ಶನಿವಾರ, ಮೇ 28, 2022
31 °C

50 ವರ್ಷಗಳ ಹಿಂದೆ: ಶನಿವಾರ, ಡಿಸೆಂಬರ್ 25, 1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆರವು ನಿಲ್ಲಿಸುವ ಬೆದರಿಕೆಗೆ ಭಾರತ ಮಣಿಯದು: ಇಂದಿರಾ
ಅಂಬಾಲಾ, ಡಿ.24–
ಭಾರತದ ವ್ಯವಹಾರಗಳಲ್ಲಿ ವಿದೇಶಗಳು ಹಸ್ತಕ್ಷೇಪ ಮಾಡಿದರೆ ಅದನ್ನು ಎಂದಿಗೂ ಸಹಿಸಲಾಗದು ಎಂದು ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಎಚ್ಚರಿಕೆ ನೀಡಿದರು.

ಇಲ್ಲಿ ಬೃಹತ್‌ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ‘ಕೆಲವು ವಿದೇಶ ಸರ್ಕಾರಗಳು ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಆದರೆ ಈಗ ಕಾಲ ಬದಲಾಗಿದೆ. ಈ ಹಸ್ತಕ್ಷೇಪವನ್ನು ಭಾರತ ಸಹಿಸುವುದಿಲ್ಲ’ ಎಂದರು. ವಿದೇಶಿ ನೆರವು ನಿಲ್ಲಿಸುವ ಬೆದರಿಕೆ ಭಾರತದ ಮೇಲೆ ಯಾವ ಪರಿಣಾಮವನ್ನೂ ಬೀರದು ಎಂದೂ ಅವರು ಸ್ಪಷ್ಟಪಡಿಸಿದರು.

ಇತ್ತೀಚಿನ ಭಾರತ– ಪಾಕ್‌ ಘರ್ಷಣೆಯ ಸಂದರ್ಭದಲ್ಲಿ ಮತ್ತು ಆನಂತರದ ಪರಿಸ್ಥಿತಿಯ ಬೆಳವಣಿಗೆ ದೃಷ್ಟಿಯಿಂದ ತನ್ನ ಅಂತರರಾಷ್ಟ್ರೀಯ ಬಾಂಧವ್ಯದ ಸ್ವರೂಪವನ್ನು ಭಾರತವು ಪುನರ್‌ ವಿಮರ್ಶಿಸಬೇಕಾಗುತ್ತದೆ ಎಂದೂ ಇಂದಿರಾ ಗಾಂಧಿ ಅವರು ಸೂಚಿಸಿದರು.

ಬಾಂಗ್ಲಾ ದೇಶಕ್ಕಾಗಿ ಕಾಶ್ಮೀರ ಬಿಟ್ಟುಕೊಡುವ ಪ್ರಶ್ನೆ ಇಲ್ಲ: ಸ್ವರಣ್‌ ಸಿಂಗ್‌ ಸ್ಪಷ್ಟನೆ
ಲಂಡನ್‌, ಡಿ. 24–
ಬಾಂಗ್ಲಾದೇಶಕ್ಕಾಗಿ ಕಾಶ್ಮೀರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲವೆಂದು ಭಾರತದ ವಿದೇಶಾಂಗ ಸಚಿವ ಸ್ವರಣ್‌ ಸಿಂಗ್‌ ಅವರು ಇಲ್ಲಿ ತಿಳಿಸಿದರು.

ಜಮ್ಮು–ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಶ್ಚಿಮ ಪಾಕಿಸ್ತಾನ ಇದನ್ನು ಒಪ್ಪಿಕೊಳ್ಳಬೇಕು ಎಂದು ಅವರು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

ಪಾಕಿಸ್ತಾನದಲ್ಲಿ ವಯಸ್ಕರ ಮತದಾನ ಪದ್ಧತಿ ಆಧಾರದ ಮೇಲೆ ಅನೇಕ ಚುನಾವಣೆಗಳು ನಡೆದಿವೆ. ಪಶ್ಚಿಮ ಪಾಕಿಸ್ತಾನಕ್ಕೆ ಕಾಶ್ಮೀರದ ಮೇಲೆ ನೈತಿಕ ಅಥವಾ ಕಾನೂನಿನ ಹಕ್ಕೇನೂ ಇಲ್ಲವೆಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು