮೈಸೂರು ರಾಜ್ಯದ ಜನತೆಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರಾರ್ಥಿಸಿದ್ದಾರೆ.

ಸಾಹಿತಿ– ಕಲಾವಿದರಿಗೆ ನಾಡಿನ ಕೃತಜ್ಞತೆ

ಬೆಂಗಳೂರು, ನ. 2– ನಶಿಸಿ ಹೋಗಬಹುದಾಗಿದ್ದ ಕಲೆಯನ್ನು ‘ಉಪವಾಸವನ್ನಾದರೂ ಮಾಡಿ’ ಉಳಿಸಿ ಬೆಳೆಸಿಕೊಂಡು ಬಂದ ಕಲಾವಿದರಿಗೆ ಗೌರವ ಪ್ರಶಸ್ತಿಗಳನ್ನು ಸಲ್ಲಿಸುವ ಮೂಲಕ ಇಂದು ನಾಡಿನ ಕೃತಜ್ಞತೆಯನ್ನು ಅರ್ಪಿಸಲಾಯಿತು.

ರಾಜ್ಯ ಸಾಹಿತ್ಯ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿ ಮತ್ತು ಲಲಿತ ಕಲಾ ಅಕಾಡೆಮಿ ಸಂಯುಕ್ತವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿರಾಜ್ಯಪಾಲ ಶ್ರೀ ಧರ್ಮವೀರರವರು ಇಪ್ಪತ್ತು ಮಂದಿ ಸಾಹಿತಿಗಳು, ಕಲಾವಿದರಿಗೆ ಪ್ರಶಸ್ತಿಗಳನ್ನು ವಿನಿಯೋಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.