ಭಾನುವಾರ, ಅಕ್ಟೋಬರ್ 24, 2021
20 °C
25 ವರ್ಷಗಳ ಹಿಂದೆ ಬುಧವಾರ 02.10.1996

25 ವರ್ಷಗಳ ಹಿಂದೆ ಬುಧವಾರ 02.10.1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಮೂರ್ತಿ ಅಹ್ಮದಿ– ಪ್ರಧಾನಿ ‘ಮಧ್ಯರಾತ್ರಿ’ ಭೇಟಿಗೆ ಪ್ರತಿಭಟನೆ

ನವದೆಹಲಿ, ಅ. 1 (ಪಿಟಿಐ)– ಹಲವಾರು ಪ್ರಮುಖ ರಾಜಕೀಯ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನಲಾದ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಯುತ್ತಿರುವಾಗ, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎ.ಎಂ.ಅಹ್ಮದಿ ಅವರು ಪ್ರಧಾನಿ ಎಚ್‌.ಡಿ. ದೇವೇಗೌಡ ಅವರನ್ನು ಮಧ್ಯರಾತ್ರಿ ವೇಳೆ ‘ನಿಗೂಢ’ವಾಗಿ ಭೇಟಿಯಾಗಿರುವುದನ್ನು ಸುಪ್ರೀಂ ಕೋರ್ಟ್ ವಕೀಲರ ಸಂಘದ 200 ಸದಸ್ಯರು ಪ್ರತಿಭಟಿಸಿದ್ದಾರೆ.

ನ್ಯಾಯಮೂರ್ತಿ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿದ ವಿಷಯದ ಚರ್ಚೆಗೆ ಸಂಘದ ತುರ್ತು ಸರ್ವ ಸಾಮಾನ್ಯ ಸಭೆಯನ್ನು ಕರೆಯಬೇಕೆಂದು ವಕೀಲರು ಆಗ್ರಹಿಸಿದ್ದಾರೆ. ಸಭೆಯಲ್ಲಿ ಮಂಡಿಸಲಾಗುವ ನಿರ್ಣಯದ ಕರಡು ಪ್ರತಿಯನ್ನು ಇಂದು ಸಂಘದ ಸದಸ್ಯರಿಗೆ ವಿತರಿಸಲಾಗಿದ್ದು, ‘ಮಧ್ಯರಾತ್ರಿಯಲ್ಲಿ ಪ್ರಧಾನಿ ಅವರೊಂದಿಗೆ ನ್ಯಾಯಮೂರ್ತಿ ಅವರ ಭೇಟಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಪ್ರಶ್ನಿಸುತ್ತದೆ’ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ದಂತ ಕಾಲೇಜು: ಹೈಕೋರ್ಟ್ ಕಟ್ಟಪ್ಪಣೆ

ಬೆಂಗಳೂರು, ಅ. 1–ರಾಜ್ಯದಲ್ಲಿರುವ 41 ದಂತವೈದ್ಯ ಕಾಲೇಜುಗಳಲ್ಲಿ 17 ಕಾಲೇಜು ಗಳಲ್ಲಿ ಕೊರತೆಯಿರುವ ಮೂಲಸೌಲಭ್ಯಗಳನ್ನು ಹಾಗೂ ಭಾರತೀಯ ದಂತವೈದ್ಯ ಮಂಡಳಿ ವಿಧಿಸಿರುವ ಷರತ್ತುಗಳನ್ನು ಕೂಡಲೇ ಪೂರೈಸ ದಿದ್ದಲ್ಲಿ ಅವುಗಳಿಗೆ ಈ ವರ್ಷ ಪ್ರವೇಶ ನೀಡ ಕೂಡದು ಎಂದು ಹೈಕೋರ್ಟ್ ಇಂದು ಆದೇಶಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು