ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ಮಂಗಳವಾರ 2-12-1997

Last Updated 1 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಸರ್ಕಾರ ರಚನೆಗೆ ಅವಕಾಶ: ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ

ನವದೆಹಲಿ, ಡಿ. 1– ಕೇಂದ್ರದಲ್ಲಿ ಸರ್ಕಾರ ರಚಿಸಲು ತನಗೊಂದು ಅವಕಾಶ ನೀಡುವಂತೆ ಕಾಂಗ್ರೆಸ್ ಪಕ್ಷವು ಇಂದು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರಿಗೆ ಮನವಿ ಮಾಡಿದೆ.

ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ಸಿನ ಏಳು ಸದಸ್ಯರ ನಿಯೋಗವೊಂದು ರಾಷ್ಟ್ರಪತಿ ಅವರನ್ನು ಇಂದು ರಾತ್ರಿ ಭೇಟಿ ಮಾಡಿ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿತು.

ಸಂಯುಕ್ತರಂಗ ಮತ್ತು ಬಿಜೆಪಿಗೆ ಈ ಹಿಂದೆ ಸರ್ಕಾರ ರಚಿಸಲು ಅವಕಾಶ ನೀಡಿರುವುದರಿಂದ ಈ ಬಾರಿ ತನಗೆ ಅವಕಾಶ ನೀಡುವಂತೆ ರಾಷ್ಟ್ರಪತಿಯವರನ್ನು ಕಾಂಗ್ರೆಸ್ ಕೋರಿತು.

ಪಕ್ಷ ಬಿಟ್ಟು ಬನ್ನಿ: ಕಾಂಗ್ರೆಸ್ ಸಂಸದರಿಗೆ ಅಟಲ್ ಕರೆ

ನವದೆಹಲಿ, ಡಿ.1 (ಯುಎನ್ಐ)– ‘ಹೊಸ ಚುನಾವಣೆಯನ್ನು ತಡೆಯಬೇಕು ಅನ್ನುವುದೇ ಆದರೆ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯರು ತಮ್ಮ ಮಾತೃಪಕ್ಷ ತೊರೆದು ಬಿಜೆಪಿ ನೇತೃತ್ವದ ಸರ್ಕಾರವನ್ನು ಬೆಂಬಲಿಸಬೇಕು’ ಎಂದು ಭಾರತೀಯ ಜನತಾ ಪಕ್ಷ ಇಂದು ಬಹಿರಂಗ ಕರೆ ನೀಡಿದೆ.

‘ಕೇಂದ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್‌ನ ಹಲವರು ಹಾಗೂ ಇತರೆ ಪಕ್ಷಗಳ ಕೆಲವು ಲೋಕಸಭಾ ಸದಸ್ಯರು ತಮ್ಮೊಂದಿಗೆ ಸಂಪರ್ಕವಿಟ್ಟುಕೊಂಡಿದ್ದಾರೆ’ ಎಂದು ಬಿಜೆಪಿ ನಾಯಕ ಎ.ಬಿ. ವಾಜಪೇಯಿ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT