ಭದ್ರತಾ ಸಮಿತಿ ಸಭೆಯಲ್ಲಿ ರಷ್ಯಾದಿಂದ 44ನೇ ‘ವೀಟೊ’

ಲೇಕ್ ಸಕ್ಸಸ್, ಸೆ. 7: ಸೋವಿಯತ್ ರಷ್ಯಾದ ಪ್ರತಿನಿಧಿ ಜೇಕಬ್ ಮಲಿಕ್ ಅವರು ಕಳೆದ ರಾತ್ರಿ ನಡೆದ ಭದ್ರತಾ ಸಮಿತಿ ಸಭೆಯಲ್ಲಿ, ಉತ್ತರ ಕೊರಿಯಾಕ್ಕೆ ವಿವಿಧ ದೇಶಗಳು ನೆರವು ನೀಡುವುದನ್ನು ತಡೆಯುವ ಕುರಿತು ಅಮೆರಿಕ ಮಂಡಿಸಿದ ನಿರ್ಣಯದ ವಿರುದ್ಧ ‘ವೀಟೊ’ ಚಲಾಯಿಸಿದರು. ಇದರೊಂದಿಗೆ ಭದ್ರತಾ ಸಮಿತಿಯಲ್ಲಿ ರಷ್ಯಾ 44ನೇ ಬಾರಿ ವೀಟೊ ಚಲಾಯಿಸಿದಂತಾಗಿದೆ.

ವಿಶ್ವಸಂಸ್ಥೆಯ ವಿರುದ್ಧ ಉತ್ತರ ಕೊರಿಯನ್ನರು ನಿರಂತರವಾಗಿ ವ್ಯಕ್ತಪಡಿಸುತ್ತಿರುವ ಅಸಮ್ಮತಿ ಕುರಿತಾದ ಖಂಡನೆಯನ್ನೂ ಅಮೆರಿಕ ಮಂಡಿಸಿದ್ದ ನಿರ್ಣಯ ಒಳಗೊಂಡಿತ್ತು. ನಿರ್ಣಯದ ಪರವಾಗಿ ಒಂಬತ್ತು ದೇಶಗಳು ಹಾಗೂ ವಿರುದ್ಧವಾಗಿ ರಷ್ಯಾ ಮತ ಚಲಾಯಿಸಿದವು. ಯುಗೊಸ್ಲೋವಿಯಾ ಮತದಾನದಿಂದ ದೂರ ಉಳಿದಿತ್ತು.

ಚುನಾವಣೆ ನಡೆಸುವ ಪ್ರಯತ್ನ ಕೈಬಿಟ್ಟಿಲ್ಲ

ಕಟಕ್, ಸೆ. 7: ಭಾರತದ ಚುನಾವಣಾ ಆಯೋಗದ ಆಯುಕ್ತ ಸುಕುಮಾರ್ ಸೇನ್, 1951ರ ಏಪ್ರಿಲ್–ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವ ತಮ್ಮ ಪ್ರಯತ್ನಗಳನ್ನು ಕೈಬಿಟ್ಟಿಲ್ಲ ಎಂದು ತಿಳಿಸಿದರು. ಏಪ್ರಿಲ್–ಮೇ ತಿಂಗಳಲ್ಲಿ ಚುನಾವಣೆ ನಡೆಸುವುದು ಆಯೋಗದ ಗುರಿಯಾಗಿದೆ. ಆದರೆ, ರಾಜ್ಯ ಮತ್ತು ಪಾರ್ಲಿಮೆಂಟರಿ ಡಿಲಿಮಿಟೇಷನ್ ಸಮಿತಿಗಳಿಂದ ಮತದಾರರ ಪಟ್ಟಿಗಳು ಇನ್ನೂ ಆಯೋಗದ ಕೈಸೇರಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.