ಬಯಸಿದ್ದನ್ನೆಲ್ಲ ಹಣ ಕೊಡಿಸದು!

ಲಕ್ನೋ, ಜುಲೈ 30– ಉಕ್ಕಿನ ರಹದಾರಿಗಾಗಿ ಸರಬರಾಜು ಸಚಿವ ಸಿ.ಬಿ. ಗುಪ್ತ ಅವರಿಗೆ ರುಜು ಹಾಕಿದ ಖಾಲಿ ಚೆಕ್ಕನ್ನು ಕಳಿಸಿದ್ದ ಬಾರಾಬಂಕಿ ವರ್ತಕರೊಬ್ಬರು ಇಂದು ನ್ಯಾಯಾಸ್ಥಾನದಲ್ಲಿ ವಿಚಾರಣೆಗೊಳಗಾಗಿದ್ದಾರೆ.

ಈ ವರ್ತಕ ರಹದಾರಿಗೆ ಅರ್ಜಿ ಹಾಕಿದರಂತೆ. ವರ್ಷವಾದರೂ ಉತ್ತರ ಬರಲಿಲ್ಲ. ಆ ನಂತರ ಈತ ಸಹಿ ಹಾಕಿದ ಖಾಲಿ ಚೆಕ್ಕನ್ನು ಉತ್ತರ ಪ್ರದೇಶ ಸರ್ಕಾರದ ಹೆಸರಿಗೆ ಬರೆದು ಒಂದು ಪತ್ರವೊಂದಿಗೆ ಕಳಿಸಿದರಂತೆ.

ಸಚಿವರು ಈ ಸಂಗತಿಯನ್ನು ಪೊಲೀಸರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.