ರಾಜ್ಯದಲ್ಲಿ ‘ಡಾಟ್ನೆಟ್’ ಪ್ರಯೋಗಾಲಯ

ನವದೆಹಲಿ, ಸೆಪ್ಟೆಂಬರ್ 14– ಬೆಂಗಳೂರಿನಲ್ಲಿ ‘ಡಾಟ್ನೆಟ್’ ಪ್ರಯೋಗಾಲಯವನ್ನು ಸ್ಥಾಪಿಸಲು ನಿರ್ಧರಿಸಿರುವ ಮೈಕ್ರೋಸಾಫ್ಟ್ ಕಂಪನಿಯ ಅಧ್ಯಕ್ಷ ಬಿಲ್ ಗೇಟ್ಸ್ ಅವರು, ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ, ಏಕರೂಪದ ಕನ್ನಡ ಸಾಫ್ಟ್ವೇರ್ ರಚನೆ ಹಾಗೂ ಕೃಷಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನದ ಬಳಕೆ ಕುರಿತು ಕರ್ನಾಟಕ ರಾಜ್ಯದ ಯೋಜನೆಗಳ ಬಗ್ಗೆ ತೀವ್ರ ಆಸಕ್ತಿ ವ್ಯಕ್ತಪಡಿಸಿದ್ದಾರೆ.

‘ಡಾಟ್ನೆಟ್’ ಪ್ರಯೋಗಾಲಯ ಸ್ಥಾಪನೆಯ ನಿರ್ಧಾರವನ್ನು ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ ಗೇಟ್ಸ್ ಅವರೇ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಮಹಡಿಯಿಂದ ಹಾರಿ ಎಂಜಿನಿಯರ್ ಸಾವು

ಬೆಂಗಳೂರು, ಸೆಪ್ಟೆಂಬರ್ 14– ಕಂಪ್ಯೂಟರ್ ಎಂಜಿನಿಯರ್ ಒಬ್ಬರು ಎಂ.ಜಿ. ರಸ್ತೆಯ ರಹೇಜಾ ಟವರ್ಸ್ನ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೂಲತಃ ಚೆನ್ನೈನವರಾದ ಜೆ. ಸ್ವಾಮಿನಾಥನ್ (26) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಈತ ಕೋರಮಂಗಲದಲ್ಲಿರುವ ರಾಬರ್ಟ್ ಬಷ್ ಎಂಬ ಸಾಫ್ಟ್ವೇರ್ ಅಭಿವೃದ್ಧಿ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿದ್ದ. ಎಚ್ಎಎಲ್ ಸಮೀಪದ ಶಾಸ್ತ್ರಿನಗರದಲ್ಲಿ ವಾಸವಾಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.